ಇದು ಭಾರತವಲ್ಲ ಕಾರಿಳಿದು ಬಸ್‌ನಲ್ಲಿ ಹೋಗಿ: ಪತ್ನಿಯ ಎದರೇ ಲೈಸೆನ್ಸ್ ರದ್ದು, ನವ ದಂಪತಿಗೆ ಕಹಿ ಅನುಭವ

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ದೊಡ್ಡ ಅಪರಾಧ. ವಿಶ್ವದ ಎಲ್ಲಾ ದೇಶಗಳಲ್ಲೂ ಡ್ರೈವಿಂಗ್ ಮಾಡಲು ಕಡ್ಡಾಯವಾಗಿ ಲೈಸನ್ಸ್ ಇರಬೇಕು, ಆದರೆ ಇತ್ತೀಚೆಗಷ್ಟೇ ಹೊರದೇಶದಲ್ಲಿ ಭಾರತೀಯ ದಂಪತಿಗೆ ವಿದೇಶಿ ಪೋಲಿಸರು ಬಿಸಿ ಮುಟ್ಟಿಸಿದ್ದಾರೆ. ಹನಿಮೂನ್ ಹೊರಟಿದ್ದವರಿಗೆ ಕಹಿ ಅನುಭವ ಎದುರಾಗಿದೆ.

ಸಾಮಾನ್ಯವಾಗಿ ನಮ್ಮ ಸ್ಥಳೀಯ ಆರ್‌ಟಿಓ ನೀಡುವ ಡ್ರೈವಿಂಗ್ ಲೈಸನ್ಸ್ ಪಡೆದು ಭಾರತದಲ್ಲಿ ಎಲ್ಲಿ ಬೇಕಾದರು ಸಂಚರಿಸಬಹುದು. ಆದ್ರೆ ಇದು ಭಾರತಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನೀವು ವಿದೇಶದಲ್ಲಿ ಚಾಲನೆ ಮಾಡುತ್ತಿದ್ದರೆ, ಕಂಡಿತ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಪಡೆಯಬೇಕು. ಅಂತಹ ಚಾಲನಾ ಪರವಾನಗಿಯನ್ನು ದೇಶೀಯವಾಗಿ ಇಲ್ಲೂ ಪಡೆಯಬಹುದು. ಆದ್ರೆ ಯಾವುದೇ ಕಾರಣಕ್ಕೂ ಸ್ಥಳೀಯ ಲೈಸನ್ಸ್‌ನಲ್ಲಿ ವಿದೇಶಗಳಲ್ಲಿ ಓಡಿಸಬಾರದು.

indian-newly-married-couple-caught-speed-exceeding

ನೀವು ಭಾರತೀಯ ಚಾಲನಾ ಪರವಾನಗಿಯನ್ನು ಬಳಸಿಕೊಂಡು ಕೆಲವು ವಿದೇಶಗಳಲ್ಲಿ ವಾಹನಗಳನ್ನು ಓಡಿಸಬಹುದು. ನಮ್ಮ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಅನುಮತಿಸುವ ಕೆಲವು ದೇಶಗಳಲ್ಲಿ ನ್ಯೂಜಿಲೆಂಡ್ ಕೂಡ ಒಂದು. ಈ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಾಗಿ ಬಾಡಿಗೆ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳನ್ನು ಬಳಸುತ್ತಾರೆ.

ಇತ್ತೀಚೆಗೆ ನವವಿವಾಹಿತರು ಹನಿಮೂನ್ ಗಾಗಿ ಆಗಾಗ ನ್ಯೂಜಿಲೆಂಡ್ ಗೆ ಹೋಗಿದ್ದಾರೆ. ಅಲ್ಲಿ ದಂಪತಿಯು ಬಾಡಿಗೆ ಕಾರು ತೆಗೆದುಕೊಂಡು ಆ ಕಾರಿನಲ್ಲಿ ಅತಿವೇಗವಾಗಿ ಓಡಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ಗಮನಿಸಿ ಕಾರನ್ನು ನಿಲ್ಲಿಸಿ ದಂಪತಿಯನ್ನು ವಿಚಾರಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ವೇಗದ ಮಿತಿ ನಿಮಗೆ ತಿಳಿದಿದೆಯೇ ಎಂದು ಅವರನ್ನು ಕೇಳಲಾಯಿತು. ಕಾರಿನಲ್ಲಿದ್ದವರು ಗಂಟೆಗೆ 100 ಕಿಲೋಮೀಟರ್ ಎಂದು ಉತ್ತರಿಸಿದರು.

indian-newly-married-couple-caught-speed-exceeding

ಆದರೆ ನೀವು ಗಂಟೆಗೆ 140 ಕಿ.ಮೀ ವೇಗದಲ್ಲಿ ಓಡಿಸುತ್ತಿದ್ದೀರಿ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮಿತಿ ಮೀರಿ ಕಾರು ಚಲಾಯಿಸಿದ ಕಾರಣಕ್ಕೆ ಕಾರು ಚಲಾಯಿಸುವವರ ಚಾಲನಾ ಪರವಾನಗಿಯನ್ನು 28 ದಿನಗಳ ಕಾಲ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ತನ್ನ ತಪ್ಪನ್ನು ಕ್ಷಮಿಸುವಂತೆ ಪೊಲೀಸರನ್ನು ಬೇಡಿಕೊಂಡಿದ್ದಾನೆ.

