ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಭಾರತವು ಚಲನಚಿತ್ರೋದ್ಯಮದಿಂದ ಹಿಡಿದು ವ್ಯಾಪಾರ ಉದ್ಯಮಿಗಳವರೆಗೆ ಹಲವರು ದೊಡ್ಡ ಸೆಲೆಬ್ರಿಟಿಗಳಿಗೆ ನೆಲೆಯಾಗಿದೆ. ಭಾರತದಲ್ಲಿರುವ ಬಹುತೇಕ ಸೆಲೆಬ್ರಿಟಿಗಳು ಯಾವುದೇ ಹಾಲಿವುಡ್ ನಟರು ಹಾಗೂ ಅಮೆರಿಕಾದ ಟಾಪ್ ಉದ್ಯಮಗಳಿಗೆ ಕಡಿಮೆಯಿಲ್ಲ. ವಿಶ್ವದ ದುಬಾರಿ ಮನೆಯಿಂದ ಹಿಡಿದು ದುಬಾರಿ ಕಾರುಗಳನ್ನು ಹೊಂದಿದ್ದಾರೆ.

Recommended Video

590 ಕಿ.ಮೀ ಮೈಲೇಜ್ ನೀಡುವ BMW i4 ಬಿಡುಗಡೆ | 340bhp, 430Nm, 0-100 In 5.7 Seconds & More

ಎಲ್ಲರಿಗೂ ತಿಳಿದಿರುವಂತೆ, ರೋಲ್ಸ್ ರಾಯ್ಸ್ ಅನ್ನು ವಿಶ್ವದ ಅತ್ಯಂತ ಐಷಾರಾಮಿ ಕಾರ್ ಬ್ರಾಂಡ್ ಎಂದು ಪರಿಗಣಿಸಲಾಗುತ್ತದೆ. ಅದರ ಉತ್ಪನ್ನಗಳಿಗೆ ಸಂಬಂಧಿಸಿದ ವೆಚ್ಚಗಳು ಇತರ ಐಷಾರಾಮಿ ಕಾರುಗಳನ್ನು ನಾಚಿಸುವಂತಿರುತ್ತವೆ. ಆದ್ದರಿಂದ ಈ ಕಾರುಗಳು ತಮ್ಮದೇ ಆದ ವರ್ಗದಲ್ಲಿದ್ದು, ಇವುಗಳನ್ನು ಖರೀದಿಸುವ ಜನರು ಸಹ ವಿಶೇಷವಾಗಿರುತ್ತಾರೆ.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

80ರ ದಶಕದಲ್ಲಿ ಭಾರತದಲ್ಲಿ ಕೇವಲ ನೂರರ ಸಂಖ್ಯೆಯಲ್ಲಿದ್ದ ಈ ಕಂಪನಿಯ ಕಾರುಗಳು ಈಗ ದೇಶದಲ್ಲಿನ ಹಲವರು ಉದ್ಯಮಿಗಳು ಹಾಗೂ ಸಿನಿಮಾ ನಟರು ಹೊಂದಿದ್ದಾರೆ. ಭಾರತದಲ್ಲಿಯೂ ಇತ್ತೀಚೆಗೆ ಈ ಕಾರುಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ಇತ್ತೀಚೆಗೆ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿರುವ ಕೆಲವರನ್ನು ಈ ಲೇಖನದಲ್ಲಿ ನೋಡೋಣ.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಮುಖೇಶ್ ಅಂಬಾನಿ

