ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!
ಬೊಲೆರೊ, ಮಹೀಂದ್ರಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದು. ಈ ಕಾರ್ ಅನ್ನು ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತವೆ. ಪೊಲೀಸ್ ಇಲಾಖೆ ಹಾಗೂ ಭಾರತೀಯ ಸೇನೆಯು ಈ ಕಾರ್ ಅನ್ನು ಹೆಚ್ಚು ಬಳಸುತ್ತವೆ. ಸರ್ಕಾರಿ ಅಧಿಕಾರಿಗಳ ಅಧಿಕೃತ ಬಳಕೆಗಾಗಿಯೂ ಸಹ ಇದೇ ಕಾರ್ ಅನ್ನು ನೀಡಲಾಗುತ್ತದೆ.

ಎಂಯುವಿ ವಾಹನಗಳನ್ನು ಆಫ್-ರೋಡ್ ಹಾಗೂ ಆನ್-ರೋಡ್‌ಗಳಲ್ಲಿ ಸರಾಗವಾಗಿ ಚಲಿಸುವಂತೆ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚಿನ ಎಂಜಿನ್ ಸಾಮರ್ಥ್ಯದಿಂದ ನಿರ್ಮಿಸಲಾಗಿರುತ್ತದೆ. ಈ ವಾಹನಗಳು ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳ ಒರಟು, ಭೂಪ್ರದೇಶವನ್ನು ಹಾದುಹೋಗುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಈ ಕಾರಣಕ್ಕೆ ಸರ್ಕಾರವು ಈ ಕಾರ್ ಅನ್ನು ಖರೀದಿಸುವಂತೆ ತನ್ನ ಉದ್ಯೋಗಿಗಳಿಗೆ ಶಿಫಾರಸು ಮಾಡುತ್ತಿದೆ. ಮಹೀಂದ್ರಾ ಕಂಪನಿಯ ಈ ಅಪ್ರತಿಮ ಬೊಲೆರೊ ಎಂಯುವಿಯು ಕಾರು ಅಪಘಾತಕ್ಕೀಡಾಗಿರುವ ವೀಡಿಯೊವೊಂದು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವರದಿಗಳ ಪ್ರಕಾರ, ಈ ಕಾರು ಜಮ್ಮ ಕಾಶ್ಮೀರದ ಕುಪ್ವಾರ ಜಿಲ್ಲೆಯ ಉಪ-ಜಿಲ್ಲಾಧಿಕಾರಿಗಳ ಅಧಿಕೃತ ವಾಹನವಾಗಿತ್ತು. ಈ ಕಾರಿನಲ್ಲಿಉಪ-ಜಿಲ್ಲಾಧಿಕಾರಿಗಳು ಸೇರಿದಂತೆ ಕರ್ನಾ ಪ್ರದೇಶದ ಇಬ್ಬರು ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದರು.

ಉತ್ತರ ಕಾಶ್ಮೀರದಲ್ಲಿರುವ ಶೀತ ವಾತಾವರಣದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಸೇನೆಯು ಕಾರಿನಲ್ಲಿದ್ದವರನ್ನು ರಕ್ಷಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಘಟನೆ ಏಪ್ರಿಲ್ 22ರಂದು ನಡೆದಿದೆ ಎಂದು ಹೇಳಲಾಗಿದೆ. ಈ ಕಾರಿನಲ್ಲಿದ್ದ ಉಪ-ಜಿಲ್ಲಾಧಿಕಾರಿಗಳಾದ ಬಿಲಾಲ್ ಮೋಹಿ-ಆಸ್-ದಿನ್ ಹಾಗೂ ಇತರ ಇಬ್ಬರು ಸಹ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಯಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕಾರನ್ನು ಹೊರತೆಗೆದ ನಂತರ ಸೈನಿಕರು ರಸ್ತೆಯನ್ನು ಸರಿಪಡಿಸಿದರು. ಭಾರತದ ಬಹುತೇಕ ಭಾಗಗಳಲ್ಲಿ ಬಿರು ಬಿಸಿಲು ಉಂಟಾಗಿದ್ದರೆ, ಕಾಶ್ಮೀರದ ಕೆಲವು ಭಾಗಗಳಲ್ಲಿ ಇನ್ನೂ ಹಿಮಪಾತವಾಗುತ್ತಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೆಲ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಈ ರೀತಿಯ ಹಿಮಪಾತ ಉಂಟಾಗುತ್ತಿದೆ. ಕಾಶ್ಮೀರದಲ್ಲಿ ಈ ರೀತಿಯ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿಯೇ ಮಹೀಂದ್ರಾದ ಬೊಲೆರೊ ಕಾರು ಹಿಮದಲ್ಲಿ ಸಿಲುಕಿ ಅಪಘಾತಕ್ಕೀಡಾಗಿದೆ.
ಉಪ-ಜಿಲ್ಲಾಧಿಕಾರಿಗಳು ಕರೋನಾ ವೈರಸ್ ಹರಡುವಿಕೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿಮ ಕಾರಿನ ಮೇಲೆ ಬಿದ್ದ ಕಾರಣಕ್ಕೆ ಕಾರಿನ ರೂಫ್‌ಗೆ ಹಾನಿಯಾಗಿದ್ದು, ಮುಂಭಾಗದ ವಿಂಡ್ ಷೀಲ್ಡ್ ಚೂರುಚೂರಾಗಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ಘಟನೆಯನ್ನು ಹತ್ತಿರದಿಂದ ನೋಡಿದವರು, ಹಿಮದ ಮೇಲ್ಭಾಗದಲ್ಲಿ ಕಾರು ಸಿಕ್ಕಿಬಿದ್ದ ಕಾರಣಕ್ಕೆ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಒಂದು ವೇಳೆ ಅವರ ಕಾರು 500 ಅಡಿ ಆಳದಲ್ಲಿ ಸಿಕ್ಕಿ ಬಿದ್ದಿದ್ದರೆ ದುರ್ಘಟನೆ ನಡೆಯುವ ಸಾಧ್ಯತೆಗಳಿದ್ದವು ಎಂದು ಹೇಳಿದ್ದಾರೆ.


Click it and Unblock the Notifications