ಭಾರತೀಯ ಕ್ರಿಕೆಟರುಗಳ ಅದೃಷ್ಟದ ಕಾರು ಕಲೆಕ್ಷನ್!

ಭಾರತೀಯ ಕ್ರಿಕೆಟಿಗರು ಕೇವಲ ಮೈದಾನದಲ್ಲಿ ಮಾತ್ರ ಅದ್ಭುತ ಆಟ ಪ್ರದರ್ಶಿಸುತ್ತಾರೆ ಹೊರತಾಗಿ ಮೈದಾನದ ಹೊರಗಡೆಯ ಜೀವನಶೈಲಿಯನ್ನು ಆಕರ್ಷಕವಾಗಿ ನಿಭಾಯಿಸುತ್ತಾರೆ. ನಿಮಗೆ ತಿಳಿದ ಹಾಗೇ ಭಾರತೀಯ ಕ್ರಿಕೆಟಿಗರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅಂದ ಹಾಗೆ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಂತಹ (ಬಿಸಿಸಿಐ) ಅತಿ ಪ್ರಬಲ ಮಂಡಳಿಯೇ ಅವರ ಬೆಂಗಾವಲಿಗಿದೆ.

ಕಳೆದ ಕೆಲವು ದಿನಗಳಲ್ಲಿ ಭಾರತೀಯ ಸೆಲೆಬ್ರಿಟಿಗಳು ಯಾವ ರೀತಿಯ ಕಾರನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ನಾವು ಮಾಹಿತಿ ಕೊಡುತ್ತಲೇ ಬಂದಿದ್ದೇವೆ. ಇದೀಗ ದೇಶದಲ್ಲಿ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ತಾರೆಯರು ಯಾವ ರೀತಿಯ ಕಾರುಗಳನ್ನು ಹೊಂದಿರುತ್ತಾರೆ ಎಂಬುದರ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಭಾರತೀಯ ಕ್ರಿಕೆಟಿಗರ ಪಾಲಿಗೆ ಕಾರು ಕಲೆಕ್ಷನ್ ಅದೃಷ್ಟದ ಆಟವಾಗಿ ಪರಿಗಣಿಸಿದ್ದಾರೆ. ಕ್ರಿಕೆಟ್‌ನ ಆರಾಧ್ಯ ದೇವರು ಸಚಿನ್ ತೆಂಡೂಲ್ಕರ್, ಬಂಗಾಳ ಹುಲಿ ಸೌರವ್ ಗಂಗೂಲಿ, 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಸಹಿತ ಅನೇಕ ಕ್ರಿಕೆಟಿಗರು ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಹಾಗಿದ್ದರೆ ಬನ್ನಿ ಭಾರತೀಯ ಕ್ರಿಕೆಟಿಗರುಗಳ ಅದೃಷ್ಟದ ಕಾರು ಬಗ್ಗೆ ತಿಳಿಯೋಣ.

ಲಿಟ್ಲ್ ಮಾಸ್ಟರ್ ಆಕರ್ಷಕ ಕಾರು

ಲಿಟ್ಲ್ ಮಾಸ್ಟರ್ ಆಕರ್ಷಕ ಕಾರು

ನಮಗೆಲ್ಲರಿಗೂ ತಿಳಿದ ಹಾಗೆ ಸಚಿನ್‌ ಗ್ಯಾರೇಜ್‌ನಲ್ಲಿ ಅನೇಕ ಕಾರು ಕಲೆಕ್ಷನ್ ಇದೆ. ಇದರಲ್ಲಿ ಸ್ಪೋರ್ಟ್ಸ್ ಹಾಗೂ ರೇಸಿಂಗ್ ಕಾರುಗಳು ಸೇರಿವೆ. ಕೆಲವು ತಿಂಗಳುಗಳ ಹಿಂದೆ ಫೆರಾರಿ 260 ಮೊಡೆನಾ ಮಾರಾಟ ಮಾಡಿರುವುದು ಅಚ್ಚರಿಗೆ ಕಾರಣವಾಗಿತ್ತು. ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಸ್ಸಾನ್ ಜಿಟಿಆರ್ 530 ಖರೀದಿಸಿದ್ದರು. ಈ ಕಾರು ಬರೋಬ್ಬರಿ 70 ಲಕ್ಷ ರುಪಾಯಿಗಳಷ್ಟು ಬೆಲೆಬಾಳುವುದಾಗಿದೆ.

