90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಭಾರತದ ಮೊದಲ ಸೂಪರ್ ಫಾಸ್ಟ್ ರೈಲು ಎಂದು ಕರೆಯಲಾಗುವ ಡೆಕ್ಕನ್ ಕ್ವೀನ್ ರೈಲು ನಿನ್ನೆ 90ನೇ ವರ್ಷಕ್ಕೆ ಕಾಲಿಟ್ಟಿದೆ. ಈ ದಿನವನ್ನು ಸ್ಮರಣೀಯವಾಗಿಸಲು ರೈಲ್ವೆ ಇಲಾಖೆ ಹಾಗೂ ಪ್ರಯಾಣಿಕರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಡೆಕ್ಕನ್ ಕ್ವೀನ್ ರೈಲು ಮುಂಬೈ-ಪುಣೆ ಮಾರ್ಗದಲ್ಲಿ ಚಲಿಸುತ್ತದೆ. 1930ರ ಜೂನ್ 1ರಿಂದ ಡೆಕ್ಕನ್ ಕ್ವೀನ್ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಈ ಮಾರ್ಗವು ಮೊದಲು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ ವಿಭಾಗಕ್ಕೆ ಸೇರಿತ್ತು.

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ನಂತರ ಇದನ್ನು ವಿಭಜಿಸಿ ಸೆಂಟ್ರಲ್ ರೈಲ್ವೆ ಎಂದು ಮರು ನಾಮಕರಣ ಮಾಡಲಾಯಿತು. ಈಗ ಅದೇ ಹೆಸರಿನಿಂದ ಕರೆಯಲಾಗುತ್ತದೆ. ಆರಂಭದಲ್ಲಿ ಈ ರೈಲು ವಾರಾಂತ್ಯಗಳಲ್ಲಿ ಮಾತ್ರ ಸಂಚರಿಸುತ್ತಿತ್ತು ಎಂಬುದು ಗಮನಾರ್ಹ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಬ್ರಿಟಿಷರು ಈ ರೈಲಿನಲ್ಲಿ ತೆರಳಿ ರೇಸ್ ವೀಕ್ಷಿಸುತ್ತಿದ್ದರು. ಆ ಸಮಯದಲ್ಲಿ ಡೆಕ್ಕನ್ ಕ್ವೀನ್ ರೈಲನ್ನು ಬ್ರಿಟಿಷರು ಮಾತ್ರ ಬಳಸುತ್ತಿದ್ದರು. 1943ರಿಂದ ಭಾರತೀಯರಿಗೆ ಈ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ನೀಡಲಾಯಿತು.

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಈ ರೈಲು ಮಾರ್ಗದಲ್ಲಿ ಪ್ರಯಾಣಿಸಲು 8 ಆಣೆ ಖರ್ಚು ಮಾಡಬೇಕಾಗಿತ್ತು. ಈ ಮಾರ್ಗದಲ್ಲಿ ಸಂಚರಿಸಲು 2 ಗಂಟೆ 45 ನಿಮಿಷಗಳು ಬೇಕಾಗುತ್ತವೆ. ಈ ರೈಲು ಎರಡು ರ‍್ಯಾಕ್ ಹಾಗೂ 7 ಕಂಪಾರ್ಟ್ ಮೆಂಟ್'ಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಡೆಕ್ಕನ್ ಕ್ವೀನ್ ರೈಲು ಸಿಲ್ವರ್, ಸ್ಕಾರ್ ಲೆಟ್ ಹಾಗೂ ರಾಯಲ್ ಬ್ಲೂ ಬಣ್ಣವನ್ನು ಹೊಂದಿತ್ತು. ಈ ರೈಲಿನ ಮೂಲ ರ‍್ಯಾಕ್'ಗಳನ್ನು ಇಂಗ್ಲೆಂಡಿನಲ್ಲಿ ತಯಾರಿಸಲಾಗಿತ್ತು ಎಂಬುದು ಗಮನಾರ್ಹ.

