ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಬೈಕ್‌ ಸವಾರರು ತಮ್ಮ ಅತ್ಯಮೂಲ್ಯ ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಆದರೆ ಸರ್ಕಾರವು ಜನರ ಜೀವ ಉಳಿಸುವ ಹೆಲ್ಮೆಟ್‌ಗಳ ಮೇಲಿಯು ಜಿಎಸ್‌ಟಿ ತೆರಿಗೆಯನ್ನು ವಿಧಿಸುತ್ತಿದ್ದಾರೆ. ಈ ನಡುವೆ ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವಂತೆ ಇಂಟರ್‌ನ್ಯಾಷನಲ್ ರೋಡ್ ಫೆಡರೇಶನ್ ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ದ್ವಿಚಕ್ರ ವಾಹನ ಅಪಘಾತ ಸಂದರ್ಭದಲ್ಲಿಸವಾರರ ತಲೆ ನೆಲಕ್ಕೆ ಅಪ್ಪಳಿಸಿ, ತಲೆಗೆ ಆಗುವ ಗಾಯದಿಂದ ಸಾಯುವವರ ಸಂಖ್ಯೆಯೇ ಹೆಚ್ಚು. ಅಪಘಾತ ಸಂದರ್ಭಗಳಲ್ಲಿದ್ವಿಚಕ್ರ ವಾಹನ ಸವಾರರ ತಲೆಗೆ ಪೆಟ್ಟು ಬೀಳದಂತೆ ಹೆಲ್ಮೆಟ್‌ ರಕ್ಷಿಸುತ್ತದೆ. ಇದರಿಂದ ಬಹಳಷ್ಟು ಜೀವಗಳು ಉಳಿಯುತ್ತದೆ. ಇದಕ್ಕಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್‌ ಧರಿಸದ ಸವಾರರಿಗೆ ಭಾರೀ ಮೊತ್ತದ ದಂಡ ಪ್ರಯೋಗವು ನಡೆಯುತ್ತಿದೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಆದರೆ, ಪೊಲೀಸರ ಕಣ್ಣಿಗೆ ಮಣ್ಣೆರಚಲು ಮುಂದಾಗಿರುವ ದ್ವಿಚಕ್ರ ವಾಹನ ಸವಾರರು, ಹಣದಾಸೆಯಿಂದ ಕಳಪೆ ಗುಣಮಟ್ಟದ ಹೆಲ್ಮೆಟ್‌ ಖರೀದಿಸಿ ಧರಿಸುತ್ತಿದ್ದಾರೆ. ಇದರಿಂದ ಮೂಲ ಉದ್ದೇಶವೇ ವಿಫಲವಾಗುತ್ತಿದೆ. ಅಲ್ಲದೇ ಸರ್ಕಾರ ಕೂದ ಹೆಲ್ಮೆಟ್‌ಗಳ ಮೇಲೇ ಜಿಎಸ್‌ಟಿ ತೆರಿಗೆಯನ್ನು ವಿಧಿಸುತ್ತಿದ್ದಾರೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಜನರು ಕಡಿಮೆ ದರದ ಕಳೆಪೆ ಹೆಲ್ಮೆಟ್‌ ಧರಿಸಲು ಇದು ಕೂಡ ಒಂದು ಕಾರಣವಾಗಿದೆ. ಈ ನಡುವೆ ಹೆಲ್ಮೆಟ್‌ಗಳ ಮೇಲೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಹಿಂಪಡೆಯುವಂತೆ ಜಾಗತಿಕ ರಸ್ತೆ ಸುರಕ್ಷತಾ ಸಂಸ್ಥೆ ಇಂಟರ್‌ನ್ಯಾಶನಲ್ ರೋಡ್ ಫೆಡರೇಷನ್ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಇದು ದ್ವಿಚಕ್ರ ವಾಹನ ಸವಾರರ ರಸ್ತೆ ಅಪಘಾತದ ಸಾವುನೋವುಗಳನ್ನು ಕಡಿಮೆ ಮಾಡಲು ಮಾತ್ರವಲ್ಲದೆ ನಮ್ಮ ಆರ್ಥಿಕತೆಯಲ್ಲಿ ರಸ್ತೆಯಿಂದಾಗಿ ಜಿಡಿಪಿ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಕಪಿಲಾ ಹೇಳಿದರು.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಪ್ರಸ್ತುತ, ಹೆಲ್ಮೆಟ್‌ಗಳ ಮೇಲೆ ಅನ್ವಯವಾಗುವ ಜಿಎಸ್‌ಟಿ ದರವು ಶೇಕಡಾ 18 ಆಗಿದೆ. ಅಂತರಾಷ್ಟ್ರೀಯ ರಸ್ತೆ ಒಕ್ಕೂಟದ (IRF) ಅಧ್ಯಕ್ಷ ಕೆ ಕೆ ಕಪಿಲ ಅವರು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ರಸ್ತೆ ಅಪಘಾತವು ಜಾಗತಿಕ ಅಪಾಯವಾಗಿದೆ ಎಂದು ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ (IRF) ಅಧ್ಯಕ್ಷ ಕೆ ಕೆ ಕಪಿಲಾ ಅವರು ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

