ಬಾಹ್ಯಾಕಾಶಯಾನ ಕೈಗೊಂಡ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ

ಭಾರತೀಯ ಮೂಲದ ಮತ್ತೊಬ್ಬ ಮಹಿಳೆ ಬಾಹ್ಯಾಕಾಶಯಾನ ಕೈಗೊಂಡಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ 34 ವರ್ಷದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂಡ್ಲಾರವರು ವರ್ಜಿನ್ ಗ್ಯಾಲಕ್ಸಿಯ ಐದು ಸಿಬ್ಬಂದಿಗಳೊಂದಿಗೆ ಭಾನುವಾರ ಬಾಹ್ಯಾಕಾಶಯಾನ ಕೈಗೊಂಡಿದ್ದಾರೆ.

ಸಿರಿಶಾ ಜುಲೈ 11ರಂದು ಬಾಹ್ಯಾಕಾಶವನ್ನು ಪ್ರವೇಶಿಸಲಿದ್ದಾರೆ. ಕಲ್ಪನಾ ಚಾವ್ಲಾರವರ ನಂತರ ಬಾಹ್ಯಾಕಾಶಕ್ಕೆ ಕಾಲಿಡುತ್ತಿರುವ ಭಾರತದಲ್ಲಿ ಜನಿಸಿದ ಎರಡನೇ ಭಾರತೀಯ ಮಹಿಳೆ ಸಿರಿಶಾ. ಸಿರಿಶಾ ಬಾಂಡ್ಲಾ ಬಾಹ್ಯಾಕಾಶಯಾನ ಕೈಗೊಂಡ ಭಾರತೀಯ ಮೂಲದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅವರು ಭಾನುವಾರ ವರ್ಜಿನ್ ಗ್ಯಾಲಕ್ಸಿ ಸಿಬ್ಬಂದಿಯೊಂದಿಗೆ ಬಾಹ್ಯಾಕಾಶಯಾನ ಕೈಗೊಂಡಿದ್ದು, ಈ ಹಾರಾಟದಲ್ಲಿ ಅವರ ಜೊತೆ ಇತರ 5 ಗಗನಯಾತ್ರಿಗಳು ಭಾಗಿಯಾಗಿದ್ದಾರೆ. ಹೂಸ್ಟನ್‌ನಲ್ಲಿ ಅಧ್ಯಯನ ಪೂರ್ಣಗೊಳಿಸಿರುವ ಸಿರಿಶಾರವರು ಬಾಲ್ಯದಿಂದಲೇ ಬಾಹ್ಯಾಕಾಶಯಾನ ಕೈಗೊಳ್ಳುವ ಕನಸು ಕಂಡಿದ್ದರು.

ಸಿರಿಶಾ ಅವರೊಂದಿಗೆ ವರ್ಜಿನ್ ಗ್ಯಾಲಕ್ಸಿಯ ಸಂಸ್ಥಾಪಕ ರಿಚರ್ಡ್ ಬ್ರೆನ್ಸನ್ ಹಾಗೂ ಇತರ ನಾಲ್ವರು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಬಾಹ್ಯಾಕಾಶಯಾನ ಕೈಗೊಳ್ಳುವ ನೌಕೆಗಳು ಶಬ್ದದ ವೇಗಕ್ಕಿಂತ ಮೂರೂವರೆ ಪಟ್ಟು ವೇಗವಾಗಿರುತ್ತವೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿರಿಶಾ ತಮ್ಮೊಂದಿಗೆ ಇಡೀ ಭಾರತ ಬಾಹ್ಯಾಕಾಶಯಾನಕ್ಕೆ ಹೋಗುತ್ತಿರುವುದಾಗಿ ಭಾವಿಸುತ್ತಿದ್ದೇನೆ ಎಂದು ಹೇಳಿದ್ದರು. ಸಿರಿಶಾರವರು ತಮ್ಮ 4ನೇ ವಯಸ್ಸಿನಲ್ಲಿ ಪೋಷಕರ ಜೊತೆ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದರು.

ಸಿರಿಶಾರವರು ಹೂಸ್ಟನ್‌ನಲ್ಲಿದ್ದಾಗ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಗಗನಯಾತ್ರಿಗಳಾಗುವುದು ಹೇಗೆ ಎಂಬುದನ್ನು ತಿಳಿದು ನಂತರ ಇದೇ ದಿಕ್ಕಿನಲ್ಲಿ ಮುಂದುವರೆಯಲು ನಿರ್ಧರಿಸಿದರು.

ಸಿರಿಶಾರವರು ತಮಗೆ ಭಾರತದ ಗಗನಯಾತ್ರಿ ರಾಕೇಶ್ ಶರ್ಮಾರವರು ಸ್ಪೂರ್ತಿ ಎಂದು ಹೇಳಿದ್ದಾರೆ. ಸಿರಿಶಾ ಬಾಹ್ಯಾಕಾಶಯಾನ ಕೈಗೊಂಡ ಮೂರನೇ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.

ಈ ಹಿಂದೆ ಕಲ್ಪನಾ ಚಾವ್ಲಾ ಹಾಗೂ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಮೂಲದ ಮಹಿಳೆಯರಾಗಿದ್ದಾರೆ. ಕಲ್ಪನಾ ಚಾವ್ಲಾ ಹಾಗೂ ಸಿರಿಶಾರವರು ಭಾರತದಲ್ಲಿ ಜನಿಸಿ ಅಮೇರಿಕಾದಲ್ಲಿ ನೆಲೆಸಿದ್ದರು.

ಇನ್ನು ಸುನೀತಾ ವಿಲಿಯಮ್ಸ್'ರವರು ಅಮೆರಿಕಾದಲ್ಲಿಯೇ ಜನಿಸಿದ್ದರು. 2021ರ ಜನವರಿಯಲ್ಲಿ ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಸರ್ಕಾರಿ ವ್ಯವಹಾರ ಹಾಗೂ ಸಂಶೋಧನಾ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ಸಿರಿಶಾ ತಮ್ಮ ಕಾರ್ಯವನ್ನು ಆರಂಭಿಸಿದರು. ಸಿರಿಶಾರವರು ಟ್ವೀಟ್‌ ಮೂಲಕ ಬಾಹ್ಯಾಕಾಶಯಾನದ ಭಾಗವಾಗುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

Most Read Articles

Kannada
English summary
Indian origin women Sirisha Bandla flies to space on Sunday. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X