2015 ಇಂಡಿಯಾ ಬೈಕ್ ವೀಕ್‌ಗೆ ಕಿಚ್ಚು ಹಚ್ಚಿದ 'ಡ್ರೈವ್ ಸ್ಪಾರ್ಕ್'
ಬಹುನಿರೀಕ್ಷಿತ 2015 ಇಂಡಿಯಾ ಬೈಕ್ ವೀಕ್ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿರುವಂತೆಯೇ ದೇಶದ ನೆಚ್ಚಿನ ಬೈಕ್ ವೀಕ್‌ನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಗೋವಾದತ್ತ ಪಯಣ ಬೆಳೆಸಿದ್ದಾರೆ.
ಪ್ರಖ್ಯಾತ ಬೈಕ್ ವೀಕ್‌ನಲ್ಲಿ ದ್ವಿಚಕ್ರ ವಾಹನಗಳ ಪ್ರದರ್ಶನ ನಡೆಯುವುದು ವಾಡಿಕೆಯಾಗಿದೆ. ಆದರೆ ಇದರಿಂದ ವ್ಯತಿರಿಕ್ತವಾಗಿ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ತಮ್ಮ ಪಯಣಕ್ಕಾಗಿ ಮಹೀಂದ್ರ ಬೊಲೆರೊ ಕಾರನ್ನು ಆರಿಸಿದ್ದಾರೆ.

ಇದು ಪರಿಪೂರ್ಣ ಬೊಲೆರೊ ಟೆಸ್ಟ್ ಡ್ರೈವ್ ಪ್ರವಾಸ ಕೂಡಾ ಎಂದೆನಿಸಿಕೊಳ್ಳಲಿದೆ. ನಿಮ್ಮ ಮಾಹಿತಿಗಾಗಿ ಫೆಬ್ರವರಿ 19 ಮುಂಜಾವಿನ 3 ಗಂಟೆಯ ಹೊತ್ತಿನಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಗೋವಾದತ್ತ ಪಯಣ ಬೆಳೆಸಿತ್ತು.

ಈ ಬಾರಿಯ ಇಂಡಿಯಾ ಬೈಕ್ ವೀಕ್ ಗೋವಾದ ವ್ಯಾಗಟರ್‌ನಲ್ಲಿ ಫೆಬ್ರವರಿ 20 ಹಾಗೂ 21ರಂದು ಆಯೋಜನೆಯಾಗುತ್ತಿದೆ. ಇದರಂತೆ ನಮ್ಮ ತಂಡದವರು ಸಾಮಾನ್ಯಗಿಂತಲೂ ವಿಭಿನ್ನವಾಗಿ ಸಾಹಸಿ ರಸ್ತೆ ಪಯಣವನ್ನು ಆರಿಸಿಕೊಂಡಿದ್ದಾರೆ.

ಇಂಡಿಯಾ ಬೈಕ್ ವೀಕ್‌ನಲ್ಲಿ ನಮ್ಮ ತಂಡದ ವಿಶೇಷ ವರದಿಗಾಗಿ ಸದಾ ಓದುತ್ತಿರಿ ಡ್ರೈವ್ ಸ್ಪಾರ್ಕ್.


Click it and Unblock the Notifications








