ಹೆದ್ದಾರಿಯಲ್ಲಿ ಭಾರತೀಯ ಸೇನಾ ಯುದ್ಧ ಟ್ಯಾಂಕರ್ ಪತ್ತೆ... ಟ್ರಾಫಿಕ್ ಜಾಮ್... ಸೈನಿಕರೇಕೆ ಬಿಟ್ಟೋದರು?

ಭಾರತದಲ್ಲಿ ಸೇನಾ ಪಡೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತಮ್ಮ ಮಿಲಿಟರಿ ವಾಹನಗಳನ್ನು ಸಾಗಿಸುವುದನ್ನು ನೋಡಿರುತ್ತೇವೆ. ಹಾಗೆಯೇ ಬೃಹತ್ ವಾಹನಗಳು ಅಥವಾ ಇತರ ವಸ್ತುಗಳನ್ನು ಟ್ರಾಕ್ ಇಲ್ಲವೇ ಟ್ರೈನ್ ಮೂಲಕ ಸಾಗಿಸುತ್ತಾರೆ. ಆದರೆ ಇಲ್ಲೊಂದು ಯುದ್ಧ ಟ್ಯಾಂಕರ್ ಅನ್ನು ರಸ್ತೆಯಲ್ಲಿ ಓಡಿಸಿಕೊಂಡು ಬಂದು ಮಾರ್ಗ ಮಧ್ಯೆ ಬಿಟ್ಟೋದ ರೀತಿಯಲ್ಲಿ ಕಂಡಬಂದಿದೆ.

ಇತ್ತೀಚೆಗೆ ಜನನಿಬಿಡ ಹೆದ್ದಾರಿಯಲ್ಲಿ ಭಾರತೀಯ ಸೇನೆಯ ಟ್ಯಾಂಕ್ ಅನ್ನು ಬಿಟ್ಟುಹೋಗಿರುವ ವೀಡಿಯೊವೊಂದು ಸಖತ್ ವೈರಲ್ ಆಗಿದೆ. ಕುಂಡ್ಲಿ ಮನೇಸರ್ ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ ವೇನಲ್ಲಿ ಟ್ಯಾಂಕ್ ಕಂಡುಬಂದಿದೆ. ಈ ವಿಡಿಯೋವನ್ನು ನರೇಂದ್ರ ಯಾದವ್ ಎಂಬಾತ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ಯಾಂಕರ್ ಮಾರ್ಗಮಧ್ಯೆ ಅನಾಥವಾಗಿ ರಸ್ತೆಯ ಅರ್ಧ ಭಾಗವನ್ನು ಆವರಿಸಿರುವ ರೀತಿಯಲ್ಲಿ ಕಾಣುತ್ತಿದೆ. ಟ್ಯಾಂಕರ್ ಪಕ್ಕದಲ್ಲಿಯೇ ದೊಡ್ಡ ಸೈಜಿನ ಕಲ್ಲುಗಳು ಕೂಡ ಬಿದ್ದಿರುವುದನ್ನು ಕಾಣಬಹುದು.

Indian army war tanker found on the highway... Why did the soldiers leave?

ನಡು ರಸ್ತೆಯಲ್ಲಿ ಹೀಗೆ ಬಿಟ್ಟೋಗಿರುವ ಕುರಿತು ಅನುಮಾನಗೊಂಡ ದಾರಿ ಹೋಕರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ಎಂದಿನಂತೆ ಇದೆ, ಆದರೆ ವಾಹನಗಳು ಮಾತ್ರ ಒಂದು ಲೇನ್ ಮೂಲಕ ಹಾದು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಟ್ಯಾಂಕ್ ಹತ್ತಿರ ಯಾವುದೇ ಸೇನಾ ಅಧಿಕಾರಿಗಳು ಅಥವಾ ಸಿಬ್ಬಂದಿ ಇರಲಿಲ್ಲ, ಜೊತೆಗೆ ಟ್ಯಾಂಕರ್ ಪಕ್ಕದಲ್ಲಿ ಕಲ್ಲುಗಳು ಹಾಗೂ ಸಣ್ಣ ಹಾನಿಯಾಗಿರುವುದು ಇನ್ನಷ್ಟು ಅನುಮಾನಾಸ್ಪದವಾಗಿ ಕಾಣುವಂತೆ ಮಾಡಿದೆ.