"ರಸ್ತೆ ಸುರಕ್ಷತಾ ತಜ್ಞರ ಪ್ರಕಾರ, 2025 ರ ವೇಳೆಗೆ ರಸ್ತೆ ಅಪಘಾತದ ಸಾವುನೋವುಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು, 2030ರ ಅಂತ್ಯದ ಮೊದಲು, ಹೆಲ್ಮೆಟ್‌ಗಳ ಮೇಲೆ ಯಾವುದೇ ಜಿಎಸ್‌ಟಿ ಇರಬಾರದು" ಎಂದು ಅವರು ಹೇಳಿದರು.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಇನ್ನು ದ್ವಿಚಕ್ರ ವಾಹನ ಸವಾರರ ಸಾವುಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಆರ್ಥಿಕತೆಯಲ್ಲಿ ರಸ್ತೆ ಅಪಘಾತಗಳಿಂದಾಗಿ ಜಿಡಿಪಿ ನಷ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಪಿಲಾ ಹೇಳಿದರು.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಇನ್ನು ಗ್ರಾಹಕರ ಬೇಡಿಕೆಯೆಂತೆ ಮಾರುಕಟ್ಟೆಯಲ್ಲಿ ಇದೀಗ ಹಲವಾರು ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ. ಹೆಲ್ಮೆಟ್‌ನಿಂದ ಕೇವಲ ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಗರಿಷ್ಠ ಸುರಕ್ಷತೆ ನೀಡಲಿದೆ ಎನ್ನುವುದನ್ನು ಅರಿತಿರುವ ಬೈಕ್ ಸವಾರರು ವಿವಿಧ ಮಾದರಿಗಳ ಹೆಲ್ಮೆಟ್ ಬಳಕೆ ಮಾಡುತ್ತಿದೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಇತ್ತೀಚೆಗೆ ಮಾರುಕಟ್ಟೆಗೆ ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಸಹ ಖರೀದಿಗೆ ಲಭ್ಯವಾಗಿದೆ. ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ (Shellios Technolabss) ಎನ್ನುವ ಕಂಪನಿಯೊಂದು ಈ ವಿಶೇಷ ಹೆಲ್ಮೆಟ್ ಅನ್ನು ಅಭಿವೃದ್ದಿಪಡಿಸಿ ಬಿಡುಗಡೆ ಮಾಡಿದ್ದು, ಈ ಹೆಲ್ಮೆಟ್ ಅನ್ನು ವಿಶೇಷವಾಗಿ ಮಾಲಿನ್ಯದಿಂದ ಬೈಕ್ ಸವಾರರನ್ನು ರಕ್ಷಣೆ ಮಾಡುವ ಉದ್ದೇಶ ಹೊಂದಿದೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಹೆಚ್ಚುತ್ತಿರುವ ವಾಹನಗಳ ಪರಿಣಾಮ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಮಾಲಿನ್ಯ ಪ್ರಮಾಣವು ವಿಪರಿತವಾಗಿ ಹೆಚ್ಚಳವಾಗುತ್ತಿದೆ. ಬೈಕಿನಲ್ಲಿ ಪ್ರಯಾಣಿಸುವ ರೈಡರ್‌ಗಳು ಮಾಲಿನ್ಯದಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸುವುದನ್ನು ತಪ್ಪಿಸಲು ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಈ ವಿಶೇಷ ಹೆಲ್ಮೆಟ್ ತಯಾರಿಸಲಾಗಿದೆ.

ಸಾವು-ನೋವುಗಳನ್ನು ಕಡಿಮೆ ಮಾಡಲು ಹೆಲ್ಮೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಕೈಬಿಡಲು ಒತ್ತಾಯಿಸಿದ IRF

ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಕಂಪನಿಯನ್ನು ಎಲೆಕ್ಟ್ರಿಕಲ್ ಇಂಜಿನಿಯರ್ ಅಮಿತ್ ಪಾಠಕ್ ಎನ್ನುವರು ಆರಂಭಿಸಿದ್ದು, ಬೈಕ್ ಸವಾರಿಗೆ ಉತ್ತಮವಾದ ಗಾಳಿ ಸೇವನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಏರ್‌ಫಿಲ್ಟರ್ ಹೊಂದಿರುವ ಹೆಲ್ಮೆಟ್ ನಿರ್ಮಾಣ ಮಾಡಲಾಗಿದೆ. ಹೆಲ್ಮೆಟ್ ಒಳಭಾಗದಲ್ಲಿ ಏರ್‌ಫಿಲ್ಟರ್ ಅಳವಡಿಸಲಾಗಿದ್ದು, ಬೈಕ್ ಸವಾರರು ಹೆಲ್ಮೆಟ್ ಹಾಕಿದ ನಂತರ ಹೊರಗಿನ ಧೂಳು, ವಾಹನಗಳ ಮಾಲಿನ್ಯದಿಂದ ಗರಿಷ್ಠ ರಕ್ಷಣೆ ಒದಗಿಸುತ್ತದೆ.

Most Read Articles

Kannada
English summary
India to withdraw gst on helmet irf urge details
Story first published: Wednesday, November 16, 2022, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X