ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ಸಾಕಷ್ಟು ಜನರಿಗೆ ಸೂಪರ್ ಕಾರುಗಳನ್ನು ಖರೀದಿಸಬೇಕೆಂಬ ಕನಸಿರುತ್ತದೆ. ಕೆಲವರು ತಮ್ಮ ಕನಸನ್ನು ನನಸು ಮಾಡಿಕೊಂಡರೆ ಇನ್ನೂ ಕೆಲವರಿಗೆ ಆ ಕನಸು ಎಂದಿಗೂ ನನಸಾಗುವುದೇ ಇಲ್ಲ. ಕೆಲವರು ಅದೃಷ್ಟದಿಂದ ಕನಸಿನ ಕಾರುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ಇಂಗ್ಲೆಂಡಿನಲ್ಲಿ ನೆಲೆಸಿರುವ ಭಾರತೀಯ ಮೂಲದ ಎಂಜಿನಿಯರ್ ಒಬ್ಬರು ಕಾರು ಸ್ಪರ್ಧೆಯಲ್ಲಿ ಕೋಟ್ಯಂತರ ಮೌಲ್ಯದ ಲಂಬೋರ್ಘಿನಿ ಉರುಸ್ ಗೆದ್ದಿದ್ದಾರೆ.ಸೂಪರ್‌ಕಾರಿನ ಜೊತೆಗೆ ಲಕ್ಷಾಂತರ ರೂಪಾಯಿಗಳನ್ನು ನಗದು ರೂಪದಲ್ಲಿ ಗೆದ್ದಿದ್ದಾರೆ. 32 ವರ್ಷದ ಸೌಂಡ್ ಎಂಜಿನಿಯರ್ ಶಿಬು ತನ್ನ ಗೆಳತಿ ಲಿನೆಟ್ ಜೋಸೆಫ್‌ಳನ್ನು ಮದುವೆಯಾಗಲು ಇಂಗ್ಲೆಂಡಿಗೆ ತೆರಳಿದ್ದರು.

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ಶಿಬು ನಿರುದ್ಯೋಗಿಯಾದರು. ಉದ್ಯೋಗಕ್ಕಾಗಿ ಹಲವಾರು ಕಂಪನಿಗಳಲ್ಲಿ ಸತತವಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದರು. ಜುಲೈ 7ರಂದು ತಮ್ಮ ಜೀವನವೇ ಬದಲಾಗಲಿದೆ ಎಂದು ಸ್ವತಃ ಅವರಿಗೆ ತಿಳಿದಿರಲಿಲ್ಲ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ಜುಲೈ 7ರಂದು ಅವರಿಗೆ ಬಾಟ್ ಬಿ ಡ್ರೀಮ್ ಕಾರು ಸ್ಪರ್ಧೆಯಲ್ಲಿ ಗೆದ್ದಿರುವ ವಿಷಯ ತಿಳಿಯುತ್ತದೆ. ಈ ಸ್ಪರ್ಧೆಯಲ್ಲಿ ಅವರು ಹೊಚ್ಚ ಹೊಸ ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಗೆದ್ದಿದ್ದಾರೆ. ಇಂಗ್ಲೆಂಡಿನಲ್ಲಿ ಲ್ಯಾಂಬೊರ್ಗಿನಿ ಉರುಸ್‌ ಕಾರಿನ ಬೆಲೆ 1,95,000 ಪೌಂಡ್‌ ಅಂದರೆ ಸುಮಾರು 18 ಮಿಲಿಯನ್ ಗಳಾಗುತ್ತದೆ.

