ವಾಹನಗಳಲ್ಲಿರುವ ವಿವಿಧ ಮಾದರಿಯ ಹೆಡ್‌ಲೈಟ್‌ಗಳ ಇಂಟ್ರಸ್ಟಿಂಗ್ ವಿಚಾರಗಳಿವು!

ವಾಹನಗಳಲ್ಲಿ ವಿವಿಧ ರೀತಿಯ ದೀಪಗಳನ್ನು ಬಳಸಲಾಗುತ್ತದೆ. ಅದರಲ್ಲೂ ಒಂದೊಂದು ವಾಹನದಲ್ಲಿಯೂ ಒಂದೊಂದು ರೀತಿಯ ಹೆಡ್‌ಲೈಟ್‌, ಟೇಲ್ ಲೈಟ್‌, ಸಿಗ್ನಲ್ ಲೈಟ್‌ ಹಾಗೂ ಇಂಟರ್ನಲ್ ಲೈಟ್'ಗಳನ್ನು ಬಳಸಲಾಗುತ್ತದೆ.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಪ್ರತಿಯೊಂದು ಕಾರಿನಲ್ಲಿಯೂ ಹೆಡ್‌ಲೈಟ್‌ಗಳಿರುತ್ತವೆ. ಕೆಲವು ಹೆಡ್‌ಲೈಟ್‌ಗಳು ಪ್ರಕಾಶಮಾನವಾಗಿದ್ದರೆ, ಕೆಲವು ಹೆಡ್‌ಲೈಟ್‌ಗಳು ಮಂದವಾಗಿರುತ್ತವೆ. ಹೆಡ್‌ಲೈಟ್‌ಗಳು ಈ ರೀತಿ ವಿಭಿನ್ನವಾಗಿರುವುದಕ್ಕೆ ಕಾರಣವೇನು, ಮಾರುಕಟ್ಟೆಯಲ್ಲಿ ಎಷ್ಟು ರೀತಿಯ ಬಲ್ಬ್‌ಗಳಿವೆ, ಯಾವ ರೀತಿಯ ಬಲ್ಬ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಬಲ್ಬ್‌ಗಳ ವಿಧಗಳು

ಕಾರುಗಳಲ್ಲಿ ಅಳವಡಿಸುವ ಹೆಡ್‌ಲೈಟ್‌ಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಮಾನದಂಡಗಳನ್ನು ವಿವಿಧದೇಶಗಳಲ್ಲಿ ಬಳಸಲಾಗುತ್ತದೆ. ಬಲ್ಬ್ ಪ್ರಕಾರಗಳನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಮೊದಲ ಗುಂಪಿನ ಬಲ್ಬ್‌ಗಳನ್ನು ಹೆಡ್‌ಲೈಟ್‌ ಹಾಗೂ ಟೇಲ್‌ಲೈಟ್‌ಗಳಾಗಿ ಬಳಸಲಾಗುತ್ತದೆ. ಎರಡನೇ ಗುಂಪಿನ ಬಲ್ಬ್‌ಗಳನ್ನು ಸಿಗ್ನಲ್ ಲೈಟ್'ಗಳಿಗಾಗಿ ಬಳಸಲಾಗುತ್ತದೆ. ಮೂರನೇ ಗುಂಪಿನ ಲೈಟ್'ಗಳನ್ನು ಹೊಸ ವಾಹನಗಳಲ್ಲಿ ಬಳಸುವುದಿಲ್ಲ. ಹಳೆಯ ವಾಹನಗಳಲ್ಲಿ ಮಾತ್ರ ಬಳಸಲಾಗುತ್ತದೆ.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಹೆಚ್1, ಹೆಚ್3, ಹೆಚ್4, ಹೆಚ್7, ಹೆಚ್11, ಹೆಚ್‌ಪಿ3 ಹಾಗೂ ಹೆಚ್‌ಪಿ4 ಬಲ್ಬ್‌ಗಳು ಮೊದಲ ಗುಂಪಿಗೆ ಸೇರಿವೆ. ಈ ಬಲ್ಬ್‌ಗಳೆಲ್ಲವೂ ಒಂದೇ ಗುಂಪಿನಲ್ಲಿದ್ದರೂ ಮತ್ತೊಂದಕ್ಕೆ ಬದಲಿಸಲು ಸಾಧ್ಯವಿಲ್ಲ. ಉದಾಹರಣೆಗೆ ಹೆಚ್1 ಬಲ್ಬ್ ಅನ್ನು ಹೆಚ್ 3 ಬಲ್ಬ್‌ಗೆ ಮೀಸಲಾದ ಸಾಕೆಟ್'ನಲ್ಲಿ ಅಳವಡಿಸಲು ಸಾಧ್ಯವಿಲ್ಲ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಈ ಕಾರಣಕ್ಕೆ ಉತ್ಪಾದನೆಯ ಸಮಯದಲ್ಲಿ ಅಳವಡಿಸಲಾಗಿರುವ ಒಂದೇ ರೀತಿಯ ಬಲ್ಬ್‌ಗಳನ್ನು ಕೊನೆಯವರೆಗೂ ಬಳಸಬೇಕಾಗುತ್ತದೆ. ವಾಹನದಲ್ಲಿ ಯಾವ ರೀತಿಯ ಬಲ್ಬ್ ಅಳವಡಿಸಲಾಗಿದೆ ಎಂಬುದನ್ನು ವಾಹನಗಳ ಮ್ಯಾನುಯಲ್'ನಿಂದ ತಿಳಿಯಬಹುದು.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಬಲ್ಬ್‌ಗಳ ಹೋಲಿಕೆ ಮೊದಲ ಗುಂಪಿನಲ್ಲಿರುವ ಬಲ್ಬ್‌ಗಳು ಬಹುತೇಕ ಒಂದೇ ಆಗಿದ್ದರೂ, ಅವುಗಳ ಫೈಬರ್, ನಾಮಿನಲ್ ಪವರ್ ಹಾಗೂ ಬೇಸ್ ಟೈಪ್ ಬೇರೆ ಬೇರೆಯಾಗಿರುತ್ತವೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಫೈಬರ್'ಗಳು