ದಾದಾ ಕಾರು ಕಲೆಕ್ಷನ್

ದಾದಾ ಕಾರು ಕಲೆಕ್ಷನ್

ಭಾರತೀಯ ಕ್ರಿಕೆಟಿಗರ ಪೈಕಿ ಮಾಜಿ ಸೌರವ್ ಗಂಗೂಲಿ ಬಳಿ ಅತಿ ಹೆಚ್ಚು ಕಾರು ಕಲೆಕ್ಷನ್ ಇದೆ. ದಾದಾ ಬಳಿ 20 ಮರ್ಸಿಡಿಸ್ ಬೆಂಝ್ ಹಾಗೂ 4 ಬಿಎಂಡಬ್ಲ್ಯು ಕಾರುಗಳಿವೆ. ಆದರೂ ದಾದಾ ಜರ್ಮನಿಯ ಮುಂಚೂಣಿ ಕಾರು ತಯಾರಕ ಕಂಪನಿಯಾದ ಮೆರ್ಸಿಡಿಸ್ ಬೆಂಝ್‌ ಸಿಎಲ್‌ಕೆ ಚಲಾಯಿಸಲು ಇಷ್ಟಪಡುತ್ತಾರೆ.

ಹ್ಯುಂಡೈ ಪ್ರೇಮಿ ದಿ ವಾಲ್

ಹ್ಯುಂಡೈ ಪ್ರೇಮಿ ದಿ ವಾಲ್

2004ನೇ ಇಸವಿಯಲ್ಲಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ರಾಹುಲ್ ದ್ರಾವಿಡ್ ಅವರಿಗೆ ಹ್ಯುಂಡೈ ಟಸ್ಕಾನ್ ನೀಡಿ ಸನ್ಮಾನಿಸಿದ್ದರು. ಹಾಗಿದ್ದರೂ ಕರ್ನಾಟಕ ಕಲಿ ಬಲಿ ಬಿಎಂಡಬ್ಲ್ಯು ಕಾರು ಕೂಡಾ ಇದೆ.

ಭಜ್ಜಿ ಹಮ್ಮರ್ ಪ್ರೇಮಿ

ಭಜ್ಜಿ ಹಮ್ಮರ್ ಪ್ರೇಮಿ

ಕೆಲವು ಸಮಯಗಳ ಹಿಂದೆಯಷ್ಟೇ ನೂತನ ಹಮ್ಮರ್ ಖರೀದಿಸಿದ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸ್‌ರಿಗೆ ಕಪಾಳ ಮೋಕ್ಷ ಮಾಡಿರುವುದು ಭಾರಿ ವಿವಾದಕ್ಕೆಡೆ ಮಾಡಿತ್ತು. ವಾಹನ ರಿಜಿಸ್ಟ್ರೇಶನ್ ಇಲ್ಲದೆ ಕಾರು ಚಲಾಯಿಸಿದ ಹರಭಜನ್ ಮೇಲೆ 3000 ರೂಪಾಯಿಗಳ ದಂಡ ವಿಧಿಸಲಾಗಿತ್ತು.

ಇರ್ಫಾನ್ ಪಠಾಣ್ ಸ್ಕೊರ್ಪಿಯೊ ಸವಾರಿ

ಇರ್ಫಾನ್ ಪಠಾಣ್ ಸ್ಕೊರ್ಪಿಯೊ ಸವಾರಿ

ಪಠಾಣ್ ಸೋದರರ ಪೈಕಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮಹೀಂದ್ರ ಸ್ಕೊರ್ಪಿಯೊ ಹೊಂದಿದ್ದಾರೆ. ದುಬಾರಿ ಕಾರು ಇಲ್ಲದರ ಹೊರತಾಗಿಯೂ ಪಠಾಣ್ ದೇಶದ ಶ್ರೇಷ್ಠ ಎಸ್‌ಯುವಿ ಕಾರು ತಮ್ಮದಾಗಿಸಿಕೊಂಡಿದ್ದಾರೆ.

