ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

By Nagaraja

ಬಹಳ ಆಸಕ್ತಿ ಕೆರಳಿಸಿರುವ ಪ್ರಕರಣವೊಂದರಲ್ಲಿ ಅತ್ಯಂತ ಪ್ರಕ್ಷುಬ್ದ ವಾಘಾ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಗೇಟ್‌ಗೆ ಅನಿವಾಸಿ ಭಾರತೀಯನೊಬ್ಬ ತನ್ನ ಕಾರನ್ನು ಬಲವಾಗಿ ಢಿಕ್ಕಿ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.

Also Read: ಕೊಚ್ಚಿಯಲ್ಲಿ ದೇಶದ ಮೊತ್ತ ಮೊದಲ ಬಂದರು ರಕ್ಷಣಾ ವ್ಯವಸ್ಥೆ

ಈ ಬಗ್ಗೆ ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಉನ್ನತಾಧಿಕಾರಿಗಳಿಂದ ಸ್ಪಷ್ಟನೆ ಬಂದಿದ್ದು, ವಿಚಾರಣೆಯನ್ನು ಗೈಗೆತ್ತಿಕೊಳ್ಳಲಾಗಿದೆ. ಘಟನೆಯ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

ಕೆನಡಾ ಮೂಲದ ಅನಿವಾಸಿ ಭಾರತೀಯನಾಗಿರುವ ಜಲಂಧರ್‌ನ ಸುರಿಂಧರ್ ಸಿಂಗ್ ಕಂಗ್ ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಮಂದಿರಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾಕಿಸ್ತಾನದ ನನ್ಕಾನ ಸಾಹೀಬ್ ಗುರುದ್ವಾರದಲ್ಲಿ ಪೂಜೆ ಸಲ್ಲಿಸಲು ಹೊರಟಿದ್ದರು.

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

ಆದರೆ ವಿಸಾ ಔಪಚಾರಿಕತೆಯನ್ನು ಪೂರ್ಣಗೊಳಿಸಲು ತುಂಬಾ ಸಮಯ ತಗುಲಲಿದೆ ಎಂಬುದನ್ನು ಅರಿತ ಅವರು ನೇರವಾಗಿ ತಮ್ಮ ಮಹೀಂದ್ರ ಸ್ಕಾರ್ಪಿಯೊ ಕಾರಿನಲ್ಲಿ ಪಯಣ ಹೊರಟಿದ್ದರು.

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

ಬಿಎಸ್‌ಎಫ್ ಪ್ರಕಾರ, "ಅಮೃತಸರ ಗೋಲ್ಡನ್ ಮಂದಿರಲ್ಲಿ ಪೂಜೆ ಸಲ್ಲಿಸಿದ ಬಳಿಕ ಅನಿವಾಸಿ ಭಾರತೀಯ, ಗಡಿಯ ಬಳಿಯಲ್ಲಿರುವ ಮೊದಲ ಕಸ್ಟಮ್ಸ್ ತಡೆಗೋಡೆಗೆ ಢಿಕ್ಕಿ ಹೊಡೆದು ಸ್ವರ್ಣ್ ಜಯಂತಿ ದ್ವಾರ್ ಬಳಿ ಮುನ್ನುಗ್ಗುತ್ತಿದ್ದರು. ಈ ವೇಳೆಯಲ್ಲಿ ಸೆರೆ ಹಿಡಿಯಲಾಗಿದೆ" ಎಂದಿದೆ.

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

ಪ್ರಾಥಮಿಕ ವಿಚಾರಣೆಯ ವೇಳೆ ಆತ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನನ್ಕಾನ ಸಾಹೀಬ್ ಮಂದಿರದಲ್ಲಿ ಪೂಜೆ ಸಲ್ಲಿಸಲು ಬಯಸಿದ್ದಾನೆ. ಆದರೆ ವೀಸಾ ಔಪಚಾರಿಕತೆಯನ್ನು ಪೂರೈಸಲು ಇಷ್ಟವಿಲ್ಲದ ಕಾರಣ ಕಾನೂನು ಬಾಹಿರ ಮಾರ್ಗಕ್ಕೆ ತುಳಿದಿದ್ದಾನೆ ಎಂದು ವಿವರಿಸಲಾಗಿದೆ.

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

ಇದಕ್ಕೂ ಮೊದಲು ಪಾಕಿಸ್ತಾನ ಪತ್ರಿಕೆ ಡಾನ್ ನೀಡಿರುವ ಹೇಳಿಕೆ ಪ್ರಕಾರ ವಾಘಾ-ಅತ್ತಾರಿ (Wagah-Attari border gate) ಪ್ರದೇಶದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದ ಅನಿವಾಸಿ ಭಾರತೀಯ ಪಾಕಿಸ್ತಾನದ ಚೆಕ್ ಪೋಸ್ಟ್‌ ಗೇಟ್ ಗೆ ಬಲವಾಗಿ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿತ್ತು.

ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್‌ ಗುದ್ದಿದ ಭಾರತೀಯ

ದೀಪಾವಳಿ ಹಬ್ಬದ ಪ್ರಯುಕ್ತ ಭಾರತದ ಬಿಎಸ್‌ಎಫ್‌ಗೆ ಪಾಕಿಸ್ತಾನದ ಪಂಜಾಬ್ ರೇಂಜರ್ಸ್ ಸೈನಿಕ ದಳ ಮಿಠಾಯಿ ಹಂಚಿ ಶುಭಾಶಯ ತಿಳಿಸಿದ ಬೆನ್ನಲ್ಲೇ ಇಂತಹದೊಂದು ಘಟನೆ ವರದಿಯಾಗಿದೆ.

ಇವನ್ನೂ ಓದಿ

ಭಾರತ ಅಶ್ವಶಕ್ತಿಯಾಗಲು ಸಹಕಾರಿಯಾದ ಯುದ್ಧ ಟ್ಯಾಂಕರ್ ಗಳು ಮುಂದಕ್ಕೆ ಓದಿ

More from DriveSpark

Article Published On: Monday, November 16, 2015, 17:10 [IST]
English summary
Indian man crashes into Pakisatn border gate
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+