ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಶೀಘ್ರ ಲೋಕಾರ್ಪಣೆಗೆ ಬಿತ್ತು ಬ್ರೇಕ್... ಈ ಒಂದು ಪ್ರದೇಶದಿಂದ ವಿಳಂಬ!

ಬಹು ನಿರೀಕ್ಷಿತ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bangaluru-chennai expressway) ನಿರ್ಮಾಣ ಕಾರ್ಯ ಆರಂಭಿಸಿದಾಗ ಭರ್ಜರಿ ವೇಗವನ್ನು ಪಡೆದಿತ್ತು. ಅಕ್ಟೋಬರ್ 2024 ಕ್ಕೆ ಮುಗಿಸುವುದಾಗಿ ಹೇಳಲಾಗಿತ್ತು. ಆದ್ರೆ ಇದೀಗ ವಿಳಂಬವನ್ನು ಎದುರಿಸುತ್ತಿದೆ, ಮುಖ್ಯವಾಗಿ ಆಂಧ್ರಪ್ರದೇಶದ ಒಂದು ವಿಭಾಗದಲ್ಲಿನ ನಿಧಾನಗತಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಸ್ತುತ ಬೆಂಗಳೂರು - ಚೆನ್ನೈ ನಡುವಿನ ಪ್ರಯಾಣದ ಸಮಯವು ಆರರಿಂದ ಏಳು ಗಂಟೆಗಳಿದೆ. ಹೊಸ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕೇವಲ ಎರಡು ಗಂಟೆಗಳಿಗೆ ಈ ಪ್ರಯಾಣ ಸಮಯವನ್ನು ಕಡಿತಗೊಳಿಸಲಿದೆ. ಹೆದ್ದಾರಿಯು 90 ಮೀಟರ್ ಅಗಲವಿದ್ದು, 120 ಕಿ.ಮೀ ವೇಗವನ್ನು ಅನುಮತಿಸುತ್ತದೆ. ಕೋಲಾರ, ಚಿತ್ತೂರು, ವೆಲ್ಲೂರು, ಕಾಂಚೀಪುರಂ ಮತ್ತು ಚೆನ್ನೈನಂತಹ ಪ್ರದೇಶಗಳಲ್ಲಿನ 20.9 ಮಿಲಿಯನ್ (2 ಕೋಟಿ) ನಿವಾಸಿಗಳನ್ನು ಪರಸ್ಪರ ಸಂಪರ್ಕಿಸುತ್ತದೆ.

inauguration-of-bangalore-chennai-expressway-postponed-to-june-2025

ಇಂತಹ ಮಹತ್ವದ ಯೋಜನೆಯು ಈಗ ವಿಳಂಭವನ್ನು ಎದುರಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಸಮಗ್ರ ಯೋಜನೆಯು ಈಗ ಜೂನ್ 2025 ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಶೇ 51.5 ರಷ್ಟು ಪ್ರಗತಿಯನ್ನು ಗುರುತಿಸಲಾಗಿದೆ. 262 - ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ದೂರವನ್ನು ಶೇ13 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಲೋಕಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಸ್ತುತಪಡಿಸಿದ ವಿಸ್ತೃತ ಯೋಜನೆಯ ನವೀಕರಣದಲ್ಲಿ, ವಿವರವಾದ ಪ್ರಗತಿಯನ್ನು ಎತ್ತಿ ತೋರಿಸಲಾಗಿದೆ. 1,496.30 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ಮಾಲೂರಿನಿಂದ ಬಂಗಾರಪೇಟೆ (27.1 ಕಿಮೀ) ವರೆಗಿನ ವಿಸ್ತರಣೆಯು ಸೆಪ್ಟೆಂಬರ್ 20, 2021 ರಂದು ಪ್ರಾರಂಭವಾಯಿತು. ಈಗ ಶೇ 78.68 ರಷ್ಟು ಪೂರ್ಣಗೊಂಡಿದ್ದು, ಮಾರ್ಚ್ 31, 2024 ರೊಳಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ.