ಏಷ್ಯಾದಲ್ಲೇ ಅತಿ ಹೆಚ್ಚು ಕಾಲ ಶ್ರೀಮಂತ ವ್ಯಕ್ತಿಯಾಗಿ ಗುರ್ತಿಸಿಕೊಂಡಿದ್ದ ಮುಖೇಶ್ ಅಂಬಾನಿ ಅವರನ್ನು ಇತ್ತೀಚೆಗೆ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. ಅದೇನೇ ಇದ್ದರೂ ಅದಾನಿ ಎಂದರೆ ತಿಳಿಯದಿರುವವರನ್ನು ನೋಡಬಹುದೇನೋ, ಆದರೆ ಅಂಬಾನಿಯನ್ನು ತಿಳಿಯದ ಭಾರತೀಯನಿಲ್ಲ. ಮುಖೇಶ್ ಅಂಬಾನಿ ಅವರು ವಿಶಿಷ್ಟವಾದ ಕಾರುಗಳ ಬೃಹತ್ ಸಂಗ್ರಹವನ್ನೇ ಹೊಂದಿದ್ದಾರೆ.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಕಸ್ಟಮ್ ನಂಬರ್‌ಪ್ಲೇಟ್‌ನೊಂದಿಗೆ ವಿಶ್ವದ ಅತ್ಯಂತ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಕಲಿನನ್ ಮಾದರಿಯನ್ನು ಇತ್ತಿಚೆಗೆ ಭಾರತಕ್ಕೆ ಇಳಿಸಿದ್ದಾರೆ. ಈ ಕಾರಿನ ಹೊರಾಂಗಣದ ನೋಟದಿಂದ ಹಿಡಿದು ಇಂಟೀರಿಯರ್‌ವರೆಗೆ ಪ್ರತಿಯೊಂದು ವಸ್ತು ಕೂಡ ಐಷಾರಾಮಿಯಾಗಿ ಕಾಣುವ ಈ ಕಾರಿನ ಬೆಲೆಯು 13.14 ಕೋಟಿ ರೂ. ಎಂದು ತಿಳಿದುಬಂದಿದೆ.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಈ SUV 6.75-ಲೀಟರ್ V12 ಎಂಜಿನ್‌ನೊಂದಿಗೆ 563 hp ಮತ್ತು 850 Nm ಗರಿಷ್ಠ ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ ಮತ್ತು ಗಂಟೆಗೆ 250 ಕಿ.ಮೀ ವೇಗವನ್ನು ತಲುಪಬಲ್ಲದು.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಅಲ್ಲು ಅರ್ಜುನ್

ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಇತ್ತೀಚೆಗೆ ರೋಲ್ಸ್ ರಾಯ್ಸ್ ಕಲಿನನ್ ಎಸ್‍ಯುವಿ ಕಾರನ್ನು ಖರೀದಿಸಿದ್ದಾರೆ. ತಮ್ಮ ಹೊಸ ಐಷಾರಾಮಿ ಕಾರಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಟ ತಮ್ಮ ಎಸ್‌ಯುವಿಯಲ್ಲಿ ತಾಜ್ ಕೃಷ್ಣ ಹೋಟೆಲ್‌ಗೆ ಭೇಟಿ ನೀಡಿದ್ದರು.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಈ ಕಲಿನನ್ ಮಾದರಿಯು ಸುಮಾರು 7 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿಯೂ ರೋಲ್ಸ್ ರಾಯ್ಸ್ ಕಲಿನನ್ ಸೆಲೆಬ್ರಿಟಿಗಳಲ್ಲಿ ಅತ್ಯಂತ ಜನಪ್ರಿಯ ಕಾರಾಗಿದೆ. ರೋಲ್ಸ್ ರಾಯ್ಸ್ ಹೊಂದಿರುವ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ. ನಟ ಅಜಯ್ ದೇವಗನ್ ಮತ್ತು ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್ ಅವರಲ್ಲಿ ಕೆಲವರು.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಇವರ ಜೊತೆಗೆ ಭಾರತದ ಬಿಲಿಯನೇರ್ ಉದ್ಯಮಿಗಳು ಸಹ ರೋಲ್ಸ್ ರಾಯ್ಸ್ ಕುಲ್ಲಿನನ್ ಅನ್ನು ಹೊಂದಿದ್ದಾರೆ. ಅಂಬಾನಿ ಕುಟುಂಬವು ತಮ್ಮ ಗ್ಯಾರೇಜ್‌ನಲ್ಲಿ ಒಂದಲ್ಲ ಮೂರು ರೋಲ್ಸ್ ರಾಯ್ಸ್ ಕುಲ್ಲಿನನ್ ಅನ್ನು ಹೊಂದಿದ್ದಾರೆ. ಅಂಬಾನಿ ಗ್ಯಾರೇಜ್‌ನಲ್ಲಿರುವ ಮೂರನೇ ರೋಲ್ಸ್ ರಾಯ್ಸ್ ಭಾರತದ ಅತ್ಯಂತ ದುಬಾರಿ ಕಾರು ಎಂದು ಹೇಳಲಾಗುತ್ತದೆ. ಈ ಎಸ್‌ಯುವಿಯಲ್ಲಿನ ಪೇಂಟ್‌ಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಆದರ್ ಪೂನವಲ್ಲ