ಕಪಿಲ್ ದೇವ್ ಆಕರ್ಷಕ ಪೋರ್ಶೆ

ಕಪಿಲ್ ದೇವ್ ಆಕರ್ಷಕ ಪೋರ್ಶೆ

ಭಾರತದ ಕ್ರಿಕೆಟ್‌ನ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಇತ್ತೀಚೆಗಷ್ಟೇ ದುಬಾರಿ ಪೋರ್ಶೆ ಪನರಮಾ ಡೀಸೆಲ್ ಕಾರು ಖರೀದಿಸಿದ್ದಾರು. ದೇಶದಲ್ಲಿ ಪೋರ್ಶೆ ಹೊಂದಿರುವವರ ಪೈಕಿ ಕಪಿಲ್ ಪ್ರಮುಖರಾಗಿದ್ದಾರೆ.

ಕುಂಬ್ಳೆ ಫೋರ್ಡ್ ಎಂಡೋವರ್ ಗೂಗ್ಲಿ

ಕುಂಬ್ಳೆ ಫೋರ್ಡ್ ಎಂಡೋವರ್ ಗೂಗ್ಲಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪೋರ್ಡ್ ಎಂಡೋವರ್ ಹಾಗೂ ಮರ್ಸಿಡಿಸ್ ಇ-ಕ್ಲಾಸ್ ಕಾರುಗಳನ್ನು ಚಲಾಯಿಸಲು ಇಷ್ಟಪಡುತ್ತಾರೆ.

ಕ್ಯಾಪ್ಟನ್ ಕೂಲ್ ಮಹಿ ಹಮ್ಮರ್ ಸವಾರಿ

ಕ್ಯಾಪ್ಟನ್ ಕೂಲ್ ಮಹಿ ಹಮ್ಮರ್ ಸವಾರಿ

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬೈಕ್ ಪ್ರೇಮ ಎಲ್ಲರಿಗೂ ತಿಳಿದ ವಿಚಾರ. ಈ ರಾಂಚಿ ಬಾಯ್ ಅತ್ಯಾಕರ್ಷಕ ಕಾರು ಕಲೆಕ್ಷನ್‌ಗಳನ್ನು ಸಹ ಹೊಂದಿದ್ದಾರೆ. ಅವರ ಬಳಿ ಹಮ್ಮರ್, ಟೊಯೊಟಾ ಕರೊಲ್ಲಾ, ಕಸ್ಟಮೈಸ್ಡ್ ಓಪನ್-ಟಾಪ್ ಸ್ಕೊರ್ಪಿಯೊ, ಮಿಟ್ಸುಬಿಸಿ ಪಜೆರಾಗಳಂತಹ ಕಾರುಗಳಿವೆ.

ಆರ್‌ಪಿ ಮರ್ಸಿಡಿಸ್ ಸಿ ಕ್ಲಾಸ್

ಆರ್‌ಪಿ ಮರ್ಸಿಡಿಸ್ ಸಿ ಕ್ಲಾಸ್

ಪ್ರಸ್ತುತ ಆಟದ ಮೈದಾನದಲ್ಲಿ ಕಳೆಗುಂದಿರುವ ಎಡಗೈ ಮಧ್ಯಮ ಗತಿಯ ವೇಗದ ಬೌಲರ್ ರುದ್ರ ಪ್ರತಾಪ್ ಸಿಂಗ್ ಅವರಿಗೆ 2007ನೇ ಟ್ವೆಂಟಿ-20 ವಿಶ್ವಕಪ್‌ನಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ನಿಯೋ ಸ್ಪೋರ್ಟ್ಸ್ ಆಕರ್ಷಕ ಮರ್ಸಿಡಿಸ್ ಬೆಂಝ್ ಸಿ 200ಕೆ ಕಾರು ನೀಡಿ ಸನ್ಮಾನಿಸಿತ್ತು.

