ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ವಾಹನಗಳ ಪ್ರಮುಖ ಭಾಗಗಳಲ್ಲಿ ಸೈಲೆನ್ಸರ್‌ಗಳು ಸಹ ಸೇರಿವೆ. ವಾಹನದ ಎಂಜಿನ್‌ನಿಂದ ಉತ್ಪತ್ತಿಯಾಗುವ ಶಬ್ದವನ್ನು ಕಡಿಮೆ ಮಾಡಲು ಸೈಲೆನ್ಸರ್‌ಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಎಂಜಿನ್‌ನ ಎಕ್ಸಾಸ್ಟ್ ಗ್ಯಾಸ್'ಗಳು ಶಬ್ದವನ್ನುಂಟು ಮಾಡುತ್ತವೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಸೈಲೆನ್ಸರ್‌ಗಳು ಆ ಶಬ್ದವನ್ನು ಕಡಿಮೆ ಮಾಡುವ ಕೆಲಸವನ್ನು ಮಾಡುತ್ತವೆ. ವಾಹನದಲ್ಲಿ ಅಳವಡಿಸಲಾದ ಎಂಜಿನ್‌ನ ವಿಧ ಹಾಗೂ ಗಾತ್ರವನ್ನು ಅವಲಂಬಿಸಿ ಸೈಲೆನ್ಸರ್‌ಗಳು ಬದಲಾಗುತ್ತವೆ. ಸೈಲೆನ್ಸರ್‌ಗಳನ್ನು ಸಾಮಾನ್ಯವಾಗಿ ವಾಹನಗಳ ಹಿಂಭಾಗದಲ್ಲಿ ಮಾತ್ರ ಕಾಣಬಹುದು. ಕಾರು ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಬಹುತೇಕ ವಾಹನಗಳ ಹಿಂಭಾಗದಲ್ಲಿ ಸೈಲೆನ್ಸರ್‌ಗಳನ್ನು ನೀಡಲಾಗಿರುತ್ತದೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಆದರೆ ಟ್ರಾಕ್ಟರುಗಳಲ್ಲಿ ಮಾತ್ರ ಸೈಲೆನ್ಸರ್‌ಗಳನ್ನು ಮುಂಭಾಗದಲ್ಲಿ ನೀಡಿ ಅವುಗಳನ್ನು ಮೇಲಕ್ಕೆ ಎತ್ತಲಾಗಿರುತ್ತದೆ. ಕಾರು, ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಸೈಲೆನ್ಸರ್ ಟ್ರಾಕ್ಟರುಗಳಲ್ಲಿ ಮಾತ್ರ ಏಕೆ ಭಿನ್ನವಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಸಾಮಾನ್ಯವಾಗಿ ಟ್ರಾಕ್ಟರುಗಳಲ್ಲಿ ಚಾಲಕನ ಆಸನವು ಎಂಜಿನ್‌ನ ಹಿಂದೆ ಇರುತ್ತದೆ. ಟ್ರಾಕ್ಟರುಗಳಲ್ಲಿ ಚಾಲಕನ ಸೀಟು ತೆರೆದಿರುತ್ತದೆ. ಟ್ರಾಕ್ಟರುಗಳ ಹಿಂಭಾಗದಲ್ಲಿ ಸೈಲೆನ್ಸರ್ ನೀಡಿದರೆ ಎಕ್ಸಾಸ್ಟ್ ಗ್ಯಾಸ್'ಗಳು ನೇರವಾಗಿ ಚಾಲಕನಿಗೆ ಬಡಿಯುತ್ತವೆ. ಟ್ರಾಕ್ಟರುಗಳಲ್ಲಿ ಸೈಲೆನ್ಸರ್ ಅನ್ನು ಮುಂಭಾಗದಲ್ಲಿ ನೀಡಲು ಇದು ಪ್ರಮುಖ ಕಾರಣವಾಗಿದೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಟ್ರಾಕ್ಟರ್‌ನ ಹಿಂಭಾಗವು ಎಂಜಿನ್‌ಗಿಂತ ದೊಡ್ಡದಾಗಿದ್ದು, ಪಾರ್ಶ್ವವಾಗಿ ಬಾಗುವ ಸೈಲೆನ್ಸರ್ ಒದಗಿಸಿದರೂ ಇದೇ ಪರಿಣಾಮ ಬೀರುತ್ತದೆ. ಟ್ರಾಕ್ಟರ್‌ನ ಮುಂಭಾಗದಲ್ಲಿ ಸೈಲೆನ್ಸರ್‌ಗಳನ್ನು ಮೇಲ್ಮುಖವಾಗಿ ನೀಡಲು ಇನ್ನೂ ಎರಡು ಕಾರಣಗಳಿವೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಟ್ರ್ಯಾಕ್ಟರ್‌ಗಳನ್ನು ಸಾಮಾನ್ಯವಾಗಿ ಕೃಷಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಭೂಮಿಯನ್ನು ಉಳುಮೆ ಮಾಡುವಂತಹ ಕಾರ್ಯಗಳಲ್ಲಿ ಟ್ರಾಕ್ಟರುಗಳ ಹಿಂಭಾಗಕ್ಕೆ ಕೆಲವು ಸಾಧನಗಳನ್ನು ಜೋಡಿಸಲಾಗುತ್ತದೆ. ಕೆಲವೊಮ್ಮೆ ಟ್ರಾಕ್ಟರುಗಳ ಹಿಂಭಾಗದಲ್ಲಿ ಟ್ರೇಲರ್‌ಗಳನ್ನು ಸಹ ಜೋಡಿಸಲಾಗುತ್ತದೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಜನರು ಕುಳಿತುಕೊಳ್ಳಲು ಅಥವಾ ಸರಕುಗಳನ್ನು ಲೋಡ್ ಮಾಡಲು ಈ ಟ್ರೇಲರ್‌ಗಳನ್ನು ಟ್ರಾಕ್ಟರುಗಳ ಹಿಂಭಾಗದಲ್ಲಿ ಜೋಡಿಸಲಾಗುತ್ತದೆ. ಈ ಕಾರಣಕ್ಕೆ ಟ್ರಾಕ್ಟರುಗಳ ಹಿಂಭಾಗದಲ್ಲಿ ಸೈಲೆನ್ಸರ್‌ಗಳನ್ನು ನೀಡಲಾಗುವುದಿಲ್ಲ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಟ್ರಾಕ್ಟರುಗಳನ್ನು ಹೆಚ್ಚಾಗಿ ಒರಟು ಭೂಪ್ರದೇಶದಲ್ಲಿ ಬಳಸಲಾಗುತ್ತದೆ. ಈ ಕಾರಣದಿಂದಾಗಿಯೂ ಸಹ ಕಾರು ಹಾಗೂ ದ್ವಿಚಕ್ರ ವಾಹನಗಳ ರೀತಿಯಲ್ಲಿ ಟ್ರಾಕ್ಟರುಗಳಲ್ಲಿ ಹಿಂಬದಿಯಲ್ಲಿ ಸೈಲೆನ್ಸರ್‌ಗಳನ್ನು ನೀಡುವುದಿಲ್ಲ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಒಂದು ವೇಳೆ ಒದಗಿಸಿದರೆ ಒರಟು ಭೂಪ್ರದೇಶದಲ್ಲಿ ಸೈಲೆನ್ಸರ್‌ಗಳು ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚು. ಈ ಕಾರಣದಿಂದಲೂ ಸಹ ಟ್ರಾಕ್ಟರುಗಳ ಮುಂಭಾಗದಲ್ಲಿಯೇ ಮೇಲಕ್ಕೆ ಏರಿಸಿರುವ ಸೈಲೆನ್ಸರ್ ನೀಡಲಾಗುತ್ತದೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಸೈಲೆನ್ಸರ್‌ಗಳ ವಿನ್ಯಾಸವು ವಾಹನಗಳಿಂದ ವಾಹನಗಳಿಗೆ ಏಕೆ ಬದಲಾಗುತ್ತದೆ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಸೈಲೆನ್ಸರ್‌ಗಳ ವಿನ್ಯಾಸವನ್ನು 4 ಪ್ರಮುಖ ಅಂಶಗಳಿಂದ ನಿರ್ಧರಿಸಲಾಗುತ್ತದೆ.

ಟ್ರಾಕ್ಟರುಗಳಲ್ಲಿ ಸೈಲೆನ್ಸರ್‌ಗಳು ಮುಂಭಾಗದಲ್ಲಿರಲು ಕಾರಣಗಳಿವು

ಎಂಜಿನ್ ವಿಧ ಮತ್ತು ವಿನ್ಯಾಸ, ಎಂಜಿನ್ ಸಾಮರ್ಥ್ಯ, ಸಿಲಿಂಡರ್‌ಗಳ ಸಂಖ್ಯೆ ಮತ್ತು ಎಂಜಿನ್ ವೇಗ, ಎಷ್ಟು ಸ್ಥಳವಿದೆ ಎಂಬ 4 ಅಂಶಗಳ ಆಧಾರದ ಮೇಲೆ ವಾಹನಗಳ ಸೈಲೆನ್ಸರ್ ವಿನ್ಯಾಸವನ್ನು ನಿರ್ಧರಿಸಲಾಗುತ್ತದೆ.

Most Read Articles

Kannada
English summary
Reasons for tractors having silencer in front. Read in Kannada.
Story first published: Sunday, July 4, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X