ಕೆಲವು ಬಲ್ಬ್‌ಗಳಲ್ಲಿ ಒಂದು ಫೈಬರ್ ಇದ್ದರೆ, ಕೆಲವು ಬಲ್ಬ್‌ಗಳಲ್ಲಿ ಎರಡು ಫೈಬರ್'ಗಳಿರುತ್ತವೆ. ಇವುಗಳು ಬೆಳಕಿನ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಕಡಿಮೆ ಮಾಡಲು ನೆರವಾಗುತ್ತವೆ. ಸಿಂಗಲ್ ಫೈಬರ್ ಹೊಂದಿರುವ ಬಲ್ಬ್‌ಗಳನ್ನು ಹೆಚ್ಚಾಗಿ ಕಾರುಗಳಲ್ಲಿ ಬಳಸಲಾಗುತ್ತದೆ.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಬಸ್ ಹಾಗೂ ಟ್ರಕ್‌ಗಳಂತಹ ದೊಡ್ಡ ವಾಹನಗಳಲ್ಲಿ ಡ್ಯುಯಲ್ ಫೈಬರ್ ಬಲ್ಬ್‌ಗಳನ್ನು ಬಳಸಲಾಗುತ್ತದೆ. ಹೆಚ್ 1, ಹೆಚ್ 3, ಹೆಚ್ 7, ಹೆಚ್ 11, ಹೆಚ್‌ಪಿ 3 ಹಾಗೂ ಹೆಚ್‌ಪಿ 4 ಬಲ್ಬ್‌ಗಳು ಸಿಂಗಲ್ ಫೈಬರ್ ಆದರೆ, ಹೆಚ್ 4 ಬಲ್ಬ್ ಡಬಲ್ ಫೈಬರ್ ಆಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ನಾಮಿನಲ್ ಪವರ್

