ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ನೆದರ್‍‍ಲ್ಯಾಂಡ್ ಮೂಲದ ಪಾಲ್-ವಿ ಕಂಪನಿಯು ಭಾರತದಲ್ಲಿ ಹಾರುವ ಕಾರುಗಳ ಉತ್ಪಾದನೆಯನ್ನು ಆರಂಭಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಪಾಲ್-ವಿ ಕಂಪನಿಯು ಗುಜರಾತ್‍‍ನಲ್ಲಿ ಉತ್ಪಾದನಾ ಘಟಕವನ್ನು ತೆರೆದು, ಕಾರುಗಳ ಉತ್ಪಾದನೆಯನ್ನು ಆರಂಭಿಸಲಿದೆ.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಪಾಲ್-ವಿ ಕಂಪನಿಯು ಈ ಹಾರಾಡುವ ಕಾರುಗಳನ್ನು ಅಮೆರಿಕಾ ಹಾಗೂ ಯುರೋಪ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ಹೊಂದಿದೆ. ಇದುವರೆಗೂ 110 ಜನರು ಈ ಹಾರಾಡುವ ಕಾರುಗಳನ್ನು ಬುಕ್ಕಿಂಗ್ ಮಾಡಿದ್ದಾರೆ. ಈ ಲೇಖನದಲ್ಲಿ ಪಾಲ್-ವಿ ಕಂಪನಿಯ ಹಾರಾಡುವ ಕಾರುಗಳ ಮತ್ತಷ್ಟು ವಿವರಗಳನ್ನು ನೋಡೋಣ.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಈ ಹಾರಾಡುವ ಕಾರುಗಳನ್ನು ಭೂಮಿಯ ಮೇಲೆ ಚಲಿಸುವಂತೆ ಹಾಗೂ ಗಾಳಿಯಲ್ಲಿ ಹಾರಾಡುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚುತ್ತಿರುವ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅನೇಕರು ಈ ರೀತಿಯ ಕಾರುಗಳಿರಬೇಕೆಂದು ಬಯಸಿದ್ದರು.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಈ ಹಾರಾಡುವ ಕಾರುಗಳು ಟ್ರಾಫಿಕ್ ಜಾಮ್ ಹೆಚ್ಚಿರುವ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲಿವೆ. ಪಾಲ್-ವಿ ಕಂಪನಿಯು ಮುಂದಿನ ವರ್ಷ ಈ ಕಾರುಗಳ ಉತ್ಪಾದನೆಯನ್ನು ಆರಂಭಿಸಲಿದೆ. ಮೊದಲು ಈ ಕಾರುಗಳನ್ನು ಅಮೆರಿಕಾ ಹಾಗೂ ಯುರೋಪ್‍‍ಗಳಿಗೆ ರಫ್ತು ಮಾಡಲಾಗುವುದು.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಪಾಲ್-ವಿ ಕಂಪನಿಯು ಹಾರಾಡುವ ಕಾರುಗಳಿಗಾಗಿ ಅನುಮತಿಯನ್ನು ಪಡೆದಿರುವುದರಿಂದ ಈ ದೇಶಗಳಲ್ಲಿ ಮೊದಲಿಗೆ ಬಿಡುಗಡೆಗೊಳಿಸಲಾಗುವುದು. ಈ ಕಾರುಗಳನ್ನು ಖರೀದಿಸಲು ಬಯಸುವವರು ಕಾರು ಡ್ರೈವಿಂಗ್ ಲೈಸೆನ್ಸ್ ಹಾಗೂ ಖಾಸಗಿ ಪೈಲಟ್ ಲೈಸೆನ್ಸ್ ಹೊಂದಿರಬೇಕಾಗುತ್ತದೆ.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಈ ಕಾರುಗಳನ್ನು ಖರೀದಿಸಲು ಬುಕ್ಕಿಂಗ್ ಮಾಡಿರುವವರು ಕಾರು ಖರೀದಿಗೂ ಮುನ್ನ 30ರಿಂದ 40 ಗಂಟೆಗಳ ಕಾಲ ತರಬೇತಿಯನ್ನು ಪಡೆಯಬೇಕಾಗುತ್ತದೆ. ಈ ತರಬೇತಿಯನ್ನು ಪೂರ್ಣಗೊಳಿಸಿದ ನಂತರವೇ ಈ ಕಾರುಗಳನ್ನು ವಿತರಿಸಲಾಗುತ್ತದೆ. ಆಟೋಕೈರೊ ಇವುಗಳ ಲೈಸೆನ್ಸ್ ನೀಡಲಿದೆ.