ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಹೊಸ ಉಪಕರಣ ಸಿದ್ದಪಡಿಸಿದ ಭಾರತೀಯ ಸೇನೆ

ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವು ಕೂಡ ಒಂದಾಗಿದೆ. ಪ್ರತಿ ತಿಂಗಳು ಸಾವಿರಾರು ಜನರು ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಪಾಘತಕ್ಕೆ ಡ್ರಿಂಕ್ ಅಂಡ್ ಡ್ರೈವ್ ಕೂಡ ಒಂದು ಪ್ರಮುಖ ಕಾರಣವಾಗಿದೆ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಭಾರತದಲ್ಲಿ ದಿನಗಳು ಕಳೆದಂತೆ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಭಾರತದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಅದೇಷ್ಟು ಅಪಘಾತಗಳಿಗೆ ಕಾರಣವಾಗಿದೆ. ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಅಮಾಯಕರ ಜೀವ ತೆಗೆದ ಹಲವಾರು ಪ್ರಕರಣಗಳ ಉದಾಹರಣೆಯು ನಮ್ಮ ಮುಂದೆ ಇದೆ. ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಲು ನಮ್ಮ ಸೈನಿಕರು ಹೊಸ ಪರಿಹಾರವನ್ನು ಕಂಡುಕೊಂಡಿದೆ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಕ್ಯಾಪ್ಟನ್ ಓಂಕಾರ್ ಕೇಲ್ ಮತ್ತು ಅವರ ತಂಡವು ಮಿಲಿಟರಿ ಟ್ರಕ್‍‍ಗಳಿಗಾಗಿ(ಐ‍ವಿಎಸ್ಎಸ್) ಇಂಟಿಗ್ರೇಟಿಡ್ ವೆಹಿಕಲ್ ಸೇಫ್ಟಿ ಸಿಸ್ಟಂ ಅನ್ನು ಅಭಿವೃದ್ದಿಪಡಿಸಲಾಗಿದೆ. ಈ ಉಪಕರಣವನ್ನು ಬಳಸಿ ಕುಡಿದು ವಾಹನ ಚಲಾಯಿಸುದಕ್ಕೆ ಬ್ರೇಕ್ ಹಾಕಬಹುದು.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಭಾರತೀಯ ಸೇನೆಯು ನಿರ್ಮಿಸಿದ ಮೂರು ರೆಕ್ಕೆಯ ಮಾದರಿಯ ಉಪಕರಣವನ್ನು ವಾಹನಕ್ಕೆ ಅಳವಡಿಸಿದಾಗ ಚಾಲಕನು ಮಧ್ಯ ಸೇವೆನೆ ಮಾಡಿದ್ದರೆ ವಾಹನವು ಸ್ಟ್ರಾಟ್ ಆಗುವುದಿಲ್ಲ. ಅಲ್ಲದೇ ಚಾಲಕನು ಸೀಟ್ ಬೆಲ್ಟ್ ಧರಿಸದಿದ್ದರೂ ವಾಹನ ಸ್ಟ್ರಾಟ್ ಆಗುವುದಿಲ್ಲ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಸಶಸ್ತ್ರ ಪಡೆಗಳಲ್ಲಿನ ಅಪಘಾತಗಳನ್ನು ಕಡಿಮೆ ಮಾಡಲು ಐವಿಎಸ್ಎಸ್ ಸಿಸ್ಟಂ ಅನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಗಳಿವೆ. ಕಳೆದ ವರ್ಷದ ಉತ್ತರಾಖಂಡ ರೆಸಿಡೆನ್ಷಿಯಲ್ ಯೂನಿವರ್ಸಿಟಿ ಮತ್ತು ಆರ್‍ಐ ಇನ್‌ಸ್ಟ್ರುಮೆಂಟ್ ಅಂಡ್ ಇನ್ನೋವೇಶನ್ ಇಂಡಿಯಾ, ಇವರು ಕೂಡ ಒಂದು ಉಪಕರಣವನ್ನು ಕಂಡು ಹಿಡಿದಿದ್ದರು.