ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಬಹುತೇಕ ಜನರು ರಾತ್ರಿ ವೇಳೆ ಹೆಚ್ಚಾಗಿ ಬಸ್ ಮೂಲಕ ದೂರದ ಊರುಗಳಿಗೆ ಪ್ರಯಾಣಿಸುತ್ತಾರೆ. ಇದರಿಂದ ಬೆಳಿಗ್ಗೆ ಹೊತ್ತಿಗೆ ತಲುಪಬೇಕಾದ ಸ್ಥಳ ತಲುಪಿ ಉಳಿದ ಕೆಲಸವನ್ನು ಪೂರ್ಣಗೊಳಿಸಬಹುದು ಎಂಬುದು ಜನರ ಉದ್ದೇಶ.

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಇನ್ನು ವಿಮಾನಗಳಲ್ಲಿ ಪ್ರಯಾಣಿಸುವವರು ಹಗಲು ಹೊತ್ತು ವಿಮಾನಗಳಲ್ಲಿ ಸಂಚರಿಸಲು ಬಯಸುತ್ತಾರೆ. ಆದರೆ ವಿಮಾನಗಳಲ್ಲಿ ಸಂಚರಿಸುವವರು ಮುಂಜಾನೆಪ್ರಯಾಣಿಸುವುದು ಉತ್ತಮ. ಯಾವ ಕಾರಣಕ್ಕೆ ವಿಮಾನಗಳಲ್ಲಿ ಬೆಳಗ್ಗೆ ಪ್ರಯಾಣ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಬೆಳಿಗ್ಗೆ ವಿಮಾನದಲ್ಲಿ ಪ್ರಯಾಣಿಸಲು ಬೆಳಿಗ್ಗೆ ಬೇಗ ಏಳಬೇಕಾಗುತ್ತದೆ. ಇದು ಹಲವರಿಗೆ ಕಷ್ಟವಾಗ ಬಹುದು. ಆದರೆ ಬೆಳಗಿನ ಜಾವ ವಿಮಾನಗಳಲ್ಲಿ ಸಂಚರಿಸುವುದರಿಂದ ವಿವಿಧ ಪ್ರಯೋಜನಗಳಿವೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಮಧ್ಯಾಹ್ನ ಹಾಗೂ ಸಂಜೆ ಪ್ರಯಾಣಿಸುವ ವಿಮಾನಗಳಿಗೆ ಹೋಲಿಸಿದರೆ ಬೆಳಗಿನ ವಿಮಾನಗಳು ವಿಳಂಬವಾಗುವ ಸಾಧ್ಯತೆಗಳು ಕಡಿಮೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಬೆಳಿಗ್ಗೆ 8 ಗಂಟೆಗೂ ಮುನ್ನ ವಿಮಾನಗಳಲ್ಲಿ ಪ್ರಯಾಣಿಸುವುದು ಉತ್ತಮ ಎಂದು ಅಧ್ಯಯನವು ಸೂಚಿಸುತ್ತದೆ.

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಅದರಲ್ಲೂ ವಿಮಾನಗಳ ವಿಳಂಬವನ್ನು ತಪ್ಪಿಸಲು ಬಯಸುವವರು ಬೆಳಗಿನ ಜಾವ ವಿಮಾನಗಳಲ್ಲಿ ಸಂಚರಿಸುವುದು ಒಳ್ಳೆಯದು. ಆ ನಂತರ ವಿಮಾನಗಳು ತಡವಾಗಿ ಆರಂಭವಾಗುವ ಸಾಧ್ಯತೆಗಳಿರುತ್ತವೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಸಂಜೆ 6 ಗಂಟೆಯ ನಂತರ ವಿಮಾನಗಳು ವಿಳಂಬವಾಗುವ ಸಾಧ್ಯತೆಗಳು ಹೆಚ್ಚು. ವಿಮಾನಗಳ ವಿಳಂಬದಿಂದಾಗಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲು ಬೆಳಿಗ್ಗೆ ವಿಮಾನಗಳನ್ನು ಬಳಸುವುದು ಉತ್ತಮ.

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಹಿಂದಿನ ರಾತ್ರಿ ವಿಮಾನಗಳು ಇಳಿಯುವುದರಿಂದ ಬೆಳಿಗ್ಗೆ ಹೊತ್ತು ವಾಯು ಸಂಚಾರ ದಟ್ಟಣೆ ಇಲ್ಲದಿರುವ ಸಾಧ್ಯತೆಗಳು ಹೆಚ್ಚು ಎಂದು ವರದಿಗಳು ತಿಳಿಸಿವೆ. 8 ಗಂಟೆಯ ನಂತರ ವಿಮಾನಗಳು ಒಂದೊಂದಾಗಿ ಹಾರಾಟ ಆರಂಭಿಸುತ್ತವೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ನಂತರ ವಾಯು ಸಂಚಾರ ನಿಯಂತ್ರಣ ಕೇಂದ್ರದ ಅಧಿಕಾರಿಗಳು ವಿಮಾನದ ನಿರ್ಗಮನ ಹಾಗೂ ಇಳಿಯುವಿಕೆಯನ್ನು ವಿಳಂಬಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಲ್ಲದೆ ಮುಂಜಾನೆ ವೇಳೆಯಲ್ಲಿ ವಿಮಾನಗಳು ಪ್ರಕ್ಷುಬ್ಧತೆಯಿಂದ ಪ್ರಭಾವಿತರಾಗುವ ಸಾಧ್ಯತೆಗಳು ಕಡಿಮೆ.

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಗುಡುಗು, ಹೆಚ್ಚು ಗಾಳಿಯಂತಹ ಸಂಗತಿಗಳು ಹೆಚ್ಚಾಗಿ ಮಧ್ಯಾಹ್ನ ಮಾತ್ರ ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಜನಸಂದಣಿಯಲ್ಲಿ ನಿಲ್ಲಲು ಬಯಸದವರಿಗೆ ಸಹ ಬೆಳಗಿನ ಪ್ರಯಾಣವು ಸೂಕ್ತವಾಗಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ವಿಮಾನ ನಿಲ್ದಾಣಗಳು ಸಾಮಾನ್ಯವಾಗಿ ಮುಂಜಾನೆ ವೇಳೆ ಕಡಿಮೆ ಜನಸಂದಣಿಯಿಂದ ಕೂಡಿರುತ್ತವೆ. ಕೆಲವು ವಿಮಾನಯಾನ ಕಂಪನಿಗಳು ಬೆಳಿಗ್ಗೆ ಹೊತ್ತು ತಮ್ಮ ಮೊದಲ ವಿಮಾನಯಾನದ ಟಿಕೆಟ್‌ಗಳನ್ನು ಸ್ವಲ್ಪ ಕಡಿಮೆ ಬೆಲೆಗೆ ನೀಡುತ್ತವೆ.

ಮುಂಜಾನೆ ವಿಮಾನಯಾನದಿಂದಾಗುವ ಕೆಲ ಪ್ರಯೋಜನಗಳಿವು

ಬೆಳಗಿನ ಉಪಾಹಾರದ ನಂತರದ ವಿಮಾನಗಳ ಟಿಕೆಟ್ ಬೆಲೆಗೆ ಹೋಲಿಸಿದರೆ ಮುಂಜಾನೆ ವಿಮಾನಗಳ ಟಿಕೆಟ್ ಬೆಲೆ ಕಡಿಮೆಯಿರುತ್ತದೆ. ಹೆಚ್ಚಿನ ಪ್ರಯಾಣಿಕರು ಬೇಗ ಏಳಲು ಬಯಸದ ಕಾರಣ ಬೆಳಗಿನ ಪ್ರಯಾಣವನ್ನು ತಪ್ಪಿಸುತ್ತಾರೆ. ಇದಕ್ಕಾಗಿಯೇ ವಿಮಾನಯಾನ ಕಂಪನಿಗಳು ಮುಂಜಾನೆ ವಿಮಾನಯಾನದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡುತ್ತವೆ. ಈ ಎಲ್ಲಾ ಕಾರಣಕ್ಕೆ ಮುಂಜಾನೆಯ ವಿಮಾನಯಾನಕ್ಕೆ ಆದ್ಯತೆ ನೀಡುವುದು ಒಳ್ಳೆಯದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Important benefits of early morning journey through flights. Read in Kannada.
Story first published: Tuesday, June 1, 2021, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X