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಈ ಹಾರಾಡುವ ಕಾರುಗಳು ಗಾಳಿಯಲ್ಲಿ ಪ್ರತಿ ಗಂಟೆಗೆ 170ರಿಂದ 180 ಕಿ.ಮೀ ವೇಗದಲ್ಲಿ ಹಾರಾಡಬಲ್ಲವು. ಆದರೆ ಸುರಕ್ಷತೆ ದೃಷ್ಟಿಯಿಂದ ಈ ಕಾರುಗಳನ್ನು ಪ್ರತಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಚಾಲನೆ ಮಾಡುವುದು ಒಳ್ಳೆಯದು. ಈ ಹಾರಾಡುವ ಕಾರುಗಳಲ್ಲಿ ಇಬ್ಬರು ಕುಳಿತುಕೊಳ್ಳಬಹುದು.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಈ ಕಾರುಗಳಲ್ಲಿ ಯುರೋ 95, ಯುರೋ 98 ಹಾಗೂ ಇ10 ಇಂಧನವನ್ನು ಬಳಸಬಹುದು. ಈ ಕಾರುಗಳಲ್ಲಿ 100 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ನೀಡಲಾಗಿದೆ. ರಸ್ತೆಯಲ್ಲಿ ಬಳಸುವಾಗ ಪೂರ್ತಿ ಟ್ಯಾಂಕ್‍‍ಗೆ ಇಂಧನವನ್ನು ತುಂಬಿಸಿದರೆ 1,300 ಕಿ.ಮೀಗಳವರೆಗೆ ಚಲಿಸಬಹುದು.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಗಾಳಿಯಲ್ಲಿ ಹಾರಾಟ ನಡೆಸುವಾಗ 400ರಿಂದ 500 ಕಿ.ಮೀಗಳವರೆಗೆ ಹಾರಾಡಬಹುದು. ಈ ಕಾರುಗಳು 3,500 ಮೀಟರ್‍‍ಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಈ ಕಾರುಗಳು ಟೇಕ್ ಆಫ್ ಆಗಲು 180 ಮೀಟರ್‍‍ಗಳ ರನ್‍‍ವೇ ಬೇಕಾಗುತ್ತದೆ. ಲ್ಯಾಂಡಿಂಗ್ ಮಾಡಲು 30 ಮೀಟರ್‍‍ನ ರನ್‍‍ವೇ ಸಾಕಾಗುತ್ತದೆ.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ರಸ್ತೆಯಲ್ಲಿರುವಾಗ ಈ ಹಾರಾಡುವ ಕಾರುಗಳ ರೆಕ್ಕೆಗಳು ಮಡುಚಿಕೊಳ್ಳುತ್ತವೆ. ರಸ್ತೆಯ ಮೇಲಿರುವಾಗ ಈ ಕಾರು 4 ಮೀಟರ್ ಉದ್ದ, 2 ಮೀಟರ್ ಅಗಲ ಹಾಗೂ 1.7 ಮೀಟರ್ ಎತ್ತರವಿರುತ್ತದೆ. ಇದು ಕಾರಿನ ಸರಿಯಾದ ಗಾತ್ರವಾಗಿದೆ.

ಭಾರತದಲ್ಲಿ ಶುರುವಾಗಲಿರುವ ಹಾರುವ ಕಾರುಗಳ ವಿಶೇಷತೆಗಳೇನು?

ಈ ಕಾರ್ ಅನ್ನು ಹೊಸ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸ ಬೇಕಾಗಿರುವ ಕಾರಣಕ್ಕೆ ಹೊಸ ನಿಯಮಗಳನ್ನು ರೂಪಿಸಲು ತಡವಾಗಲಿದೆ. ಇದರಿಂದಾಗಿ ಈ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲು ಇನ್ನು ಹಲವಾರು ವರ್ಷಗಳು ಬೇಕಾಗುತ್ತವೆ.

Most Read Articles

Kannada
English summary
Important details about Pal V flying car. Read in Kannada.
Story first published: Thursday, March 12, 2020, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X