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಇದರಲ್ಲಿ ಚಾಲಕನು ಮಧ್ಯ ಸೇವಿಸಿದರೆ ವಾಹನವನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಚಾಲಕನು ವಾಹನ ಚಲಾಯಿಸುವಾಗ ಫೋನ್‍‍ನಲ್ಲಿ ಮಾತನಾಡುತ್ತಿದ್ದಾರೆ ವಾಹನ ಚಲಿಸುತ್ತಿರಲಿಲ್ಲ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಸೈನ್ಯದ ತಂಡವು ತ್ಯಾಜ್ಯ ಉತ್ಪನ್ನಗಳು ಮತ್ತು ಕಾಡು ಹುಲ್ಲುಗಳಿಂದ ಉತ್ಪತ್ತಿಯಾಗುವ ಗ್ರ್ಯಾಫೀನ್ ಅನ್ನು ಬಳಸುವ ಮೂಲಮಾದರಿಯನ್ನು ಅಭಿವೃದ್ದಿಪಡಿಸಿದೆ. ಈ ಉಪಕರಣವನ್ನು ಅಭಿವೃದ್ದಿಪಡಿಸುವ ತಂಡದ ಸದಸ್ಯರಾದ ಜೋಶಿ ಅವರು ಮಾತನಾಡಿ, ಈ ಗ್ರ್ಯಾಫೀನ್ ಮೂಲಕ ಯಾವುದೇ ಅಲ್ಕೋಹಾಲ್ ಅಂಶಗಳು ಪತ್ತೆಯಾದರೆ ಆಟೋಮ್ಯಾಟಿಕ್ ಆಗಿ ವಾಹನ ನಿಲ್ಲುತ್ತದೆ ಎಂದು ಹೇಳಿದರು.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ವಾಹನವನ್ನು ಪ್ರವೇಶಿಸಿದ ಬಳಿಕ ಚಾಲಕನು ಗ್ರ್ಯಾಫೀನ್ ಸೆನ್ಸಾರ್‍ ಬಳಿ ಚಾಲಕ ಪರೀಕ್ಷಿಸಬೇಕು. ಚಾಲಕನ ರಕ್ತದಲ್ಲಿರುವ ಅಲ್ಕೋಹಾಲ್ ಮಟ್ಟವನ್ನು ವಿಶ್ಲೇಷಿಸುತ್ತದೆ ಮತ್ತು ಅಂದಾಜು ಮಾಡುತ್ತದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ 100ಎಂಎಲ್ ರಕ್ತದಲ್ಲಿ 30ಎಂಎಲ್ ಅಷ್ಟು ಅಲ್ಕೋಹಾಲ್ ಅನುಮತಿ ಇದೆ. ಇದಕ್ಕಿಂತ ಹೆಚ್ಚಿನ ಅಂಶದಲ್ಲಿ ಅಲ್ಕೋಹಾಲ್ ಸೇವಿಸಿದರೆ ವಾಹನವು ಸ್ಟ್ರಾಟ್ ಆಗುವುದಿಲ್ಲ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಚಾಲಕನ ಬದಲು ಇತರ ವ್ಯಕ್ತಿಯು ಪರಿಕ್ಷಿಸಿದ ಬಳಿಕ ಚಾಲಕ ವಾಹನ ಡ್ರೈವ್ ಮಾಡಲು ಮುಂದಾದರೆ ವಾಹನವು ಸ್ಟ್ರಾಟ್ ಆಗುವುದಿಲ್ಲ. ಗ್ರ್ಯಾಫೀಸ್ ಸೆನ್ಸಾರ್ ಮೂಲಕ ಆಟೋಮ್ಯಾಟಿಕ್ ಆಗಿ ಚಾಲಕನನ್ನು ಪತ್ತೆ ಹಚ್ಚುತ್ತದೆ. ಚಾಲಕನು ನಿದ್ರೆಯ ಬಂಪರ್‍‍ನಲ್ಲಿ ಇದ್ದರೆ ಅಥವಾ ಚಾಲಕ ಫೋನ್‍‍ನಲ್ಲಿ ಮಾತನಾಡುತ್ತಿದ್ದರೆ ವಾರ್ನಿಂಗ್ ಸಂದೇಶ ನೀಡುತ್ತದೆ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಅಮೆರಿಕಾ ಮತ್ತು ಯುರೋಪಿನಂತಹ ಮುಂದುವರೆದ ದೇಶಗಳಲ್ಲಿ ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು ಸಹಾಯ ಮಾಡುವ ಸಾಕಷ್ಟು ತಂತ್ರಜ್ಞಾನಗಳನ್ನು ಹೊಂದಿದ್ದರೂ, ಭಾರತದಲ್ಲಿ ಇನ್ನೂ ಕೂಡ ಅಂತಹ ತಂತ್ರಜ್ಞಾನಗಳು ಸರಿಯಾಗಿ ಬಳಕೆಗೆ ಬಂದಿಲ್ಲ.

ಡ್ರಿಂಕ್ ಅಂಡ್ ಡ್ರೈವ್‍‍ಗೆ ಬ್ರೇಕ್ ಹಾಕಲು ಭಾರತೀಯ ಸೈನ್ಯದಿಂದ ಹೊಸ ಉಪಕರಣ

ಭಾರತೀಯ ಸೈನ್ಯವು ನಿರ್ಮಿಸಿದ ಈ ಐವಿಎಸ್ಎಸ್ ಸಿಸ್ಟಂ ಅನ್ನು ದೇಶದ ಉತ್ಪಾದರಿಗೆ ಮಾರಾಟ ಮಾಡಬಹುದಾಗಿದೆ. ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ದಿ ಪಡಿಸಿ ಬಳಕೆಗೆ ತರಬಹುದಾಗಿದೆ. ಇದರಿಂದ ಡ್ರಿಂಕ್ ಅಂಡ್ ಡ್ರೈವ್ ಮಾಡುವುದನ್ನು ತಡೆಯಬಹುದಾಗಿದೆ.

Most Read Articles

Kannada
English summary
Indian Army Builds System To Check Drunk Driving And Not Wearing Seat Belts - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X