Bullet Train: ಭಾರತದ ಬುಲೆಟ್ ರೈಲಿನ ವಿಡಿಯೋ ಹಂಚಿಕೊಂಡ ಸಚಿವ.. 2 ಗಂಟೆ ಪ್ರಯಾಣ, 320 ಕಿ.ಮೀ ವೇಗ

ಭಾರತದ ವಿವಿಧ ರೈಲು ನಿಲ್ದಾಣಗಳ ಆಕರ್ಷಕ ಚಿತ್ರಗಳು ಹಾಗೂ ಇಲಾಖೆಯಿಂದ ನಡೆಸುವ ಹಲವು ಕಾಮಗಾರಿ ಕುರಿತ ವಿವರವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸೋಮವಾರ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ವಿಡಿಯೋವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಯಾವುದೇ ಕನಸಲ್ಲ, ವಾಸ್ತವ.. ಮೋದಿ 3.0ನಲ್ಲಿ ಬುಲೆಟ್ ರೈಲಿಗಾಗಿ ಟ್ಯೂನ್ ಮಾಡಿ!' ಎಂಬ ಶೀರ್ಷೆಕೆಯಡಿ ಹೈಸ್ವೀಡ್ ರೈಲಿನ ಅನಿಮಿಷನ್ ವಿಡಿಯೋವನ್ನು ತೋರಿಸಲಾಗಿದ್ದು, ಮುಂಬೈ-ಅಹಮದಾಬಾದ್ ಕಾರಿಡಾರ್ (Mumbai-Ahmedabad corridor) ವಿಶೇಷತೆಗಳ ಬಗ್ಗೆ ವಿವರಿಸಲಾಗಿದೆ. ಇವೆರೆಡು ನಗರಗಳ ನಡುವೆ 508 ಕಿ.ಮೀ ದೂರವನ್ನು ಬುಲೆಟ್ ರೈಲು (Bullet Train) ಕೇವಲ 2 ಗಂಟೆಗಳಲ್ಲಿ ಕ್ರಮಿಸಲಿದ್ದು, ಗಂಟೆಗೆ ಗರಿಷ್ಠ 320 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.

India Bullet Train Video Railway Minister Posted 2 Hours Journey 320 Km Top Speed

ಮುಂಬೈ (Mumbai) ಮತ್ತು ಅಹಮದಾಬಾದ್ (Ahmedabad) ಬುಲೆಟ್ ರೈಲು ಮಾರ್ಗವನ್ನು ನವೀನ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಚಪ್ಪಡಿ ಹಳಿ ವ್ಯವಸ್ಥೆ (Slab Track System)ಯನ್ನು ಉಪಯೋಗ ಮಾಡಲಾಗಿದೆ. ಜೊತೆಗೆ ಆರಂಭಿಕ ಭೂಕಂಪ ಪತ್ತೆ ವ್ಯವಸ್ಥೆ (Early Earthquake Detection System)ಯನ್ನು ಅಳವಡಿಸಲಾಗಿದೆ.

ಈ ಬುಲೆಟ್ ರೈಲು ಮಾರ್ಗವು 24 ನದಿ ಸೇತುವೆ (River bridges), 28 ಉಕ್ಕಿನ ಸೇತುವೆ (Steel Bridges), 7 ಪರ್ವತ ಸೇತುವೆ (Mountain tunnels), 7 ಕಿ.ಮೀ ಆಳ ಸಮುದ್ರ ಸುರಂಗ (Long Undersea Tunnels), 12 ರೈಲು ನಿಲ್ದಾಣಗಳನ್ನು ಒಳಗೊಂಡಿದೆ. ಮುಂಬೈ ಹಾಗೂ ಅಹಮದಾಬಾದ್ ಕಾರಿಡಾರ್ ಕಾಮಗಾರಿಯು ನವೆಂಬರ್ 2021ರಲ್ಲಿ ಆರಂಭವಾಗಿತ್ತು. ಅಂದಿನಿಂದ ಈವರೆಗೆ ಸ್ಥಿರ ಪ್ರಗತಿಯನ್ನು ಕಾಣುತ್ತಿದೆ.

India Bullet Train Video Railway Minister Posted 2 Hours Journey 320 Km Top Speed

ಕಳೆದ ವರ್ಷ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ನಡುವಿನ ಮೊದಲ ಭಾಗದ 50 ಕಿ.ಮೀ ಉದ್ದ ಬುಲೆಟ್ ರೈಲು ಮಾರ್ಗದ ಕಾಮಗಾರಿಯು ಆಗಸ್ಟ್ 2026ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು. ರೈಲ್ವೆ ಇಲಾಖೆಯು ಈ ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಿದ ಮೇಲೆ ಪ್ರತಿದಿನ 70 ಟ್ರಿಪ್‌ಗಳೊಂದಿಗೆ 35 ಬುಲೆಟ್ ರೈಲುಗಳನ್ನು ಓಡಿಸಲಿದೆ.

ಈ ಬುಲೆಟ್ ರೈಲುಗಳ ಸಂಖ್ಯೆಯನ್ನು 2050ರ ವೇಳೆಗೆ 105ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಇವು ಸಂಚಾರ ಆರಂಭಿಸಿದ ಬಳಿಕ, ಪ್ರತಿ ವರ್ಷ ಸುಮಾರು 1.6 ಕೋಟಿ ಜನರು ಪ್ರಯಾಣಿಸುವ ನಿರೀಕ್ಷೆಯಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಯೋಜನೆ ಪೂರ್ಣಗೊಳ್ಳುವವರೆಗೂ ರೂ.1.08 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಸರ್ಕಾರವು ರೂ.10,000 ಕೋಟಿಯನ್ನು ಭರಿಸುತ್ತಿದ್ದು, ಗುಜರಾತ್ (Gujarat) ಮತ್ತು ಮಹಾರಾಷ್ಟ್ರ (Maharashtra) ಸರ್ಕಾರಗಳು ತಲಾ ರೂ.5,000 ಕೋಟಿಯನ್ನು ನೀಡುತ್ತಿವೆ. ಉಳಿದ ಹಣವನ್ನು ಜಪಾನ್‌ನಿಂದ ಸಾಲದ ಮೂಲಕ ಶೇಕಡ 0.1% ಬಡ್ಡಿದರದಲ್ಲಿ ಪಡೆಯಲಾಗಿದೆ. ಇನ್ನು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿರುವ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಇದಕ್ಕಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಸಾರ್'' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, February 14, 2024, 10:48 [IST]
English summary
India bullet train video railway minister posted 2 hours journey 320 km top speed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+