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ನಂತರ ಇವುಗಳನ್ನು ಚೆನ್ನೈನ ಪೆರಂಬೂರಿನಲ್ಲಿ ರೈಲ್ವೆ ಬಾಕ್ಸ್ ಕಾರ್ಖಾನೆಯಲ್ಲಿ ತಯಾರಿಸಲಾಯಿತು. 1966ರಲ್ಲಿ ಈ ರೈಲ್ ಅನ್ನು ನವೀಕರಣಗೊಳಿಸಲಾಯಿತು. 1995ರಲ್ಲಿ ಡೆಕ್ಕನ್ ಕ್ವೀನ್ ರೈಲಿಗೆ ಹೊಸ ಬಾಕ್ಸ್'ಗಳನ್ನು ಸೇರಿಸಲಾಯಿತು.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಹೊಸ ಕಂಪಾರ್ಟ್ ಮೆಂಟ್'ಗಳನ್ನು ಹೆಚ್ಚು ಐಷಾರಾಮಿಯಾಗಿಸಿ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಉದ್ದೇಶದಿಂದ ಇವುಗಳಲ್ಲಿ ಹೆಚ್ಚು ಐಷಾರಾಮಿ ಸೀಟುಗಳನ್ನು ಅಳವಡಿಸಲಾಗಿದೆ.

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

2020ರ ಮಾರ್ಚ್ ತಿಂಗಳಿನಲ್ಲಿ ಹಳೆಯ ಬೋಗಿಗಳನ್ನು ತೆಗೆದುಹಾಕಿ ಎಲ್‌ಹೆಚ್‌ಪಿ ಬೋಗಿಗಳನ್ನು ಸೇರಿಸಲಾಯಿತು. ವಿವಿಧ ಮಹತ್ತರ ಬದಲಾವಣೆಗಳಿಗೆ ಒಳಗಾಗಿರುವ ಡೆಕ್ಕನ್ ಕ್ವೀನ್ ರೈಲು ಈಗ 17 ಬೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಇದರಲ್ಲಿ 4 ಎಸಿ ಬೋಗಿಗಳು, 1 ರೆಸ್ಟೋರೆಂಟ್ ಬಾಕ್ಸ್, 10 ಸೆಕೆಂಡ್ ಕ್ಲಾಸ್ ಸೀಟುಗಳು ಹಾಗೂ ಎರಡು ಸೆಕೆಂಡ್ ಕ್ಲಾಸ್ ಬ್ರೇಕ್ ವ್ಯಾನ್‌ಗಳು ಸೇರಿವೆ. ಆರಂಭದಲ್ಲಿ ರೈಲು ಡಬ್ಲ್ಯೂಸಿಪಿ ಡಿಸಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ನಂತರ ಇದನ್ನು ಡಬ್ಲ್ಯೂಸಿಎಂ - 1/2/4/5 ಡಿಸಿ ಹೈಬ್ರಿಡ್ ಲೋಕೋಮೋಟಿವ್‌ನಿಂದ ನಡೆಸಲಾಯಿತು. ಈಗ ಡಬ್ಲ್ಯೂಸಿಎಎಂ -3 ಅಥವಾ ಡಬ್ಲ್ಯೂಸಿಎಎಂ-2/2ಬಿ ಡಿಸಿ/ಎಸಿ ಲೋಕೋಮೋಟಿವ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

90ನೇ ವರ್ಷದ ಸಂಭ್ರಮದಲ್ಲಿ ಭಾರತದ ಮೊದಲ ಸೂಪರ್ ಫಾಸ್ಟ್ ರೈಲು

ಈ ಡೆಕ್ಕನ್ ಕ್ವೀನ್ ರೈಲು ಕೆಲವೊಮ್ಮೆ ಡಬ್ಲ್ಯೂಸಿಪಿ -7 ಎಂಜಿನ್'ನಿಂದ ನಿಯಂತ್ರಿಸಲ್ಪಡುತ್ತದೆ ಎಂಬುದು ಗಮನಾರ್ಹ. 90 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಭಾರತದ ಮೊದಲ ಸೂಪರ್ ಫಾಸ್ಟ್'ಗೆ ನಾವು ಸಹ ಶುಭ ಹಾರೈಸೋಣ.

ಚಿತ್ರ ಕೃಪೆ: ಸೆಂಟ್ರಲ್ ರೈಲ್ವೆ

Most Read Articles

Kannada
English summary
India's first super fast train celebrates 90th anniversary. Read in Kannada.
Story first published: Thursday, June 3, 2021, 12:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X