ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ
ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್ ಭೀತಿಯಿಂದ ಇದೇ ತಿಂಗಳು ನಡೆಯಬೇಕಿದ್ದ ಜಾಗತಿಕ ಮಟ್ಟದ ಮೋಟಾರ್ ಶೋವನ್ನು ರದ್ದುಗೊಳಿಸಲಾಗಿದೆ.

ಕರೋನಾ ವೈರಸ್ ಭೀತಿಯಿಂದಾಗಿ ಹಲವಾರು ಜನಪ್ರಿಯ ವಾಹನಾ ಉತ್ಪಾದನಾ ಸಂಸ್ಥೆಗಳು ವಾಹನ ಉತ್ಪಾದನೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೇವಲ ಆಟೋಮೊಬೈಲ್ ಕ್ಷೇತ್ರವಲ್ಲದೇ ಹಲವಾರು ಇತರ ಕ್ಷೇತ್ರಗಳಿಗೂ ಕರೋನಾದಿಂದಾಗಿ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಇದು ದೇಶದ ಆರ್ಥಿಕತೆಗೂ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ.ಪ್ರಪಂಚದಾದ್ಯಂತ ಈ ಕರೋನಾ ವೈರಸ್ ಕಾಡುತ್ತಿದೆ.

ಇದಲ್ಲದೇ ಭಾರತೀಯ ಆಟೋಮೊಬೈಲ್ ಕ್ಷೇತ್ರವು ಕಳೆದ 18 ತಿಂಗಳುಗಳಿಂದ ಮಂದಗತಿಯಿಂದ ಸಾಗುತ್ತಿತ್ತು. ಮುಂದಿನ ವರ್ಷವು ಆಟೋಮೊಬೈಲ್ ಕ್ಷೇತ್ರವು ಚೇತರಿಕೆ ಕಾಣುವುದು ದೊಡ್ಡ ಸವಾಲಾಗಿದೆ. ಕರೋನಾ ವೈರಸ್ ಭೀತಿಯಿಂದಾಗಿ ವಾಹನ ಉತ್ಪಾದನೆಯು ಸ್ಥಗಿತಗೊಳಿಸಲಾಗಿದೆ.

ಕರೋನಾ ವೈರಸ್ ಚೀನಾದಿಂದ ಜಗತ್ತನ್ನೇ ವ್ಯಾಪಿಸಿದೆ. ಚೀನಾ ಮತ್ತು ಇಟಲಿ ದೇಶಗಳಲ್ಲಿ ಅತಿ ಹೆಚ್ಚು ಜೀವಹಾನಿ ಮಾಡಿದ್ದರೂ, ಅದರ ಆರ್ಥಿಕ- ವಾಣಿಜ್ಯ ದುಷ್ಪರಿಣಾಮ ಪ್ರಪಂಚದಾದ್ಯಂತ ವ್ಯಾಪಕವಾಗಿದೆ. ಕರೋನಾ ವೈರಸ್ ಜ್ವರ ಅರ್ಥಾತ್ ಕೊವಿಡ್-19 ಜ್ವರ ಜಾಗತಿಕವಾಗಿ ಮಾಡಿರುವ ಆರ್ಥಿಕ ಹಾನಿ ನಾವು ಊಹಿಸಿದ್ದಕ್ಕಿಂತಲೂ ಅಧಿಕವಾಗಿದೆ.

ಭಾರತದಲ್ಲಿಯೂ ಎಲ್ಲಾ ಬಗೆಯ ಉತ್ಪಾದನೆ ನಿಂತುಹೋಗಿದೆ. ಇದೆಲ್ಲದರ ಪರಿಣಾಮ ಜಾಗತಿಕ ಆರ್ಥಿಕತೆ ತತ್ತರಿಸುತ್ತಿದೆ. ಸ್ವಿಸ್ ಫೆಡರಲ್ ಕೌನ್ಸಿಲ್ ಕರೋನಾ ವೈರಸ್‌ನ ಹರಡುವಿಕೆಯನ್ನು ತಡೆಯುವ ಸದುದ್ದೇಶದಿಂದ 2020 ರ ಮಾರ್ಚ್15 ರವರೆಗೆ 1,000 ಕ್ಕಿಂತಲೂ ಹೆಚ್ಚಿನ ಜನಸಂದಣಿಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಬಾರದೆಂದು ಆಜ್ಞೆಯನ್ನು ಹೊರಡಿಸಿತ್ತು.

ಇದರಿಂದಾಗಿ ವಿಶ್ವದಲ್ಲೇ ಅತಿ ಪ್ರಮುಖವಾದ ಹೆಚ್ಚು ಜನ ಸೇರುವ ಜಿನೆವಾ ಮೋಟಾರು ಶೋವನ್ನು ರದ್ದುಗೊಳಿಸಿದರು. ಅಲ್ಲದೇ ಫಿಯೆಟ್, ಮಹೀಂದ್ರಾ, ಮರ್ಸಿಡಿಸ್ ಮತ್ತು ಜೆಸಿಬಿಯಂತಹ ಪ್ರಮುಖ ವಾಹನ ಉತ್ಪಾದನಾ ಕಂಪನಿಯು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ 10 ದಿನಗಳಲ್ಲಿ ಎಲ್ಲಾ ವಾಹನ ತಯಾರಕರು ಉತ್ಪಾದನೆಯು ಸಂಪೂರ್ಣವಾಗಿ ಸ್ಥಗಿತಗೊಂಡರೆ ರೂ.13,000-15,000 ಕೋಟಿ ಗಳಷ್ಟು ನಷ್ಟ ಉಂಟಾಗುತ್ತದೆ. ಈ ಅಂಶವನ್ನು ದಿನಕ್ಕೆ ಅನುಗುಣವಾಗಿ ನೋಡಿದರೆ ಒಂದು ದಿನಕ್ಕೆ ಸರಿಸುಮಾರು ರೂ.1,300-1,500 ಕೋಟಿ ಅಥವಾ ಸರಿಸುಮಾರು ರೂ.2,000 ಕೋಟಿಗಳಷ್ಟು ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ನಷ್ಟವಾಗುತ್ತದೆ. ಈ ಆಟೋಮೊಬೈಲ್ ಕ್ಷೇತ್ರವು ದೇಶದ ಜಿಡಿಪಿಗೆ ಶೇ.7.5 ರಷ್ಟು ಕೊಡುಗೆ ನೀಡುತ್ತದೆ.

ಕರೋನಾ ವೈರಸ್ ಕೇವಲ ವಾಹನ ಉತ್ಪಾದನೆಯ ಮೇಲೆ ಮಾತ್ರವಲ್ಲದೆ ವಾಹನದ ವ್ಯಾಪರದ ಮೇಲೆಯು ಪರಿಣಾಮ ಬೀರಿದೆ. ಆದರೆ ಎಲ್ಲಾ ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿಲ್ಲ. ಭಾರತದ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು.

ಕರೋನಾ ವೈರಸ್ ವಾಹನದ ಬೇಡಿಕೆ ಮತ್ತು ರಫ್ತಿನ ಮೇಲೆಯು ಪಾರಿಣಾಮ ಬೀರಿದೆ. ಇದಲ್ಲದೆ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುತ್ತಿದೆ. ಇದ್ದರಿಂದ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಸರಣಿಯಲ್ಲಿರುವ ಬಿಎಸ್-4 ವಾಹನಗಳನ್ನು ಈ ತಿಂಗಳ ಒಳಗಡೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ.


Click it and Unblock the Notifications








