ಜನವರಿ ಕಾರುಪ್ರೀಯರ ಕನಸಿನ ತಿಂಗಳು ಯಾಕೆ ಗೊತ್ತೇ?: ಇಲ್ಲಿದೆ ಸಂಪೂರ್ಣ ಮಾಹಿತಿ
ಜನವರಿ ತಿಂಗಳ ಮೊದಲೆರಡು ವಾರ ಎಂದರೆ ಕಾರು ಪ್ರೇಮಿಗಳಿಗೆ ಹಬ್ಬ ಎಂದೇ ಹೇಳಬಹುದು. ಈ ಸಮಯದಲ್ಲೇ ಭಾರತದ ಕಾರು ಮಾರುಕಟ್ಟೆಯಲ್ಲಿ ಹಲವಾರು ಕಾರ್ಯಕ್ರಮಗಳು ಮತ್ತು ಸುದ್ದಿಗಳು ನಡೆದಿದೆ. ಇಂದಿನ ಈ ಲೇಖನದಲ್ಲಿ ಆ ವಿಷಯಗಳು ಏನು ಮತ್ತು ಯಾವೆಲ್ಲಾ ಕಾರುಗಳು ಸದ್ದು ಮಾಡಿದೆ ಎಂದು ನೋಡೋಣ.
ಹ್ಯುಂಡೈ ಕ್ರೇಟಾ ೨೦೨೪ ಫೇಸ್‌ಲಿಫ್ಟ್: ಈ ತಿಂಗಳಲ್ಲಿ ಬಿಡುಗಡೆಯಾದ ಬಹುಮುಖ್ಯ ಕಾರು ಎಂದರೆ ಅದು ಈ ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್. ಹ್ಯುಂಡೈ ತನ್ನ ಎರಡನೇ ತಲೆಮಾರಿನ ಕ್ರೆಟಾವನ್ನು ರೂ. 11 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹೊಸ SUV ಏಳು ವಿಭಿನ್ನ ಟ್ರಿಮ್‌ಗಳಲ್ಲಿ ಬರಲಿದ್ದು, ಇದರ ಮೂಲ E ವೇರಿಯೆಂಟ್‌ಗೆ 10,99,900 ಮತ್ತು SX(O) ಟಾಪ್ಎಂಡ್ ಮಾದರಿಗೆ ರೂ. 17,23,800.

ಈ ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಇದರ ಟ್ರಾನ್ಸ್ಮಿಷನ್ ನೋಡುವುದಾದರೆ 6 speed MT, CVT ಹಾಗೂ 7 speed DCT ಮತ್ತು 6-speed MT, 6-speed AT ಆಯ್ಕೆಯನ್ನು ನೀಡಲಾಗಿದೆ.
ಟಾಟಾ ಪಂಚ್ ಇವಿ: ಈಗಾಗಲೇ ಟಾಟಾ ಪಂಚ್ ಎಲೆಕ್ಟ್ರಿಕ್ ಎಸ್‌ಯುವಿಯ ಹಲವಾರು ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲಾ ಕಾರು ಪ್ರೇಮಿಗಳು ಸಹ ಕುತೂಹಲದಿಂದ ಕಾಯುತ್ತಿದ್ದರು. ಎಲ್ಲರ ನಿರೀಕ್ಷೆಯಂತೆ ಟಾಟಾ ಪಂಚ್ ಎಲೆಕ್ಟ್ರಿಕ್ (TATA Punch Electric) ಈ ತಿಂಗಳು ಭಾರತೀಯರ ಮಡಿಲು ಸೇರುವ ನಿರೀಕ್ಷೆಯಿದೆ.

