ಬೈಕ್'ಗಳಲ್ಲಿರುವ ಚೈನ್ ಗಾರ್ಡ್‌ಗಳಿಂದಾಗುವ ಪ್ರಯೋಜನಗಳಿವು
ಬೈಕ್ ಗಳಿಗೆ ಚೈನ್ ಗಾರ್ಡ್ ಅತ್ಯಗತ್ಯ. ಈ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಚೈನ್ ಗಾರ್ಡ್‌ಗಳು ಬೈಕ್ ಸವಾರರನ್ನು ವಿವಿಧ ಸಮಸ್ಯೆಗಳಿಂದ ರಕ್ಷಿಸುತ್ತವೆ. ಚೈನ್ ಗಾರ್ಡ್‌ಗಳು ಬೈಕ್ ಸವಾರರಿಗೆ ಸುರಕ್ಷಿತವಾದ ಸವಾರಿಯನ್ನು ನೀಡಲು ನೆರವಾಗುತ್ತವೆ. ಆದರೆ ಚೈನ್ ಗಾರ್ಡ್‌ಗಳ ಮಹತ್ವದ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ.

ಬೈಕ್ ಗಳಿಗೆ ಚೈನ್ ಗಾರ್ಡ್ ಏಕೆ ಮುಖ್ಯ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ನೀವು ಸಹ ಬೈಕ್ ಸವಾರರಾಗಿದ್ದರೆ ಈ ಸಂಗತಿಗಳು ನಿಮಗೂ ಉಪಯುಕ್ತವಾಗ ಬಹುದು. ಮೊದಲನೆಯದಾಗಿ, ಚೈನ್ ಗಾರ್ಡ್‌ಗಳು ಬೈಕಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಎಲ್ಲಾ ಬೈಕ್ ಸವಾರರಿಗೂ ತಮ್ಮ ಬೈಕ್ ಆಕರ್ಷಕವಾಗಿ ಕಾಣಬೇಕು ಎಂಬ ಆಸೆ ಇರುತ್ತದೆ. ರಸ್ತೆಯಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬರೂ ತಮ್ಮ ಬೈಕ್ ಅನ್ನು ನೋಡಬೇಕೆಂದು ಬೈಕ್ ಸವಾರರು ಬಯಸುತ್ತಾರೆ.

ಅಂತಹ ಬೈಕ್ ಸವಾರರಿಗೆ ಚೈನ್ ಗಾರ್ಡ್‌ಗಳು ಸೂಕ್ತವಾಗಿವೆ. ಎರಡನೆಯದಾಗಿ ಬೈಕ್ ಸವಾರನ ಉಡುಪುಗಳನ್ನು ರಕ್ಷಿಸಲು ಚೈನ್ ಗಾರ್ಡ್‌ಗಳು ನೆರವಾಗುತ್ತವೆ. ಚೈನ್ ಗಾರ್ಡ್‌ಗಳು ಬೈಕ್ ಸವಾರರ ಪ್ಯಾಂಟ್ ಕೊಳೆಯಾಗದಂತೆ ನೋಡಿಕೊಳ್ಳುತ್ತವೆ. ಭಾರತದ ರಸ್ತೆಗಳು ಮಳೆಗಾಲದಲ್ಲಿ ಮಳೆ ನೀರು ಹಾಗೂ ಕೆಸರಿನಿಂದ ಕೂಡಿರುತ್ತವೆ. ಜೊತೆಗೆ ರಸ್ತೆಗಳು ಕಸದಿಂದ ತುಂಬಿರುತ್ತವೆ.

ಇಂತಹ ರಸ್ತೆಗಳಲ್ಲಿ ಬೈಕ್ ಚಾಲನೆ ಮಾಡುವಾಗ ಬೈಕ್ ಸವಾರನ ಬಟ್ಟೆ ಕೊಳೆಯಾಗುತ್ತದೆ. ಚೈನ್ ಗಾರ್ಡ್ ಈ ಕೊಳಕಿನಿಂದ ಬೈಕ್ ಸವಾರನನ್ನು ರಕ್ಷಿಸುತ್ತದೆ. ಇದರ ಜೊತೆಗೆ ಬೈಕ್ ಚೈನ್ ಗಳಲ್ಲಿ ಆಯಿಲ್ ಬಳಸಲಾಗುತ್ತದೆ. ಇದರಿಂದಲೂ ಬೈಕ್ ಸವಾರರ ಬಟ್ಟೆ ಕೊಳಕಾಗುತ್ತದೆ. ಚೈನ್ ಗಾರ್ಡ್ ಇದರಿಂದ ಬೈಕ್ ಸವಾರರನ್ನು ರಕ್ಷಿಸುತ್ತದೆ.

ಬೈಕಿನಲ್ಲಿ ಚೈನ್ ಗಾರ್ಡ್ ಇಲ್ಲದಿದ್ದರೆ, ಸವಾರನ ಕಾಲಿಗೆ ಗಾಯವಾಗುವ ಸಾಧ್ಯತೆಗಳಿರುತ್ತವೆ. ಬೈಕಿನ ಚೈನ್ ಪಕ್ಕದಲ್ಲಿ ಕಾಲನ್ನು ಇಡುತ್ತಿದ್ದರೆ ಗಾಯಗಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗೆಯೇ ಪ್ಯಾಂಟ್ ಹಾಗೂ ಇನ್ನಿತರ ಉಡುಗೆಗಳು ಬೈಕ್ ಚೈನಿಗೆ ಸಿಲುಕಿ ಹಾಳಾಗುವ ಸಾಧ್ಯತೆಗಳಿರುತ್ತವೆ. ಬೈಕ್ ಚೈನ್ ನಲ್ಲಿ ಯಾವುದೇ ವಸ್ತುಗಳು ಸಿಲುಕಿದರೂ ಸಮಸ್ಯೆಗಳು ಉಂಟಾಗುತ್ತವೆ.

ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಬೈಕಿನಲ್ಲಿ ಚೈನ್ ಗಾರ್ಡ್ ಹೊಂದುವುದು ಅತ್ಯಗತ್ಯ. ಚೈನ್ ಗಾರ್ಡ್ ಸವಾರರ ಕಾಲು ಹಾಗೂ ಬಟ್ಟೆಗಳನ್ನು ಚೈನ್ ನಿಂದ ರಕ್ಷಿಸುವುದಲ್ಲದೆ, ಬೈಕಿನ ಇತರ ಭಾಗಗಳಿಗೆ ಚೈನ್ ಆಯಿಲ್ ಹರಡುವುದನ್ನು ತಡೆಯುತ್ತದೆ. ಇದರಿಂದ ಬೈಕ್ ಅನ್ನು ಸ್ವಚ್ಛವಾಗಿಟ್ಟು ಕೊಳ್ಳಬಹುದು.

ಬೈಕ್ ಸವಾರರು ತಮ್ಮಿಷ್ಟದ ಚೈನ್ ಗಾರ್ಡ್‌ನೊಂದಿಗೆ ತಮ್ಮ ಬೈಕ್ ಅನ್ನು ಕಸ್ಟಮೈಸ್ ಮಾಡಬಹುದು. ಆಫ್ಟರ್ ಮಾರ್ಕೆಟ್ ಚೈನ್ ಗಾರ್ಡ್‌ಗಳು ವಿವಿಧ ಆಕಾರ, ಹಾಗೂ ಬಣ್ಣಗಳಲ್ಲಿ ದೊರೆಯುತ್ತವೆ. ಬೈಕ್ ಅನ್ನು ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳೊಂದಿಗೆ ಕಸ್ಟಮೈಸ್ ಮಾಡುವಾಗ ಮೋಟಾರ್ ವಾಹನ ಕಾಯ್ದೆಯ ನಿಯಮಗಳನ್ನು ಅನುಸರಿಸುವುದು ಒಳ್ಳೆಯದು. ಇಲ್ಲದಿದ್ದರೆ ಅನಗತ್ಯವಾಗಿ ತೊಂದರೆಗೆ ಸಿಲುಕುವ ಸಾಧ್ಯತೆಗಳಿರುತ್ತವೆ.

ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ದ್ವಿಚಕ್ರ ವಾಹನ ಕಳ್ಳತನವೂ ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಯಾರಾದರೂ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ ಅವರ ಬೈಕ್ ಕಳ್ಳತನವಾಗಿರುತ್ತದೆ.

ಇನ್ನು ಕೆಲವು ಬಾರಿ ಮನೆಯ ಮುಂಭಾಗದಿಂದಲೇ ಬೈಕುಗಳ ಕಳ್ಳತನವಾಗಿರುತ್ತದೆ. ಬೈಕ್ ಕದಿಯಲು ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಬೈಕ್ ಕಳ್ಳತನವಾಗುವುದನ್ನು ತಡೆಯಬಹುದು. ಬೈಕ್ ಕಳ್ಳತನವಾಗುವುದನ್ನು ತಡೆಯಲು ಚೈನ್ ಹಾಗೂ ಲಾಕ್'ಗಳನ್ನು ಬಳಸಬೇಕು. ಬೈಕಿನಲ್ಲಿ ಎಲ್ಲಿಗೆ ಹೋದರೂ ಸ್ಟೀಲ್ ಚೈನ್'ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ ಲಾಕ್ ಮಾಡುವುದು ಒಳ್ಳೆಯದು.

ಬೈಕ್ ಪಾರ್ಕ್ ಮಾಡಿದ ನಂತರ ಚೈನ್ ಬಳಸಿ ಬೈಕಿನ ವ್ಹೀಲ್'ಗೆ ಕಟ್ಟಿ. ಇದರಿಂದ ಬೈಕಿನ ವ್ಹೀಲ್ ಚೈನ್'ನಲ್ಲಿ ಸಿಲುಕಿಕೊಳ್ಳುತ್ತದೆ. ಚೈನ್ ಬಳಸಿ ಬೈಕಿನ ಎರಡೂ ಬದಿಯ ವ್ಹೀಲ್'ಗಳನ್ನು ಲಾಕ್ ಮಾಡಿದರೆ ಇನ್ನೂ ಒಳ್ಳೆಯದು. ಬೈಕ್ ಅನ್ನು ಬೈಕ್ ಕಳ್ಳರಿಂದ ಕಾಪಾಡಿಕೊಳ್ಳಲು ಇದು ಸುರಕ್ಷಿತ ಮಾರ್ಗವಾಗಿದೆ.

ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದ್ದರೆ ಚೈನ್ ಹಾಗೂ ಲಾಕ್ ಅನ್ನು ಪ್ರತ್ಯೇಕವಾಗಿ ಕೊಂಡೊಯ್ಯುವ ಅಗತ್ಯವಿಲ್ಲ. ಡಿಸ್ಕ್ ಬ್ರೇಕ್‌ಗಳಲ್ಲಿರುವ ಲಾಕ್ ಚಿಕ್ಕದಾಗಿರುವ ಕಾರಣ ಅವುಗಳನ್ನು ಬೈಕಿನ ಸ್ಟೋರೇಜ್ ಸ್ಪೇಸ್'ನಲ್ಲಿ ಸುಲಭವಾಗಿ ಇಡಬಹುದು. ಡಿಸ್ಕ್ ಲಾಕ್ ಅನ್ನು ಹೊರತುಪಡಿಸಿ ಯು ಲಾಕ್ ಅಥವಾ ಪ್ಯಾಡ್ ಲಾಕ್'ಗಳನ್ನು ಸಹ ಬಳಸಬಹುದು. ಡಿಸ್ಕ್ ಲಾಕ್ ಬ್ರೇಕ್'ಗಳನ್ನು ಬೈಕಿನ ಎರಡೂ ವ್ಹೀಲ್'ಗಳಿಗೆ ಅಳವಡಿಸಿದರೆ ಬೈಕ್ ಕದಿಯುವುದಕ್ಕೆ ಕಷ್ಟವಾಗುತ್ತದೆ. ಬೈಕ್'ಗಳನ್ನು ರಕ್ಷಿಸಿಕೊಳ್ಳಲು ಡಿಸ್ಕ್ ಲಾಕ್ ಉತ್ತಮ ಆಯ್ಕೆಯಾಗಿದೆ.

ಬೈಕುಗಳನ್ನು ಸುರಕ್ಷಿತವಾಗಿಡಲು ತಂತ್ರಜ್ಞಾನಗಳಿಗೇನು ಕೊರತೆಯಿಲ್ಲ. ಬೈಕ್‌ಗಳಲ್ಲಿ ಆ್ಯಂಟಿ ಥೆಫ್ಟ್ ಅಲಾರಂ ಬಳಸಬಹುದು. ಈ ಅಲಾರಂ ವೈರ್'ಲೆಸ್ ಸೆನ್ಸಾರ್'ಗಳ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಈ ಅಲಾರಂ ಅಳವಡಿಸಿದರೆ ಬೈಕ್‌ನ ಹ್ಯಾಂಡಲ್ ಅನ್ನು ಯಾರಾದರೂ ತೆರೆಯಲು ಅಥವಾ ತಿರುಗಿಸಲು ಪ್ರಯತ್ನಿಸಿದರೆ ತಕ್ಷಣವೇ ಅದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ.ಹೆಚ್ಚು ಕಾಲ ಬೈಕ್ ಪಾರ್ಕ್ ಮಾಡುವುದಾದರೆ ಸುರಕ್ಷಿತವಾದ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿ. ಅಂತಹ ಸ್ಥಳ ಲಭ್ಯವಿಲ್ಲದಿದ್ದರೆ ಪೇ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡುವುದು ಒಳ್ಳೆಯದು. ನಿಮ್ಮ ಬೈಕಿನ ಭಾಗಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದ್ದರೆ, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂದು ನಿಮಗೆ ತಿಳಿದಿದ್ದರೆ, ಬೈಕುಗಳನ್ನು ಸುರಕ್ಷಿತವಾಗಿಡಲು ಈ ಟ್ರಿಕ್ ತುಂಬಾ ಉಪಯುಕ್ತವಾಗಿದೆ.ಬೈಕ್‌ನಲ್ಲಿರುವ ಎಲೆಕ್ಟ್ರಿಕ್ ಕನೆಕ್ಷನ್ ಅನ್ನು ತೆಗೆದು ಹಾಕಬಹುದು. ಇದರಿಂದ ನಿಮ್ಮನ್ನು ಬಿಟ್ಟು ಬೇರೆಯವರು ನಿಮ್ಮ ಬೈಕ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಬೈಕುಗಳಲ್ಲಿ ಕನೆಕ್ಷನ್ ಡಿಸ್ ಕನೆಕ್ಷನ್ ಸ್ವಿಚ್‌ಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳನ್ನು ಮೆಕ್ಯಾನಿಕ್ ಮೂಲಕ ಬೈಕಿನೊಳಗೆ ಅಳವಡಿಸಿಕೊಳ್ಳಬಹುದು.


Click it and Unblock the Notifications