ಒಂದೇ ಗುಂಪಿನಲ್ಲಿರುವ ಎಲ್ಲಾ ಬಲ್ಬ್‌ಗಳು ಬಹುತೇಕ ಒಂದೇ ಪ್ರಮಾಣದ ಬೆಳಕನ್ನು ಹೊರಸೂಸುತ್ತವೆ. ಅದಕ್ಕೆ ಎಷ್ಟು ವೋಲ್ಟ್ ಶಕ್ತಿ ಬೇಕು. ಅದು ಎಷ್ಟು ವ್ಯಾಟೇಜ್ ಉತ್ಪಾದಿಸುತ್ತದೆ ಎಂಬುದು ನಾಮಿನಲ್ ಪವರ್. ಈ ಪ್ರಮಾಣವು ಬಲ್ಬ್‌ನಿಂದ ಬಲ್ಬ್‌ಗೆ ಬದಲಾಗುತ್ತದೆ.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಪ್ರತಿ ಬಲ್ಬ್ ಹೊರಸೂಸುವ ಪವರ್'ನಲ್ಲಿ ಸಣ್ಣ ಬದಲಾವಣೆಗಳಿರುತ್ತವೆ. ಈ ಕಾರಣಕ್ಕೆ ಒಂದು ನಿರ್ದಿಷ್ಟ ರೀತಿಯ ಬಲ್ಬ್ ಅನ್ನು ಇಡಬೇಕಾದ ಕಡೆ ವಿಭಿನ್ನ ರೀತಿಯ ಬಲ್ಬ್ ಅಳವಡಿಸುವುದು ಅಪಾಯಕರ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಉದಾಹರಣೆಗೆ ಹೆಚ್1 ಬಲ್ಬ್ ಅನ್ನು ಅಳವಡಿಸಬೇಕಾದ ಕಡೆ ಹೆಚ್7 ಬಲ್ಬ್ ಅನ್ನು ಅಳವಡಿಸುವುದು ಅಮೆರಿಕನ್ ಪವರ್ ಸಾಕೆಟ್‌ನಲ್ಲಿ ಯುರೋಪಿಯನ್ ಪವರ್ ಪ್ಲಗ್ ಅನ್ನು ಅಳವಡಿಸಿದಂತೆ ಆಗುತ್ತದೆ.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಈ ರೀತಿ ಮಾಡುವುದರಿಂದ ಬಲ್ಬ್ ಹೆಚ್ಚು ಬಿಸಿಯಾಗಿ, ಬೇಗನೆ ಹಾಳಾಗುತ್ತದೆ. ಪ್ರತಿ ಬಲ್ಬ್ ಒಳಗೆ ವಿಭಿನ್ನ ರೀತಿಯ ಬೇಸ್ ಇರುತ್ತದೆ. ಹೀಗಾಗಿ ಒಂದು ನಿರ್ದಿಷ್ಟ ಗಾತ್ರದ ಬಲ್ಬ್ ಬದಲಿಸಿ ಬೇರೆ ಗಾತ್ರದ ಬಲ್ಬ್‌ ಅಳವಡಿಸುವುದು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಈ ಕಾರಣಕ್ಕೆ ಕಾರುಗಳಲ್ಲಿ ಬಲ್ಬ್ ಬದಲಿಸಿ ಅದೇ ಗಾತ್ರದ ಬಲ್ಬ್ ಅಳವಡಿಸಿದರೆ ಯಾವುದೇ ತೊಂದರೆ ಇಲ್ಲ. ಬಲ್ಬ್ ಅಳವಡಿಸುವಾಗ ಬಲ್ಬ್ ಬೇಸ್'ಗೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು.

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಹೊರಗಡೆ ಲಭ್ಯವಿರುವ ಹೆಡ್‌ಲೈಟ್ ಕಿಟ್‌ಗೆ ಹೊಂದಿಸಲು ಬಯಸಿದರೆ, ಅದರ ವೋಲ್ಟೇಜ್, ವ್ಯಾಟೇಜ್ ಇತ್ಯಾದಿಗಳನ್ನು ಪರಿಶೀಲಿಸಬೇಕು. ಹೊಸ ಕಿಟ್ ಅನ್ನು ಹಳೆಯ ಕಿಟ್‌ನೊಂದಿಗೆ ಹೋಲಿಸಿ ನೋಡಬೇಕು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವಾಹನಗಳಲ್ಲಿರುವ ಹೆಡ್‌ಲೈಟ್‌ಗಳ ಬಗೆಗಿನ ಸಂಗತಿಗಳಿವು

ಬೇಸ್

ಬಲ್ಬ್ ಹಾಗೂ ಸಾಕೆಟ್ ಸಂಪರ್ಕಿಸುವ ಪ್ರದೇಶವು ಬೇಸ್ ಆಗಿರುತ್ತದೆ. ಪ್ರತಿಯೊಂದು ರೀತಿಯ ಬಲ್ಬ್ ವಿಭಿನ್ನವಾದ ಬೇಸ್ ಹೊಂದಿರುತ್ತದೆ. ನಿರ್ದಿಷ್ಟ ಗಾತ್ರದ ಬಲ್ಬ್‌ಗಳನ್ನು ಮಾತ್ರ ಆ ಬೇಸ್'ಗಳಿಗೆ ಹೊಂದಿಸಬೇಕು. ಬಲ್ಬ್‌ಗಳನ್ನು ಬದಲಿಸುವಾಗ ಹೆಚ್1, ಹೆಚ್3, ಹೆಚ್4, ಹೆಚ್7, ಹೆಚ್11, ಹೆಚ್‌ಪಿ3 ಹಾಗೂ ಹೆಚ್‌ಪಿ4 ಮಾದರಿಯ ಬಲ್ಬ್‌ಗಳನ್ನು ಪರಿಶೀಲಿಸಿ, ಕಾರಿಗೆ ಯಾವ ಬಲ್ಬ್ ಸೂಕ್ತವಾಗಿದೆ ಎಂಬುದನ್ನು ತಿಳಿದು ಅಳವಡಿಸಿ.

Most Read Articles

Kannada
English summary
Important things about headlights used in vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X