ಇನ್ನು ಹೊಸಕೋಟೆಯಿಂದ ಮಾಲೂರಿಗೆ ಸಂಪರ್ಕ ಕಲ್ಪಿಸುವ (26.4 ಕಿಮೀ) 2,761.12 ಕೋಟಿ ರೂ. ವೆಚ್ಚದ ಕಾಮಗಾರಿಯು ಸೆಪ್ಟೆಂಬರ್ 15, 2021 ರಂದು ಪ್ರಾರಂಭವಾಯಿತು. ಪ್ರಸ್ತುತ ಶೇ 77.12 ರಷ್ಟು ಕಾರ್ಯ ಪೂರ್ಣಗೊಂಡಿದೆ. ಮಾರ್ಚ್ 31, 2024 ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹಾಗೆಯೇ ಯೋಜನೆಯ ನಾಲ್ಕನೇ ಹಂತದ ಬೇತಮಂಗಲದಿಂದ ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿಯವರೆಗಿನ (25 ಕಿ.ಮೀ, ಯೋಜನೆಯ ವೆಚ್ಚ ರೂ 1,306.96 ಕೋಟಿ) ಕಾಮಗಾರಿ ಪ್ರಸ್ತುತ ಶೇ 39.83 ರಷ್ಟು ಪೂರ್ಣಗೊಂಡಿದೆ. ಅಕ್ಟೋಬರ್ 9, 2024 ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇವೆಲ್ಲವೂ ಬಹುತೇಕ ಅಂದುಕೊಂಡ ಸಮಯದ ಆಸುಪಾಸಿನಲ್ಲಿವೆ.

ಅತ್ಯಂತ ಮಹತ್ವದ ಹಿನ್ನಡೆಯು ಐದನೇ ಹಂತದಲ್ಲಿದ್ದು, ಬೈರೆಡ್ಡಿಪಲ್ಲಿ ಮತ್ತು ಬಂಗಾರುಪಾಳ್ಯಂ ನಡುವಿನ 31 ಕಿ.ಮೀ (ಯೋಜನೆಯ ವೆಚ್ಚ ರೂ 2,171.37 ಕೋಟಿ) ಕೇವಲ ಶೇ 10.05 ರಷ್ಟು ಪ್ರಗತಿಯನ್ನಷ್ಟೇ ಸಾಧಿಸಿದೆ. ಇದರ ಪೂರ್ಣಗೊಳಿಸುವಿಕೆಯು ಜೂನ್ 7, 2025 ರವರೆಗೆ ವಿಸ್ತರಿಸಬಹುದು, ಇದು ಒಟ್ಟಾರೆ ಪ್ರಾಜೆಕ್ಟ್ ಟೈಮ್‌ಲೈನ್‌ನಲ್ಲಿ ವಿಳಂಬವನ್ನು ತೋರಿಸುತ್ತದೆ.

ಇದಲ್ಲದೆ, ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ ವೇ ವಿಶಾಲವಾದ ಚೆನ್ನೈ - ದೆಹಲಿ ಎಕ್ಸ್‌ಪ್ರೆಸ್‌ ವೇ ನೆಟ್ವರ್ಕ್‌ನ ಅವಿಭಾಜ್ಯ ವಿಭಾಗವಾಗಿದೆ, ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ಯೋಜನೆಯ ಮೂಲಕ ಗ್ರೀನ್‌ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಮೂಲಕ ಬೆಂಗಳೂರು - ಮುಂಬೈ ಮಾರ್ಗವನ್ನು ಸಂಪರ್ಕಿಸುತ್ತದೆ.

ಇದನ್ನು 45,000 ಕೋಟಿ ರೂ.ಗಳ ಅಂದಾಜು ಮೌಲ್ಯದೊಂದಿಗೆ, ಈ ಉಪಕ್ರಮವು ಬೆಂಗಳೂರು ಮತ್ತು ಪುಣೆ ನಡುವಿನ ಅಂತರವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ 100 kmph ಸರಾಸರಿ ವೇಗವನ್ನು ಗುರಿಯಾಗಿಟ್ಟುಕೊಂಡು ವಿವರವಾದ ಯೋಜನಾ ವರದಿಯನ್ನು ರಚಿಸುವ ಪ್ರಯತ್ನಗಳು ನಡೆಯುತ್ತಿವೆ.

Article Published On: Friday, December 8, 2023, 18:15 [IST]
English summary
Inauguration of bangalore chennai expressway postponed to june 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+