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಅವರು ಇತ್ತೀಚೆಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಖರೀದಿಸಿದರು. ಇದರ ಬೆಲೆ ಸುಮಾರು 9 ಕೋಟಿ ರೂ. ಇದೆ. ಇದು 563 hp ಮತ್ತು 900 Nm ಗರಿಷ್ಠ ಶಕ್ತಿ ಮತ್ತು ಟಾರ್ಕ್ ಅನ್ನು ಹೊರಹಾಕುವ 6.75-ಲೀಟರ್ ಎಂಜಿನ್‌ನೊಂದಿಗೆ ಬರುತ್ತದೆ.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಗಂಟೆಗೆ ಗರಿಷ್ಠ 250 ಕಿ.ಮೀ. ವೇಗವನ್ನು ತಲುಪಬಲ್ಲದು.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಪರ್ಮಿಶ್ ವರ್ಮಾ

ಪ್ರಸಿದ್ಧ ಗಾಯಕ ಪರ್ಮಿಶ್ ವರ್ಮಾ ಇತ್ತೀಚೆಗೆ ರೋಲ್ಸ್ ರಾಯ್ಸ್ ವ್ರೈತ್ ಅನ್ನು ಖರೀದಿಸಿದರು, ಇದರ ಬೆಲೆ 6.22 ಕೋಟಿ ರೂ. ಇದೆ. 6.6-ಲೀಟರ್ V12 ಎಂಜಿನ್ 591 hp ಮತ್ತು 900 Nm ಗರಿಷ್ಠ ಶಕ್ತಿ ಮತ್ತು ಟಾರ್ಕ್‌ಗೆ ಉತ್ಪಾದಿಸಬಲ್ಲದು. ಇದು 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ. 0-100 ಕಿ.ಮೀ ವೇಗವನ್ನು ಕೇವಲ 4.7 ಸೆಕೆಂಡುಗಲ್ಲಿ ತಲುಪಬಲ್ಲದು.

ಇತ್ತೀಚೆಗೆ ವಿಶ್ವದ ದುಬಾರಿ ಐಷಾರಾಮಿ ರೋಲ್ಸ್ ರಾಯ್ಸ್ ಖರೀದಿಸಿದ ಭಾರತೀಯ ಸೆಲೆಬ್ರಿಟಿಗಳಿವರು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಇತ್ತೀಚೆಗೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸುವ ಸೆಲೆಬ್ರಿಟಿಗಳು ಹೆಚ್ಚಾಗುತ್ತಿದ್ದಾರೆ. ಈ ಹಿಂದೆ ಹಾಲಿವುಡ್ ಸೆಲೆಬ್ರಿಟಿಗಳು ಮಾತ್ರ ಹೆಚ್ಚಾಗಿ ಈ ಕಾರುಗಳನ್ನು ಖರೀಸಿದ್ದರು. ಆದರೆ ಈಗ ಭಾರತದಲ್ಲಿನ ಹಲವು ಚಿತ್ರರಂಗದ ಸೆಲೆಬ್ರಿಟಿಗಳು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Indian celebrities who recently bought worlds most expensive luxury Rolls Royce
Story first published: Thursday, September 1, 2022, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X