Just In
Don't Miss!
- Lifestyle
ಭಾನುವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
160 ರೂಪಾಯಿ ಬೆಲೆಯ ಪ್ರೀಮಿಯಂ ಪೆಟ್ರೋಲ್ ಮಾರಾಟಕ್ಕೆ ಚಾಲನೆ ನೀಡಿದ ಇಂಡಿಯನ್ ಆಯಿಲ್
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಹೈರಾಣಾಗಿರುವುದು ಸುಳ್ಳಲ್ಲ. ಇನ್ನೂ ಕೆಲವು ವಾಹನ ಸವಾರರು ತಮ್ಮ ವಾಹನಗಳನ್ನು ಹೊರ ತೆಗೆಯಲು ಹಿಂದೇಟು ಹಾಕುತ್ತಿದ್ದಾರೆ.

ಪೆಟ್ರೋಲ್ ಬೆಲೆ 100 ರೂಪಾಯಿ ಆಸುಪಾಸಿನಲ್ಲಿರುವಾಗಲೇ ವಾಹನ ಸವಾರರು ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಲು ಹಿಂದೆ ಮುಂದೆ ನೋಡುವಂತಾಗಿದೆ.ಈಗ ಹೈದರಾಬಾದ್‌ನ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಕೆಲವು ಆಯ್ದ ಪೆಟ್ರೋಲ್ ಬಂಕ್'ಗಲ್ಲಿ ಪ್ರೀಮಿಯಂ ಪೆಟ್ರೋಲ್ ಪರಿಚಯಿಸಲಾಗಿದೆ.

ಈ ಪ್ರೀಮಿಯಂ ದರ್ಜೆಯ ಪೆಟ್ರೋಲ್ ಎಂಜಿನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಜೊತೆಗೆ ವಿಶಿಷ್ಟ ರೀತಿಯ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಇಂಡಿಯನ್ ಆಯಿಲ್ ಕಾರ್ಪೊರೇಷನ್ 100 ಆಕ್ಟೇನ್ ಪ್ರೀಮಿಯಂ ಎಂಬ ಹೆಸರಿನ ಪೆಟ್ರೋಲ್ ಅನ್ನು ಹೈದರಾಬಾದ್‌ನಲ್ಲಿ ಮಾರಾಟಕ್ಕೆ ಬಿಡುಗಡೆಗೊಳಿಸಿದೆ. ಈ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 160 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಈ ವಿಶ್ವ ದರ್ಜೆಯ ಪ್ರೀಮಿಯಂ ಪೆಟ್ರೋಲ್ ಅನ್ನು ಈಗಾಗಲೇ ದೆಹಲಿ, ಗುರುಗ್ರಾಮ, ನೋಯ್ಡಾ, ಆಗ್ರಾ, ಜೈಪುರ, ಚಂಡೀಗಢ, ಲುಧಿಯಾನ, ಮುಂಬೈ, ಪುಣೆ ಹಾಗೂ ಅಹಮದಾಬಾದ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈಗ ಈ ಪ್ರೀಮಿಯಂ ಪೆಟ್ರೋಲ್ ಮಾರಾಟವನ್ನು ಹೈದರಾಬಾದ್‌ನಲ್ಲೂ ಆರಂಭಿಸಲಾಗಿದೆ. ಈ ಪ್ರೀಮಿಯಂ ದರ್ಜೆಯ ಪೆಟ್ರೋಲ್‌ನ ಬೆಲೆಯನ್ನು ಎಲ್ಲಾ ನಗರಗಳಲ್ಲಿ ಲೀಟರ್‌ಗೆ 160 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಈ ಪ್ರೀಮಿಯಂ ಪೆಟ್ರೋಲ್ ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಜಂಟಿ ಕಾರ್ಯದರ್ಶಿ ರಾಜೀವ್ ಅಮರಮ್, 100 ಆಕ್ಟೇನ್ ಪ್ರೀಮಿಯಂ ಪೆಟ್ರೋಲಿಗೆ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ರತಿ ದಿನ 200 ಲೀಟರ್ ನಿಂದ 300 ಲೀಟರ್ 100 ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಮಾರಾಟವಾಗುತ್ತಿವೆ ಎಂದು ಹೇಳಿದರು. ಎಂಜಿನ್ ಬಾಳಿಕೆಗಾಗಿ ಹಾಗೂ ಉತ್ತಮ ಕಾರ್ಯಕ್ಷಮತೆಗಾಗಿ ಪ್ರೀಮಿಯಂ ಪೆಟ್ರೋಲ್'ಗೆ ಬದಲಾಗುವುದು ಉತ್ತಮವೆಂದು ಅವರು ಹೇಳಿದರು.

ಬಿಎಸ್ - 6 ಮಾಲಿನ್ಯ ನಿಯಮಗಳನ್ನು ಪಾಲಿಸುವ ವಾಹನಗಳಿಗೆ ಈ ಪ್ರೀಮಿಯಂ ದರ್ಜೆಯ ಪೆಟ್ರೋಲ್ ಹೆಚ್ಚು ಸೂಕ್ತವಾಗಿದೆ ಎಂದು ವಾಹನ ತಜ್ಞರು ಹೇಳುತ್ತಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತಜ್ಞರ ಪ್ರಕಾರ, ಈ ಪ್ರೀಮಿಯಂ ಪೆಟ್ರೋಲ್ ಆಕ್ಸಲರೇಷನ್ ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ಕಡಿಮೆ ಮಾಲಿನ್ಯವನ್ನು ಹೊರಸೂಸುವುದರಿಂದ ಪರಿಸರ ಸ್ನೇಹಿಯಾಗಿದೆ. ಈ ಇಂಧನವು ಹೈ ಎಂಡ್ ಹಾಗೂ ಆಮದು ಮಾಡಿಕೊಂಡ ವಾಹನಗಳಿಗೆ ಸೂಕ್ತವಾಗಿದೆ.

ಈ ಇಂಧನವು ದುಬಾರಿ ವಾಹನಗಳಿಗೆ ಸೂಕ್ತ ಎಂಬುದು ತಜ್ಞರು ಅಭಿಪ್ರಾಯ. ಭಾರತದಲ್ಲಿ ಈ ಹಿಂದೆ ಸೂಪರ್ ಬೈಕ್ ಹಾಗೂ ಸೂಪರ್ ಕಾರುಗಳು ಅಪರೂಪವಾಗಿದ್ದವು. ಆದರೆ ಈಗ ದೇಶಿಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್ ಹಾಗೂ ಸೂಪರ್ ಕಾರುಗಳ ಮಾರಾಟವು ಹೆಚ್ಚುತ್ತಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.