9 ನಿಮಿಷದಲ್ಲೇ 700 ಕೀ.ಮೀ. ಗುರಿ; ಅಗ್ನಿ-1 ಖಂಡಾಂತರ ಕ್ಷಿಪಣಿ ಪರೀಕ್ಷೆ
ಭಾರತೀಯ ಸೇನೆ ಮಗದೊಂದು ಮೈಲುಗಲ್ಲು ಸಾಧಿಸಿದ್ದು, ಪರಮಾಣು ಸಾಮರ್ಥ್ಯದ ಅಗ್ನಿ-1 ಖಂಡಾಂತರ ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಿದೆ. ಒಡಿಶಾ ಕರಾವಳಿಯಲ್ಲಿ 2016 ಮಾರ್ಚ್ 15ರಂದು (ಸೋಮವಾರ) ಯಶಸ್ವಿ ಉಡಾವಣೆಯನ್ನು ನಡೆಸಿದೆ.
Also Read: ಚೀನಾ ಮಿಸೈಲ್ ಪರೀಕ್ಷೆ; ಭಾರತದಲ್ಲೂ ಮಡುಗಟ್ಟಿದ ಆತಂಕ
700 ಕೀ.ಮೀ. ದೂರದ ವರೆಗೂ ಗುರಿಯಿಡುವ ಸಾಮರ್ಥ್ಯವನ್ನು ಅಗ್ನಿ-1 ಖಂಡಾಂತರ ಕ್ಷಿಪಣಿ ಹೊಂದಿರುತ್ತದೆ. ಇದನ್ನು ಅಬ್ದುಲ್ ಕಲಾಂ ದ್ವೀಪದಲ್ಲಿ ಸ್ಥಿತಗೊಂಡಿರುವ ಇಂಟೇಗ್ರೇಟಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಹಾರಾಟ ನಡೆಸಲಾಯಿತು.

ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಪರೀಕ್ಷಾರ್ಥ ಪ್ರಯೋಗದಂತೆ ಅಗ್ನಿ-1 ಕ್ಷಿಪಣಿಯು ಕೇವಲ 9 ನಿಮಿಷ 36 ಸೆಕೆಂಡುಗಳಲ್ಲೇ 700 ಕೀ.ಮೀ. ದೂರವನ್ನು ಗುರಿ ಹೊಡೆಯುವ ಸಾಮರ್ಥ್ಯ ಹೊಂದಿರುತ್ತದೆ.

ಅಗ್ನಿ-1 ಕ್ಷಿಪಣಿಯು ಅತ್ಯಾಧುನಿಕ ನೇವಿಗೇಷನ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಗುರಿ ಮುಟ್ಟಲು ಮತ್ತು ನಿಖರತೆಯನ್ನು ಕಾಪಾಡಿಕೊಳ್ಳಲು ನೆರವಾಗಿದೆ.

ಅಗ್ನಿ-1 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ವೇಳೆಯಲ್ಲಿ ನಿಖರತೆಯಲ್ಲಿ ಗುರಿ ತಲುಪುತ್ತಿದ್ದೆಯೇ ಎಂಬುದನ್ನು ಅತ್ಯಾಧುನಿಕ ರಾಡಾರ್ ಗಳ ಬ್ಯಾಟರಿಗಳು, ದೂರಸ್ಥಾಪಕ ವೀಕ್ಷಣೆ ಕೇಂದ್ರಗಳು, ಎಲೆಕ್ಟ್ರೊ-ಆಪ್ಟಿಕಲ್ ಉಪಕರಣ ಮತ್ತು ಯುದ್ಧ ನೌಕೆಗಳ ಮೂಲಕ ಟ್ರ್ಯಾಕ್ ಮಾಡಲಾಗಿತ್ತು.

ಈಗಾಗಲೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಅಗ್ನಿ-1 ಮಿಸೈಲ್, ನಿಖರತೆ, ವ್ಯಾಪ್ತಿ ಹಾಗೂ ಮಾರಕ ಪ್ರಭಾವದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ.

12 ಟನ್ ಭಾರದ ಅಗ್ನಿ-1 ಮಿಸೈಲ್, 15 ಮೀಟರ್ ಉದ್ದವಿದೆ. ಅಲ್ಲದೆ ಒಂದು ಟನ್ ಭಾರವನ್ನು ಹೊತ್ತೊಯ್ಯುವಷ್ಟು ಸಾಮರ್ಥ್ಯವನ್ನು ಪಡೆದಿದೆ. ಇನ್ನು ಭಾರ ಕಡಿಮೆ ಮಾಡಿದ್ದಲ್ಲಿ ಮತ್ತಷ್ಟು ಹೆಚ್ಚು ವ್ಯಾಪ್ತಿಯ ವರೆಗೂ ಗುರಿಯಿಡಬಹುದಾಗಿದೆ.

ಅಂದ ಹಾಗೆ ಅಗ್ನಿ-1 ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಪ್ರಯೋಗಾಲಯ ಮತ್ತು ಭಾರತ್ ಡೈನಾಮಿಕ್ ಲಿಮಿಟೆಡ್ ಒಗ್ಗೂಡುವಿಕೆಯಲ್ಲಿ ರಿಸರ್ಚ್ ಸೆಂಟರ್ ಇಮಾರತ್ ಜೊತೆ ಸೇರಿಕೊಂಡು ಪ್ರೀಮಿಯಂ ಕ್ಷಿಪಣಿ ಅಭಿವೃದ್ಧಿ ಪ್ರಾಯೋಗಾಲಯದಲ್ಲಿ ಅಡ್ವಾನ್ಸಡ್ ಸಿಸ್ಟಂ ಲ್ಯಾಬೋಲೇಟರಿ ಅಭಿವೃದ್ಧಿಗೊಳಿಸಿದೆ.

ನಿರಂತರ ಅಂತರಾಳದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಎಸ್ ಎಫ್ ಸಿ ತರಬೇತಿ ಚಟುವಟಿಕೆಗಳ ಭಾಗವಾಗಿ ಅಗ್ನಿ-1 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ಸೇನೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ 2015 ನವೆಂಬರ್ 27ರಂದು ನಡೆಸಿರುವ ಅಗ್ನಿ-1ರ ಪರೀಕ್ಷಾರ್ಥ ಉಡಾವಣೆಯು ಯಶ ಕಂಡಿತ್ತು.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು
ಭಾರತದ ವಾಯು ಪ್ರದೇಶದ ಸುರಕ್ಷತೆ ಕಾಯುವ ಯುದ್ಧ ವಿಮಾನಗಳು


Click it and Unblock the Notifications








