ಇಂಡಿಯನ್ ಡ್ರೈವರ್ಸ್ ವರ್ಲ್ಡ್‌ನಲ್ಲೇ ಬೆಸ್ಟ್ ಆಂಡ್ ವರ್ಸ್ಟ್
ದೇಶದಲ್ಲಿರುವ ಬಹುಪಾಲು ಹಿಂದೂ ವಿಶ್ವಾಸಿಗಳ ನಂಬಿಕ ಪ್ರಕಾರ 330 ಮಿಲಿಯನ್ ದೇವತೆಗಳಿದ್ದಾರೆ. ಈ ಪೈಕಿ ಪ್ರತಿಯೊಂದು ದೇವರಿಗೆ ಕಡಿಮೆಯೆಂದರೆ ಮೂರು ವಾಹನಗಳಿರುತ್ತವೆ. ಆಟೋ ಜಗತ್ತಿನ ಹಿತದೃಷ್ಟಿಯಿಂದ ಇಂದೊಂದು ಉತ್ತಮ ಬೆಳವಣಿಗೆಯಾಗಿದೆ.
ನಮ್ಮ ದೇಶಕ್ಕೆ ಬಂದಿಳಿದ ಪ್ರತಿಯೊಬ್ಬ ವಿದೇಶಿಯರಲ್ಲೂ ಇದು ಎಂತಹ ದೇಶ, ಇಲ್ಲಿನ ವಿಚಿತ್ರ ಆಚಾರ ವಿಚಾರಗಳ ಬಗ್ಗೆ ಅಪಹಾಸ್ಯವುಂಟಾಗಬಹುದು. ದೇಶಕ್ಕೆ ಆಗಮಿಸಿದ ಅಮೆರಿಕ ಪತ್ರಕರ್ತ ಜಾಸನ್ ಟೊರ್ಚಿನ್‌ಸ್ಕೈ (Jason Torchinsky) ಮನದಲ್ಲೂ ಆರಂಭದಲ್ಲಿ ಇದೇ ಸಂಭವಿಸಿತ್ತು.
ಆದರೆ ಇಲ್ಲಿನ ವಿಸ್ಮಯಕಾರಿ ಟ್ರಾಫಿಕ್ ವ್ಯವಸ್ಥೆಯನ್ನು ಕಣ್ಣಾರೆ ಅನುಭವಿಸಿರುವ ಜಾಸನ್ ಭಾರತೀಯ ಡ್ರೈವಿಂಗ್‌ಗೆ ಮಾರು ಹೋಗಿದ್ದಾರೆ. ಇದರಂತೆ ಒಬ್ಬ ಭಾರತೀಯನ ಹಾಗೆ ಡ್ರೈವಿಂಗ್ ಮಾಡಿ ಎಂಬ ಟೈಟಲ್‌ನಲ್ಲಿ ಅತಿ ಸುಂದರವಾದ ಲೇಖನವನ್ನು ಬರೆದಿದ್ದು, ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಹಜವಾಗಿಯೇ ಅಮೆರಿಕನ್ ಮೋಟರಿಂಗ್ ಪ್ರೆಸ್ ಭಾರತದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಆದರೆ ವಿಶ್ವದಲ್ಲೇ ಆರನೇ ಅತಿ ದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿರುವ ಭಾರತದಂತಹ ದೇಶವನ್ನು ಕಡೆಗಣಿಸಲು ಜಾಸನ್ ಇಷ್ಟಪಡುವುದಿಲ್ಲ.

ಇದರಂತೆ ತಮ್ಮದೇ ಆದ ವರ್ಣನೆಯೊಂದಿಗೆ ದೇಶದಲ್ಲಿ ಹೇಗೆ ಡ್ರೈವಿಂಗ್ ಮಾಡಬಹುದು ಎಂಬುದರ ಕುರಿತು ಲೇಖನ ಬರೆದಿದ್ದಾರೆ. ಹಾಗೆಯೇ ಇಲ್ಲಿನ ಜೀವನದಲ್ಲಿ ಕಾಣಸಿಗುವ ಚಿತ್ರ ವಿಚಿತ್ರ ರಸ್ತೆ ಚಿತ್ರಣಗಳನ್ನು ವರ್ಣಿಸುವ ಪ್ರಯತ್ನ ಮಾಡಿದ್ದಾರೆ.

ಇಷ್ಟೊಂದು ದೊಡ್ಡ ಸಂಖ್ಯೆಯ ನಿರ್ಭಿತಿಯ ಚಾಲಕರನ್ನು ನಾನೆಲ್ಲೂ ನೋಡಿಲ್ಲ. ಭಾರತದಲ್ಲಿ ಡ್ರೈವಿಂಗ್ ಅಪಾಯಕಾರಿ ಎನಿಸಿದರೂ ಅಂದೊಂದು ಕೌಶಲ್ಯ. ಇನ್ನೊಂದು ರೀತಿಯಲ್ಲಿ ಬನ್ನಿಸುವುದಾದರೆ ಹಾಲಿವುಡ್ ಚಿತ್ರದಲ್ಲಿ ಕ್ಲೈಮಾಕ್ಸ್ ನೋಡುವ ಹಾಗೆ.

ಭಾರತೀಯ ಸಂಚಾರ ದಟ್ಟಣೆ ಹಾಗೂ ಕಿಕ್ಕಿರಿದಿರುತ್ತದೆ. ಅಮೆರಿಕದಲ್ಲಿ ಹೆವಿ ವೆಹಿಕಲ್ ಆಗಿ ಕೆಲವು ನಿರ್ದಿಷ್ಟ ವಾಹನಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಭಾರತದಲ್ಲಿ ಎಲ್ಲವೂ ಹೆವಿ ವಾಹನಗಳೇ. ಯಾಕೆಂದರೆ ಭಾರತದಲ್ಲಿ ಮಿನಿ ವಾಹನದಲ್ಲಿ ಕಿಕ್ಕಿರಿದ ಜನರು ಪಯಣಿಸುತ್ತಿರುತ್ತಾರೆ.