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಮಾರ್ಟ್ ಡಿಆರ್‌ಎಲ್‌ಗಳು ಲಭ್ಯವಿದೆ. ಇದರ ಜೊತೆಗೆ 360 ಡಿಗ್ರಿ ಕ್ಯಾಮೆರಾ, ಎಸ್‌ಓಎಸ್ ಫಂಕ್ಷನ್, ಡಿಸಿ ಫಾಸ್ಟ್ ಚಾರ್ಜಿಂಗ್, ಮಲ್ಟಿ ಮೋಡ್ ರೀಜಿನ್ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್‌ಗಳನ್ನು ಟಾಟಾ ಈ ಕಾರಿನಲ್ಲಿ ನೀಡಿದೆ.
ಇದರ ಜೊತೆಗೆ ಟಾಟಾ ಪಂಚ್ ಎಲೆಕ್ಟ್ರಿಕ್ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಸ್ಮಾರ್ಟ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಮೂರು ವೇರಿಯಂಟ್‌ಗಳು ಇರಲಿದ್ದು ಆಯ್ಕೆಗೆ ಅನುಸಾರವಾಗಿ ಈ ಕಾರಿನಲ್ಲಿ ಸನ್‌ರೂಫ್ ಸಹ ಲಬ್ಯವಾಗಲಿದೆ. ಇದು ಈ ಕಾರಿನ ಮಾರಾಟದವನ್ನು ಇಮ್ಮಡಿಗೊಳಿಸಲಿದೆ ಎಂಬುದು ಎಲ್ಲರ ಅಭಿಪ್ರಾಯ.
ಕಿಯಾ ಸಾನೆಟ್ ಫೇಸ್‌ಲಿಫ್ಟ್: ಪ್ರಸಿದ್ದ ಕಾರು ನಿರ್ಮಾಣ ಕಂಪನಿ Kia, ಭಾರತದಲ್ಲಿ ತನ್ನ ಜನಪ್ರಿಯ ಸಬ್-ಕಾಂಪ್ಯಾಕ್ಟ್ ಫೆಸ್‌ಲಿಫ್ಟ್ Sonet SUV ಅನ್ನು ಕೊನೆಗೂ ಅನಾವರಣಗೊಳಿಸಿದೆ. ಈ ಫೇಸ್‌ಲಿಫ್ಟ್ ಮಾದರಿಗೆ ಹೊರಭಾಗ ಮತ್ತು ಒಳಭಾಗದಲ್ಲಿ ವ್ಯಾಪಕ ನವೀಕರಣ ನೀಡಲಾಗಿದೆ. ಇದು ಕಾರು ಪ್ರೀಯರ ಮುಖದಲ್ಲಿ ಮಂದಹಾಸ ಮೂಡುವಲ್ಲಿ ಸಫಲವಾಗಿದೆ.
ಹಲವಾರು ಬದಲಾವಣೆಗಳೊಂದಿಗೆ ಹೊರಬಂದಿರುವ ಸಾನೆಟ್ ಫೇಸ್‌ಲಿಫ್ಟ್‌ನ ಒಳಭಾಗದಲ್ಲಿರುವ ಮತ್ತೊಂದು ಹೊಸ ವೈಶಿಷ್ಟ್ಯವೆಂದರೆ ಎಲ್ಇಡಿ ಆಂಬಿಯೆಂಟ್ ಲೈಟ್‌ಗಳ ಸೇರ್ಪಡೆಯಾಗಿದೆ. ಕಾರು ಈಗ ಡೋರ್ ಪಾಕೆಟ್ಸ್ ಮತ್ತು ಇತರ ಸ್ಥಳಗಳಲ್ಲಿ ಗ್ರಾಹಕೀಯಗೊಳಿಸಬಹುದಾದ ಎಲ್ಇಡಿ ಲೈಟ್‌ಗಳನ್ನು ಪಡೆದಿದೆ, ಅದನ್ನು ಆದ್ಯತೆಗೆ ಅನುಗುಣವಾಗಿ ಬದಲಾಯಿಸಬಹುದು. ಇದರಿಂದ ಚಾಲಕರ ಚಲಾವಣೆಯ ಅನುಭವವೂ ಸಹ ಉತ್ತಮವಾಗಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications