ಮೊಹಮ್ಮದ್ ಶಮಿ ಮೈದಾನದಲ್ಲಷ್ಟೇ ಹೀರೋ ಅಲ್ಲ: ಸ್ಟಾರ್‌ಗಳಿಗೆ ಸವಾಲು ಹಾಕುವಂತೆ ದುಬಾರಿ ಕಾರುಗಳ ಮಾಲೀಕ!
ನ್ಯೂಜಿಲೆಂಡ್ ವಿರುದ್ಧ ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ (Mohammed Shami), ತಮ್ಮ ಅದ್ಬುತ ಬೌಲಿಂಗ್‌ನಿಂದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಕ್ಷಣಕಾಲ ಮಂತ್ರಮುಗ್ದಗೊಳಿಸಿದರು. 134 ರನ್ ಗಳಿಸಿ ಟೀ ಇಂಡಿಯಾಗೆ ಕಂಟಕವಾಗಿದ್ದ ಡೇರಿಲ್ ಮಿಚೆಲ್ ಸೇರಿದಂತೆ 7 ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು.
ಮೊಹಮ್ಮದ್ ಶಮಿ ಸಹ ಯಾವ ಸ್ಟಾರ್ ನಟರಿಗೂ ಕಮ್ಮಿ ಇಲ್ಲವೆಂಬಂತೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಮೊದಲಿಗೆ, ಅವರು ಈ ವರ್ಷಾರಂಭದಲ್ಲಿ ಖರೀದಿಸಿದ್ದ ಹೊಚ್ಚ ಹೊಸ ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರಿನ (Jaguar F-Type sports car) ಬಗ್ಗೆ ಮಾತನಾಡೋಣ. ಶಮಿ ಅವರು, ನೂತನ ಜಾಗ್ವಾರ್ ಕಾರನ್ನು ಇಂಗ್ಲೆಂಡ್ (England)ನಿಂದ ಆಮದು ಮಾಡಿಕೊಂಡಿದ್ದರು.

ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರು, ರೂ.99.98 ಲಕ್ಷದಿಂದ ರೂ.1.53 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 2.0 - ಲೀಟರ್ 4 - ಸಿಲಿಂಡರ್ ಸೂಪರ್ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 295 Bhp ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಈ ಕಾರು, 249 Kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 5.7 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದೆ. ಜೊತೆಗೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಶಮಿ, ಬಿಎಂಡಬ್ಲ್ಯೂ 5 ಸೀರಿಯಸ್ (BMW 5 Series) ಕಾರಿನ ಮಾಲೀಕರು ಕೂಡ ಆಗಿದ್ದಾರೆ. ಸದ್ಯ, ಇದೇ ಸೆಡಾನ್ ಭಾರತದ ಮಾರುಕಟ್ಟೆಯಲ್ಲಿ ರೂ.68.90 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಬಿಎಂಡಬ್ಲ್ಯೂ 5 ಸೀರಿಯಸ್ ಸೆಡಾನ್ 2.0 - ಲೀಟರ್ ಟರ್ಬೊ ಪೆಟ್ರೋಲ್, 2.0 - ಲೀಟರ್ ಡಿಸೇಲ್ ಎಂಜಿನ್ ಹಾಗೂ 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. 17.42 kmpl ಮೈಲೇಜ್ ನೀಡುತ್ತದೆ. 12.3 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮೊಹಮ್ಮದ್ ಶಮಿ ಟೊಯೊಟಾ ಫಾರ್ಚುನರ್ (Toyota Fortuner) ಎಸ್‌ಯುವಿಯ ಒಡೆಯರು ಆಗಿದ್ದಾರೆ. ಈ ಕಾರು, ರೂ.33.43 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 7 ಆಸನಗಳನ್ನು ಹೊಂದಿದ್ದು, 2.7 - ಲೀಟರ್ ಪೆಟ್ರೋಲ್, 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್, 6 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಟೊಯೊಟಾ ಫಾರ್ಚುನರ್ 10.0 kmpl ಮೈಲೇಜ್ ನೀಡಲಿದ್ದು, 2WD (ಟೂ ವೀಲ್ ಡ್ರೈವ್), 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 6 - ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಡ್ಯುಯಲ್ - ಝೋನ್ ಎಸಿ, ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಮೊಹಮ್ಮದ್ ಶಮಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 (Royal Enfield Continental GT 650) ಬೈಕ್ ಅನ್ನು ಕೂಡ ಹೊಂದಿದ್ದಾರೆ. ಆ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಈ ಮೋಟಾರ್ ಸೈಕಲ್ ರೂ. 3.18 ಲಕ್ಷದಿಂದ ರೂ. 3.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 647 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಒಳಗೊಂಡಿದೆ.
ಇನ್ನು, ನಿನ್ನೆಯ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು 5 ವಿಕೆಟ್ ಕಬಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲೂ ಶಮಿ ಅವರು ಅದ್ಬುತ ಪ್ರದರ್ಶನ ನೀಡಲಿ ಎಂದು ಆಶಿಸೋಣ.


Click it and Unblock the Notifications