India's Longest Sea Bridge: ದೇಶದ ಅತಿ ಉದ್ದದ ಸಮುದ್ರ ಸೇತುವೆ ಜ.12ರಂದು ಲೋಕಾರ್ಪಣೆ.. ವಿಶೇಷತೆಗಳೇನು?
ಭಾರತದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ - Mumbai Trans Harbour Link) ಜನವರಿ 12 ರಂದು ಲೋಕಾರ್ಪಣೆಯಾಗಲಿದೆ. ಮುಂಬೈನಲ್ಲಿ ನಿರ್ಮಾಣಗೊಂಡಿವ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಭಾರತದ ಅತಿ ಉದ್ದದ ಸಮುದ್ರ ಸೇತುವೆ (India Longest Sea Bridge) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಈ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ಸೆವ್ರಿ ಹಾಗೂ ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. 21.8 ಕಿಲೋಮೀಟರ್ ಉದ್ದದ ಸೇತುವೆಯು ಸದ್ಯವಿರುವ ಪ್ರಯಣದ ಅವಧಿಯನ್ನು 15 - 20 ನಿಮಿಷಗಳವರೆಗೆ ಕಡಿತಗೊಳಿಸಲಿದೆ.

ಈಗಾಗಲೇ ಸೇತುವೆಗೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದು ಮಹಾರಾಷ್ಟ್ರದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೂ (Mumbai Pune Expressway) ಕೊಂಡಿಯಾಗಿದೆ. 'ಈ ಸೇತುವೆಯುಯಿಂದ ಸಾಕಷ್ಟು ಆರ್ಥಿಕ ಅಭಿವೃದ್ಧಿಯಾಗುತ್ತದೆ' ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕೂಡ ಹೇಳಿದ್ದಾರೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಅಟಲ್ ಸೇತು) 6 ಪಥದ ರಸ್ತೆಯನ್ನು ಹೊಂದಿದ್ದು, ಸಮುದ್ರದ ಮೇಲೆ 16.50 ಕಿಲೋಮೀಟರ್, ನೆಲದ ಮೇಲೆ 5.50 ಕಿಲೋಮೀಟರ್ ನಿರ್ಮಿಸಲಾಗಿದೆ. ಈ ಕಾಮಗಾರಿ ನಡೆಸಲು ಅಂದಾಜು ರೂ.17,843 ಕೋಟಿ ಖರ್ಚು ಮಾಡಲಿದ್ದು, ಮುಂಬೈ, ನವಿ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ ಪುಣೆ, ಗೋವಾ, ಪನ್ವೆಲ್ ನಗರಗಳ ಜನರಿಗೆ ಸಂಚಾರ ದಟ್ಟಣೆಯ ಕಿರಿ-ಕಿರಿ ತಪ್ಪಲಿದೆ.

ಈ ಸೇತುವೆ ಮೇಲೆ ಪ್ರತಿ ದಿನ 70,000ಕ್ಕೂ ಹೆಚ್ಚು ವಾಹನಗಳು ಸಂಚಾರಿಸುವ ನೀರಿಕ್ಷೆಯಿದೆ. ಒಂದೊಮ್ಮೆ ರಸ್ತೆಯಲ್ಲಿ ವಾಹನಗಳು ಕೆಟ್ಟು ನಿಂತಾಗ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾವನ್ನು ಅಳವಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಟೋಲ್ ವಿಚಾರಕ್ಕೆ ಬರುವುದಾದರೆ, ಕಾರುಗಳಿಗೆ ರೂ.250 ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.
ಉಳಿದಂತೆ ಮಿನಿ ಬಸ್‌ಗಳಿಗೆ ರೂ.560, ಬಸ್/ 2 - ಆಕ್ಸಲ್ ಟ್ರಕ್‌ಗಳಿಗೆ ರೂ.1180, 3 - ಆಕ್ಸಲ್ ಟ್ರಕ್‌ಗಳಿಗೆ ರೂ.1290, 4 - 6 ಆಕ್ಸಲ್ ವೆಹಿಕಲ್ ಗಳಿಗೆ ರೂ.1850 ಶುಲ್ಕ ವಿಧಿಸಲು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಹಿಂದೆ, ಮಹಾರಾಷ್ಟ ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ ಕಾರುಗಳಿಗೆ ರೂ.500 ಟೋಲ್ ಸಂಗ್ರಹಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಸೇತುವೆ ಡಿಸೆಂಬರ್ 25, 2023 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿಂದ ಉದ್ಘಾಟನೆಗೊಳ್ಳುವ ನೀರಿಕ್ಷೆಯಿತ್ತು. ಆದರೆ, ಒಂದಷ್ಟು ಕಾಮಗಾರಿ ಬಾಕಿಯಿದ್ದ ಕಾರಣ, ಜನವರಿ 12 ಕ್ಕೆ ಮುಂದೂಡಲಾಗಿದೆ. ಸೇತುವೆ ನಿರ್ಮಾಣವು 2018 ರಲ್ಲಿಯೇ ಆರಂಭವಾಗಿತ್ತು. 2022 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೋನಾ ಕಾರಣ ತಡವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications