ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಭಾರತ ಸರ್ಕಾರವು ಬುಧವಾರದಂದು ಎರಡು ಎಲೆಕ್ಟ್ರಿಕ್ ವಾಹನಗಳನ್ನು ನೇಪಾಳದಲ್ಲಿರುವ ಪಶುಪತಿ ಕ್ಷೇತ್ರ ವಿಕಾಸ್ ಟ್ರಸ್ಟ್ (ಪಿ‍ಎ‍‍ಡಿ‍ಟಿ)ಗೆ ಕಾಣಿಕೆಯಾಗಿ ನೀಡಿದೆ. ಈ ವಾಹನಗಳನ್ನು ದೇವಾಲಯಕ್ಕೆ ಭೇಟಿ ನೀಡುವ ಹಿರಿಯ ಹಾಗೂ ವಿಶೇಷ ಚೇತನರಿಗೆಂದು ನೀಡಲಾಗಿದೆ.

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಭಾರತದ ಗಯಂ ಮೋಟಾರ್ ವರ್ಕ್ಸ್ ತಯಾರಿಸಿರುವ ಈ ಎರಡು ಎಲೆಕ್ಟ್ರಿಕ್ ವಾಹನಗಳನ್ನು ನೀಡಿದ ನಂತರ ಮಾತನಾಡಿದ ಕಠ್ಮಂಡುವಿನ ಭಾರತೀಯ ಮಹಿಳಾ ಸಂಘದ ಅಧ್ಯಕ್ಷರಾದ ನಮ್ರಿತಾ ಪುರಿರವರು, ಈ ವಾಹನಗಳಿಂದ ಇಬ್ಬರು ಮಹಿಳೆಯರಿಗೆ ಉದ್ಯೋಗ ದೊರಕಲಿದೆ ಎಂದು ಹೇಳಿದರು.

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಈ ಎಲೆಕ್ಟ್ರಿಕ್ ವಾಹನಗಳು ಭಾರತ ಹಾಗೂ ನೇಪಾಳದ ನಡುವಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾಂದವ್ಯವನ್ನು ಮತ್ತಷ್ಟು ಬಲಗೊಳಿಸಲಿವೆ ಎಂದು ನಮ್ರಿತಾ ಪುರಿರವರು ಹೇಳಿದರು.

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಭಾರತದ ರಾಯಭಾರಿ ಕಚೇರಿಯಡಿಯಲ್ಲಿ ಬರುವ ಭಾರತೀಯ ಮಹಿಳಾ ಸಂಘವು ನೇಪಾಳದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯರಿಗೆ ಸಾಮಾನ್ಯವಾದ ಹಾಗೂ ಸ್ನೇಹಪರವಾದ ವಾತಾವರಣವನ್ನು ಉಂಟುಮಾಡುವ ಹೊಣೆಯನ್ನು ಹೊತ್ತಿದೆ.

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಇದು ನೇಪಾಳಿ ಮಹಿಳೆಯರೊಂದಿಗೆ ಸಂವಹನ ನಡೆಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದರ ಜೊತೆಗೆ ಭಾರತೀಯರು ಹಾಗೂ ನೇಪಾಳಿ ಸಮುದಾಯದ ನಡುವೆ ಸಾಮರಸ್ಯ ಹಾಗೂ ಸ್ನೇಹವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಚಲಿಸುವ ಎರಡು 8 ಸೀಟುಗಳ ಈ ಎಲೆಕ್ಟ್ರಿಕ್ ವಾಹನಗಳನ್ನು ಪಶುಪತಿ ಕ್ಷೇತ್ರ ವಿಕಾಸ್ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್ ಧಕಲ್ ಅವರಿಗೆ ಹಸ್ತಾಂತರಿಸಲಾಯಿತು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಪಶುಪತಿನಾಥ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಂರಕ್ಷಣೆಗಾಗಿ ಹಾಗೂ ಕಾರ್ಯಾಚರಣೆಗಾಗಿ ಪಿಎಡಿಟಿ ಸ್ಥಾಪಿಸಲಾಗಿದೆ. ಪಶುಪತಿನಾಥ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಪಶುಪತಿ ದೇವಾಲಯಕ್ಕೆ ಎಲೆಕ್ಟ್ರಿಕ್ ವಾಹನ ನೀಡಿದ ಭಾರತ ಸರ್ಕಾರ

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಭಾರತೀಯ ಮಹಿಳಾ ಸಂಘವು ನೇಪಾಳದಲ್ಲಿ ವಿತರಿಸಿರುವ ಎಲೆಕ್ಟ್ರಿಕ್ ವಾಹನಗಳಿಂದಾಗಿ ಎರಡು ದೇಶಗಳ ಜನರ ನಡುವೆ ಪರಸ್ಪರ ಸಾಮರಸ್ಯ ಹಾಗೂ ಸ್ನೇಹದ ವಾತಾವರಣ ಏರ್ಪಡಲಿದೆ. ಈ ಕ್ರಮವು ಉಭಯ ದೇಶಗಳ ನಡುವೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಕಾರಾತ್ಮಕ ಉಪಕ್ರಮವನ್ನು ಪ್ರಾರಂಭಿಸಬಹುದು.

Article Published On: Thursday, November 28, 2019, 14:46 [IST]
English summary
Indian government gifts two electric vehicles to Pashupati Temple in Nepal - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+