ವಿಷಯಕ್ಕೆ ಬಂದರೆ ಭಾರತೀಯ ಸೆನಾ ಯುದ್ಧ ಟ್ಯಾಂಕರ್ ಅನ್ನು ಸಾಗಿಸುತ್ತಿದ್ದ ಬೃಹತ್ ಟ್ರಕ್ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಂಬಾಲಾದಿಂದ ಚೆನ್ನೈಗೆ ಸೇನಾ ಟ್ಯಾಂಕ್‌ಗಳನ್ನು ಹೊತ್ತ ಟ್ರಕ್ ಇತ್ತೀಚೆಗೆ ಕೆಎಂಪಿ ಎಕ್ಸ್‌ಪ್ರೆಸ್‌ ವೇ ಮೂಲಕ ಹಾದು ಹೋಗುತ್ತಿತ್ತು. ಟ್ರಕ್ ಅಸೌದಾ ಟೋಲ್ ಪ್ಲಾಜಾದ ಸಮೀಪದಲ್ಲಿದ್ದಾಗ, ಟ್ರಕ್ ಅಪಘಾತಕ್ಕೆ ಈಡಾಗಿ ಟ್ರಕ್‌ನಿಂದ ಟ್ಯಾಂಕ್ ಕೆಳಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ, ಆದರೆ ಟ್ಯಾಂಕ್ ರಸ್ತೆಯಲ್ಲಿ ಸಾಕಷ್ಟು ಜಾಗವನ್ನು ಆಕ್ರಮಿಸಿದ್ದ ಕಾರಣ ಸ್ವಲ್ಪ ಸಮಯದವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಸಿತ್ತು. ಅಪಘಾತದ ನಂತರ, ಅಸುಡಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭಾರತೀಯ ಸೇನಾ ಯುದ್ಧ ಟ್ಯಾಂಕ್ ಅನ್ನು ಸ್ಥಳಾಂತರಿಸಿದರು. ನರೇಂದ್ರ ಯಾದವ್ ಹಂಚಿಕೊಂಡಿರುವ ವೀಡಿಯೊಗೆ ಹಲವು ರೀತಿಯ ಕಾಮೆಂಟ್‌ಗಳು ವ್ಯಕ್ತವಾಗಿವೆ. ಜಿಟಿಎ ವೈಸ್ ಸಿಟಿ ವಿಡಿಯೋ ಗೇಮ್‌ ಎಂದು ಕಮೆಂಟ್ ಮಾಡಿದ್ದಾರೆ.

ಈ ಅವಘಡ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಸಾಮಾನ್ಯವಾಗಿ ಯುದ್ಧ ಟ್ಯಾಂಕರ್‌ಗಳನ್ನು ಹೆಚ್ಚಾಗಿ ರೈಲುಗಳ ಮೂಲಕವು ಸಾಗಿಸಲಾಗುತ್ತದೆ. ರಸ್ತೆ ಮಾರ್ಗಗಳಲ್ಲಿ ಇಂತಹ ಅವಘಡಗಳು ಸಂಭವಿಸುವ ಕಾರಣ ರೈಲುಗಳ ಮೂಲಕ ಹೆಚ್ಚಾಗಿ ಸಾಗಿಸಲಾಗುತ್ತದೆ. ಇಂತಹ ಅಪಘಾತಗಳು ಈ ಹಿಂದೆಯು ನಡೆದಿವೆ, ಸೇನಾ ವಾಹನಗಳು ಮಾರ್ಗ ಮಧ್ಯೆ ಅಪಘಾತವಾಗಿವೆ. ಆದರೆ ಸೇನೆಯ ಟ್ಯಾಂಕರ್‌ಗಳು ಹೀಗೆ ರಸ್ತೆ ಮಧ್ಯೆ ಬಿದ್ದಿರುವುದು ಬಹುಶಾಃ ಇದೆ ಮೊದಲು ಎಂದು ಕಾಣುತ್ತಿದೆ.

ಸೇನಾ ಟ್ಯಾಂಕರ್‌ಗಳು 50 ರಿಂದ 60 ಟನ್‌ಗಳಷ್ಟು ಭಾರವಿರುತ್ತವೆ. ಟ್ರಕ್‌ಗಳಿಗೆ ಈ ಭಾರವನ್ನು ಸಾಗಿಸುವುದು ದೊಡ್ಡ ವಿಷಯವೇನಲ್ಲ, ಆದರೆ ಟ್ರಕ್‌ನ ಕ್ಯಾರಿ ಕ್ಯಾಂಟರ್‌ನಲ್ಲಿ ಎಲ್ಲಾ ಭಾಗಗಳಲ್ಲಿ ಭಾರವು ಹಂಚಿಕೆಯಾಗಿದ್ದಾಗ ಮಾತ್ರ ಟ್ರಕ್ ಓಡಿಸಲು ಕೂಡ ನಿಯಂತ್ರಣ ಸಿಗುತ್ತದೆ. ಆದರೆ ಟ್ಯಾಂಕರ್ ಒಂದೇ ಭಾಗದಲ್ಲಿ ಕೂರುವುದರಿಂದ ಭಾರವೂ ಒಂದೇ ಕಡೆ ಹೆಚ್ಚಾಗಿ ಈ ಅಪಘಾತವಾಗಿರುವ ಸಾಧ್ಯೆತೆ ಇರಬಹುದು ಎನ್ನಲಾಗಿದೆ. ಆದರೂ ಅಧಿಕೃತ ಮಾಹಿತಿ ಹೊರಬರುವ ವರೆಗೂ ಕಾಯಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 25, 2023, 19:45 [IST]
English summary
Indian army war tanker found on the highway
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+