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ಭಾರತದಲ್ಲಿ ಆಮದು ಹಾಗೂ ಇತರ ತೆರಿಗೆಗಳಿಂದಾಗಿ ಈ ಕಾರಿನ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಇದರ ಜೊತೆಗೆ ಶಿಬು 20,000 ಯುರೋ ಅಂದರೆ ಭಾರತೀಯ ರೂಪಾಯಿಯಲ್ಲಿ ಮೌಲ್ಯದಲ್ಲಿ ಸುಮಾರು ರೂ.20 ಲಕ್ಷ ನಗದನ್ನು ಸಹ ಗೆದ್ದಿದ್ದಾರೆ. ಸದ್ಯಕ್ಕೆ ಶಿಬು ಹಾಗೂ ಅವರ ಪತ್ನಿ ಟೊಯೊಟಾ ಯಾರಿಸ್ ಕಾರ್ ಅನ್ನು ಹೊಂದಿದ್ದಾರೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ನಾನು ಕೆಲಸಕ್ಕೆ ಅರ್ಜಿ ಸಲ್ಲಿಸಲು ಇ-ಮೇಲ್ ಚೆಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರು ಗೆದ್ದಿರುವ ವಿಷಯ ನನಗೆ ತಿಳಿಯಿತು. ಇದುವರೆಗೂ ನಾನು ಯಾವುದೇ ಲ್ಯಾಂಬೊರ್ಗಿನಿ ಕಾರಿನಲ್ಲಿ ಕುಳಿತುಕೊಳ್ಳುವುದಿರಲಿ ಅದನ್ನು ಮುಟ್ಟಿಯೂ ಇಲ್ಲ. ಈ ಹಣದಿಂದ ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಶಿಬು ಹೇಳಿದ್ದಾರೆ.

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ನೈಟ್ ಶಿಫ್ಟ್ ಮುಗಿಸಿ ಮನೆಗೆ ಬಂದು ಮಲಗಿದ್ದಾಗ ನನಗೆ ಈ ವಿಷಯ ತಿಳಿಯಿತು ಎಂದು ಅವರ ಪತ್ನಿ ಹೇಳಿದ್ದಾರೆ. ಬೆಸ್ಟ್ ಆಫ್ ದಿ ಬೆಸ್ಟ್ (ಬಿಒಟಿಬಿ) ಇಂಗ್ಲೆಂಡಿನ ಡ್ರೀಮ್ ಕಾರ್ ಹಾಗೂ ಲೈಫ್ ಸ್ಟೈಲ್ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯನ್ನು 1999ರಲ್ಲಿ ಆರಂಭಿಸಲಾಯಿತು. ಜನರು ಈ ಸ್ಪರ್ಧೆಯಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಬಹುದು.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಲಾಕ್‌ಡೌನ್‌ ಸಂಕಷ್ಟದಲ್ಲಿ ಬದಲಾದ ಸೌಂಡ್ ಇಂಜಿನಿಯರ್ ಅದೃಷ್ಟ

ಈ ಹಿಂದೆ ಅನೇಕ ಭಾರತೀಯರು ಯುಎಇಯಲ್ಲಿ ನಡೆದಿದ್ದ ಇದೇ ರೀತಿಯ ಸ್ಪರ್ಧೆಗಳಲ್ಲಿ ಕಾರುಗಳನ್ನು ಗೆದ್ದಿದ್ದರು. ಇನ್ನೂ ಲ್ಯಾಂಬೊರ್ಗಿನಿ ಉರುಸ್ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರು ಕಂಪನಿಯ ಮೊದಲ ಆಧುನಿಕ ಎಸ್ ಯುವಿಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಎಸ್‌ಯುವಿ ಭಾರತದಲ್ಲಿಯೂ ಜನಪ್ರಿಯವಾಗಿದ್ದು, ಸೆಲೆಬ್ರಿಟಿಗಳ ನೆಚ್ಚಿನ ಕಾರ್ ಆಗಿದೆ.

ಚಿತ್ರಕೃಪೆ : ಬಾಟ್ ಬಿ

Most Read Articles

Kannada
English summary
Indian engineer won Lamborghini Urus SUV in UK. Read in Kannada.
Story first published: Saturday, July 11, 2020, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X