ಆದರೆ ಪೊಲೀಸರು ಕರುಣೆ ತೋರಲಿಲ್ಲ. ಅದೃಷ್ಟವಶಾತ್ ಇಬ್ಬರು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆ. ಆದರೆ ತನ್ನ ಪತ್ನಿಗೆ ಕಾರು ಡ್ರೈವಿಂಗ್ ಅಷ್ಟಾಗಿ ಚೆನ್ನಾಗಿಲ್ಲ, ಹಾಗಾಗಿ ನನ್ನ ಡ್ರೈವಿಂಗ್ ಲೈಸೆನ್ಸ್ ಬದಲಿಗೆ ಆಕೆಯ ಡ್ರೈವಿಂಗ್ ಲೈಸನ್ಸ್ ಅಮಾನತುಗೊಳಿಸುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪದ ಪೊಲೀಸರು ಕಾರು ಬಿಟ್ಟು ಬಸ್ ನಲ್ಲಿ ಹೋಗುವಂತೆ ಸೂಚಿಸಿದರು.

indian-newly-married-couple-caught-speed-exceeding

ಆ ವ್ಯಕ್ತಿ ಎಷ್ಟೇ ಕೇಳಿಕೊಂಡರೂ ಪೊಲೀಸರು ಬಿಡಲಿಲ್ಲ. ಕೊನೆಗೆ "ನಿನ್ನ ಹೆಂಡತಿ ಗಾಡಿ ಓಡಿಸಲಿ. ಆಕೆಯ ಮೇಲೆ ನಂಬಿಕೆ ಇಲ್ಲದಿದ್ದರೆ ನೀವಿಬ್ಬರೂ ಬಸ್ಸಿನಲ್ಲಿ ಹೋಗಿ." ಎಂದು ಹೇಳಿದರು. ಅಲ್ಲದೆ ಮತ್ತೊಮ್ಮೆ ವಾಹನ ಚಲಾಯಿಸುವಾಗ ಪತ್ತೆಯಾದರೆ ಚಾಲನಾ ಪರವಾನಿಗೆ ರದ್ದುಪಡಿಸುವುದಲ್ಲದೆ ಪಾಸ್ ಪೋರ್ಟ್ ಜಪ್ತಿ ಮಾಡುತ್ತೇವೆ,'' ಎಂದು ವ್ಯಕ್ತಿಗೆ ಎಚ್ಚರಿಕೆ ನೀಡಿದರು.

ಹೀಗಾಗಿ, ಬೇರೆ ದಾರಿಯಿಲ್ಲದೆ, ಮಹಿಳೆ ತಮ್ಮ ಟೊಯೊಟಾ ಕೊರೊಲಾವನ್ನು ಓಡಿಸಲು ಡ್ರೈವರ್ ಸೀಟ್‌ಗೆ ಏರಿದರು. ಪೋಲೀಸ್ ಕಾರಿನ ಹಿಂದೆಯೇ ಓಡಿಸುತ್ತಿದ್ದ ಕಾರಣ ಆಕೆ ತನ್ನ ಕಾರನ್ನು ಗಂಟೆಗೆ 60 ಕಿ.ಮೀಗಿಂತ ಹೆಚ್ಚು ವೇಗವಾಗಿ ಓಡಿಸುತ್ತಿರಲಿಲ್ಲ. ಇದನ್ನು ನೋಡಿದ ಪೊಲೀಸರು ಸಂತೃಪ್ತಿಯಿಂದ ತೆರಳಿದರು.

ಆ ವ್ಯಕ್ತಿ ಕೇಳಿದ್ದಕ್ಕೆ ಪತ್ನಿಯ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಲು ಅವಕಾಶ ನೀಡಬಹುದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದು ತಪ್ಪು. ಏಕೆಂದರೆ ಇದನ್ನು ನೋಡಿ ಇತರರು ತಪ್ಪು ಮಾಡಬಹುದು, ಅದರಿಂದ ತಪ್ಪಿಸಿಕೊಳ್ಳಬಹುದು. ಹಾಗಾಗಿ ಪೊಲೀಸರು ಮಾಡಿದ್ದು ಸರಿ ಎಂಬುದು ನಮ್ಮ ಅಭಿಪ್ರಾಯ. ಅಧಿಕಾರಿಗಳು ಕಠಿಣವಾಗಿದ್ದಾಗ ಮಾತ್ರ ನಿಯಮಗಳು ಉಲ್ಲಂಘನೆಯಾಗುವುದಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.

Article Published On: Monday, September 18, 2023, 9:59 [IST]
English summary
Indian newly married couple caught speed exceeding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+