ಶ್ರೀಶಾಂತನ ಬಿಎಂಡಬ್ಲ್ಯು

ಶ್ರೀಶಾಂತನ ಬಿಎಂಡಬ್ಲ್ಯು

ತಮ್ಮ ಅತಿರೇಕದ ವರ್ತನೆಯಿಂದಲೇ ಸದಾ ಸುದ್ದಿಯಲ್ಲಿರುವ ಕೇರಳ ಸ್ಪೀಡ್ ಸ್ಟಾರ್ ಎಸ್. ಶ್ರೀಶಾಂತ್ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್6 ಚಲಾಯಿಸಲು ಇಷ್ಟಪಡುತ್ತಾರೆ. ಪ್ರಸ್ತುತ ಕಾಲ್ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಾಂತಕುಮಾರನ್ ಶ್ರೀಶಾಂತ ಮುಂದಿನ ವರ್ಷಾರಂಭದಲ್ಲಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಕೊಹ್ಲಿಯ ವಿರಾಟ ರೆನೊ ಡಸ್ಟರ್

ಕೊಹ್ಲಿಯ ವಿರಾಟ ರೆನೊ ಡಸ್ಟರ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿನ ಅಮೋಘ ಪ್ರದರ್ಶನಕ್ಕಾಗಿ ವಿರಾಟ್ ಕೊಹ್ಲಿ ಅವರಿಗೆ ರೆನೊ ಕಂಪನಿಯು ಡಸ್ಟರ್ ಕಾರು ನೀಡಿ ಸನ್ಮಾನಿಸಿತ್ತು. ಶ್ರೀಶಾಂತ ಅವರಂತೆಯೇ ಕೊಹ್ಲಿ ಫೇವರಿಟ್ ಲಿಸ್ಟ್‌ನಲ್ಲಿ ಬಿಎಂಡಬ್ಲ್ಯು ಎಕ್ಸ್6 ಕಾರು ಕೂಡಾ ಇದೆ.

ಯುವಿಗೆ ಪೋರ್ಶೆ ಗಿಫ್ಟ್

ಯುವಿಗೆ ಪೋರ್ಶೆ ಗಿಫ್ಟ್

2007ನೇ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ವೊಂದರಲ್ಲಿ ಸತತ ಆರು ಸಿಕ್ಸರ್ ಬಾರಿಸಿದ್ದ ಯುವರಾಜ್ ಸಿಂಗ್ ಅವರಿಗೆ ಅಂದಿನ ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಪದಚ್ಯುತ ಲಲತ್ ಮೋದಿ ಅವರು ದುಬಾರಿ ಪೋರ್ಶೆ 911 ಕಾರು ಗಿಫ್ಟ್ ಆಗಿ ನೀಡಿದ್ದರು.

ಭಾರತೀಯ ಕ್ರಿಕೆಟರುಗಳ ಅದೃಷ್ಟದ ಕಾರು ಕಲೆಕ್ಷನ್!

ಅಂದ ಹಾಗೆ ಹೊಡೆಬಡಿಯ ದಾಂಡಿಗ ವೀರೇಂದ್ರ ಸೆಹ್ವಾಗ್ ಬಳಿ 2 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಬೆಲೆಬಾಳುವ ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರಿದೆ. ಹಾಗೆಯೇ ವೀರು ಸಹ ಆಟಗಾರ ಗೌತಮ್ ಗಂಭೀರ್ ಬೊಲೆರೊ ಸ್ಟಿಂಗರ್ ಚಲಾಯಿಸುವುದನ್ನು ಇಷ್ಟಪಡುತ್ತಾರೆ.

More from DriveSpark

Article Published On: Wednesday, November 21, 2012, 10:22 [IST]
English summary
Ever wondered about our Indian cricketers car collection? We take a quick square cut & check out Indian cricketers car collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+