ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧಗಳು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಇದರ ಬೆನ್ನಲ್ಲೇ ಆರ್ಥಿಕ ಸಮ್ಮೇಳನದಲ್ಲಿ ಚರ್ಚಿಸಲಾದ ಬೆಂಗಳೂರು-ಚೆನ್ನೈ ನಡುವಿನ ಹೈ ಸ್ಪೀಡ್ ಕಾರಿಡಾರ್ ನಿರ್ಮಾಣಕ್ಕೆ ಸಮ್ಮತಿಸಿದೆ.

By Praveen Sannamani

ಬೀಜಿಂಗ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯ ನಂತರ ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧಗಳು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಇದರ ಬೆನ್ನಲ್ಲೇ ಆರ್ಥಿಕ ಸಮ್ಮೇಳನದಲ್ಲಿ ಚರ್ಚಿಸಲಾದ ಪ್ರಮುಖ ಯೋಜನೆಗಳಲ್ಲಿ ಒಂದಾದ ಬೆಂಗಳೂರು-ಚೆನ್ನೈ ನಡುವಿನ ಹೈ ಸ್ಪೀಡ್ ಕಾರಿಡಾರ್ ನಿರ್ಮಾಣಕ್ಕೆ ಚೀನಾ ಸಮ್ಮತಿ ಸೂಚಿಸಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ವರದಿಗಳ ಪ್ರಕಾರ, ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಅವಧಿಯನ್ನು ತಗ್ಗಿಸುವ ಉದ್ದೇಶದಿಂದ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯ ಅನುಷ್ಠಾನಕ್ಕಾಗಿ ಭಾರತವು ಚೀನಾವನ್ನು ಸಂಪರ್ಕಿಸಿದ್ದು, ಭಾರತದ ಮಹತ್ವಾಂಕ್ಷಿ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದಾಗಿ ಚೀನಾ ಭರವಸೆ ನೀಡಿದೆ ಎನ್ನಲಾಗಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಕೇವಲ ಬೆಂಗಳೂರು ಟು ಚೆನ್ನೈ ಅಷ್ಟೇ ಅಲ್ಲದೇ ಆಗ್ರಾ ಟು ಝಾನ್ಸಿ ನಡುವಿನ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಾಣಕ್ಕೂ ಸಮ್ಮತಿ ಸೂಚಿಸಿರುವ ಚೀನಾ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ರೈಲುಗಳು ಸಂಚಾರ ಅವಧಿಯನ್ನು ಪರಿಣಾಮಕಾರಿ ತಗ್ಗಿಸಲಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಈ ಬಗ್ಗೆ ನೀತಿ ಆಯೋಗದ ರಾಜೀವ್ ಕುಮಾರ್ ಮಾತನಾಡಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಟು ಚೆನ್ನೈ ಹಾಗೂ ತದನಂತರ ಆಗ್ರಾ ಟು ಝಾನ್ಸಿ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಾಣಕ್ಕಾಗಿ ಚೀನಾ ಸಮ್ಮತಿಸಿದೆ ಎಂದಿದ್ದಾರೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಇದಕ್ಕಾಗಿ ಇನ್ನು ಕೆಲವೇ ದಿನಗಳಲ್ಲಿ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿರುವ ಚೀನಾ, ಯೋಜನೆಯ ಬಗ್ಗೆ ಅಧ್ಯಯನ ಕೈಗೊಳ್ಳಲಿದೆ. ಜೊತೆಗೆ ಭಾರತದಲ್ಲಿ ಅತಿ ವೇಗದ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಆಸಕ್ತಿ ಹೊಂದಿರುವ ಚೀನಾ, ಬೆಂಗಳೂರು