ಇನ್ನು ಬೈಕ್‌ಗಳಂತೂ ಫ್ಯಾಮಿಲಿ ವಾಹನವಾಗಿರುತ್ತದೆ. ಕುಟುಂಬದ ಯಜಮಾನ ತನ್ನ ಎದುರುಗಡೆ ಮಗುವನ್ನು ಕೂರಿಸಿ ಹಾಗೂ ಹಿಂದೆ ಪತ್ನಿಯೊಂದಿಗೆ ಸಂಚರಿಸುತ್ತಾರೆ. ಇಲ್ಲಿ ಮಹಿಳೆಯರು ಕುಳಿತುಕೊಳ್ಳುವ ರೀತಿಯನ್ನು ಉಲ್ಲೇಖಿಸಲಾಗಿದೆ.

ಇನ್ನು ಕಬ್ಬಿಣದ ಸಲಾಕೆಗಳನ್ನು ಹೊತ್ತೊಯ್ಯುವ ಪಿಕಪ್‌ಗಳು ಬೆಂಕಿ ಕಿಡಿ ಹೊತ್ತಿಸುವ ಮೂಲಕ ತಮ್ಮ ಹಿಂದೆ ಬರುವ ವಾಹನಗಳಿಗೆ ಸುರಕ್ಷಾ ಮಾನದಂಡ ಅನುಸರಿಸುವಂತೆ ಎಚ್ಚರಿಸುತ್ತವೆ.

ಲೇಖಕನ ಪ್ರಕಾರ ಭಾರತೀಯ ಡ್ರೈವರುಗಳು ಶಾಂತಚಿತ್ತರಾಗಿತ್ತಾರೆ. ಇಲ್ಲಿ ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವಾಗಿದೆ. ಈ ಬಗ್ಗೆ ಹೆಚ್ಚು ಗಮನ ಕೊಡದೆ ಜನರು ಮುಂದುವರಿಯುತ್ತಾರೆ.

ಇನ್ನು ವಿಶೇಷವಾದ ಸಂಗತಿ ಏನೆಂದರೆ ಎಷ್ಟೇ ಬ್ಯುಸಿ ರಸ್ತೆಗಳಿದ್ದರೂ ಭಾರತೀಯ ಪಾದಚಾರಿಗಳು ಹಾಗೂ ಸಾಕು ಪ್ರಾಣಿಗಳು ಅವುಗಳಿಗೆ ಕ್ಯಾರೇ ಅನ್ನುವುದಿಲ್ಲ. ದನ ಕರುಗಳಂತೂ ನಿಶ್ಚಿಂತತೆಯಿಂದ ರೋಡ್ ಮಧ್ಯೆ ಓಡಾಡುತ್ತಿರುತ್ತವೆ. ಹಾಗಾಗಿ ಚಾಲಕ ಹಾದಿ ಬಿಟ್ಟುಕೊಳ್ಳಲು ಬೇಡಿಕೊಳ್ಳಬೇಕಾಗುತ್ತದೆ.

ಇನ್ನು ಭಾರತೀಯ ರಸ್ತೆಗಳನ್ನು ಮಂಗಳ ಗ್ರಹದ ಮೇಲ್ಮೈಗೆ ಹೋಲಿಸಲಾಗಿದೆ. ಯಾಕೆಂದರೆ ಇಲ್ಲಿ ಮಂಗಳ ಗ್ರಹದಲ್ಲಿರುವಂತೆಯೇ ಅಲ್ಲಲ್ಲಿ ಹೊಂಡಗಳಿರುತ್ತವೆ. ಬಸ್‌ಗಳಂತೂ ತನ್ನದೆರು ಬರುವ ಎಲ್ಲ ಸಣ್ಣಪುಟ್ಟ ವಾಹನಗಳ ಮೀರಿಸಿ ಪಯಣಿಸುತ್ತವೆ.

ಅಂತಿಮವಾಗಿ ಭಾರತೀಯ ಚಾಲಕರನ್ನು ವಿಶ್ವದ ಅತ್ಯುತ್ತಮ ಅದೇ ಹೊತ್ತಿಗೆ ಕೆಟ್ಟದೆಂದು ಉಲ್ಲೇಖಿಸಲು ಲೇಖಕ ಮರೆಯುವುದಿಲ್ಲ. ಖಂಡಿತವಾಗಿಯೂ ಭಾರತೀಯ ಚಾಲಕರು ಅಪಾಯವನ್ನು ಆಹ್ವಾನಿಸಲು ಸಿದ್ಧರಾಗಿತ್ತಾರೆ. ಆದರೆ ಇದು ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಇದು ಸಾವನ್ನು ಆಹ್ವಾನಿಸಿದಂತೆ.

ಒಟ್ಟಿನಲ್ಲಿ ಮುಂದೊಂದು ದಿನ ಭಾರತೀಯ ದೇಶದಲ್ಲಿ ಅತ್ಯುತ್ತಮ ರ‌್ಯಾಲಿ ರೇಸರ್‌ಗಳ ಉದಯವಾದ್ದಲ್ಲಿ ಅಚ್ಚರಿಯೇನಿಲ್ಲ ಎಂದಿದ್ದಾರೆ ಜಾಸನ್.
Source: jalopnik


Click it and Unblock the Notifications