ಟು ಚೆನ್ನೈ ನಡುವಿನ ಪ್ರಯಾಣ ಅವಧಿಯನ್ನು 90 ನಿಮಿಷಗಳಿಗೆ ತಗ್ಗಿಸುವ ನೀರಿಕ್ಷೆಯಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಯಾಕೇಂದ್ರೆ ಈ ಹಿಂದೆಯೇ ಈ ಬಗ್ಗೆ ಜರ್ಮನ್ ಮತ್ತು ಚೀನಾ ಅಧ್ಯಯನ ನಡೆಸಿದ್ದಲ್ಲೇ ಕಾರಣಾಂತರ ಮಹತ್ವದ ಯೋಜನೆಯನ್ನು ಅಲ್ಲಿಗೆ ಕೈಬಿಟ್ಟಿದ್ದವು. ಆದರೇ, ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಒಪ್ಪಂದದ ಫಲವಾಗಿ ಮಹತ್ವಾಂಕ್ಷಿ ಯೋಜನೆಗೆ ಮರುಜೀವ ಬಂದಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಹೀಗಾಗಿ ಬೆಂಗಳೂರು ಟು ಚೆನ್ನೈ ನಡುವಿನ ಒಟ್ಟು 340 ಕಿಮಿ ನಡುವಿನ ಪ್ರಯಾಣದ ಅವಧಿಯು 5 ಗಂಟೆಯಿಂದ 90 ನಿಮಿಷಗಳಿಗೆ ತಗ್ಗಲಿದ್ದು, ಈ ಭಾಗದಲ್ಲಿ ಅತಿಹೆಚ್ಚು ವೇಗವಾಗಿ ಪ್ರಯಾಣಿಸುವ ಜನ್ ಶತಾಬ್ದಿ ರೈಲಿಗಿಂತಲೂ ಹೊಸ ಕಾರಿಡಾರ್‌ನಲ್ಲಿ ಓಡಾಡುವ ರೈಲುಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿವೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಇಲ್ಲಿ ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್‌ಗಳಲ್ಲಿ ರೈಲುಗಳು ವೇಗವನ್ನು ಪ್ರತಿ ಗಂಟೆಗೆ 200ಕಿಮಿ ಹೆಚ್ಚಿಸಲು ಬಗ್ಗೆ ಚೀನಾ ಎದುರು ನೋಡುತ್ತಿದ್ದರು, ಭಾರತದಲ್ಲಿ ಅಂತಹ ವಾತಾರಣ ಇಲ್ಲದಿರುವುದು ಸಹ ಮಹತ್ವದ ಯೋಜನೆಗೆ ಹಿನ್ನೆಡೆಯಾಗುತ್ತಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಇದಕ್ಕೆ ಹಲವಾರು ಕಾರಣಗಳಿದ್ದು, ಅಸಮರ್ಪಕ ರೈಲ್ವೆ ಕ್ರಾಸಿಂಗ್‌ಗಳು, ಗುಣಮಟ್ಟದ ರೈಲ್ವೆ ಹಳಿಗಳು ಇಲ್ಲದಿರುವುದು ಮತ್ತು ವಿವಿಧ ಬಗೆಯ ತಾಂತ್ರಿಕ ಕಾರಣಗಳು ಸಹ ಹೈ ಸ್ಪೀಡ್ ರೈಲ್ವೆಗಳನ್ನು ಪರಿಚಯಿಸಲು ಹಿನ್ನೆಡೆಯಾಗುತ್ತಿದೆ. ಹೀಗಾಗಿಯೇ ಭಾರತದಲ್ಲಿ ಸದ್ಯ ಪ್ರತಿ ಗಂಟೆಗೆ 120 ಕಿಮಿ ವೇಗದಲ್ಲಿ ಚಲಿಸುವ ಶತಾಬ್ದಿ ಎಕ್ಸ್‌ಪ್ರೆಸ್ ಹೊರತುಪಡಿಸಿ ಇನ್ನಿತರೆ ರೈಲುಗಳು ಅಷ್ಟಾಗಿ ವೇಗ ಹೊಂದಿಲ್ಲ ಎನ್ನಬಹುದು.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಇದರಿಂದಾಗಿ ಉದ್ದೇಶಿತ ಬೆಂಗಳೂರು ಟು ಚೆನ್ನೈ ಮತ್ತು ಆಗ್ರಾ ಟು ಝಾನ್ಸಿ ನಡುವಿನ ಹೈ ಸ್ಪೀಡ್ ರೈಲ್ಪೆ ಕಾರಿಡಾರ್‌ಗಳನ್ನು ಅನುಷ್ಠಾನಗೊಂಡಲ್ಲಿ ಮಹಾನಗರಗಳ ವಾಣಿಜ್ಯ ಚಟುವಟಿಕೆಗಳನ್ನು ಮತ್ತಷ್ಟು ಗದಿಗೆದರಲಿದೆ ಎನ್ನಬಹುದು.

Most Read Articles

Kannada
Read more on train
English summary
China To Develop High-Speed Bangalore-Chennai Railway Corridor.
Story first published: Monday, April 23, 2018, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X