ವಂದೇ ಭಾರತ್ ಎಕ್ಸ್‌ಪ್ರೆಸ್ ಆಯ್ತು: ಸಾಧಾರಣ ಜನರಿಗೆ ಬರಲಿದೆಯಂತೆ ವಂದೇ ಸಾಧಾರಣ್ ರೈಲು
ಇತ್ತೀಚೆಗೆ ವಂದೇ ಭಾರತ್ ರೈಲು ಬಂದ ಮೇಲಂತೂ ಎಲ್ಲಿ ನೊಡಿದರೂ ಅದರದ್ದೇ ಮಾತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಂದೇ ಭಾರತ್ ಕುರಿತಾಗಿ ಪಾಸಿಟಿವ್ ಮತ್ತು ನೆಗೆಟಿವ್ ಇವೆರಡೂ ಬಗೆಯ ಕಾಮೆಂಟ್‌ಗಳು ಹರಿದಾಡುತ್ತಿರುವುದನ್ನು ದಿನಂಪ್ರತಿ ನಾವು ನೊಡುತ್ತಿದ್ದೇವೆ. ಇದೀಗ ಭಾರತೀಯ ರೈಲ್ವೇ ಹೊಸ ಸುದ್ದಿಯೊಂದನ್ನು ಜನರ ಮುಂದಿಟ್ಟಿದೆ.
ವಂದೇ ಭಾರತ್ ರೈಲಿನ ಭರ್ಜರಿ ಯಶಸ್ಸಿನ ನಂತರ ಭಾರತೀಯ ರೈಲ್ವೇಯು ಈಗ ಮತ್ತೊಂದು ಹೊಸ ರೈಲನ್ನು ನಿರ್ಮಿಸುತ್ತಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಮಾಹಿತಿಗಳ ಪ್ರಕಾರ ಭಾರತೀಯ ರೈಲ್ವೇಯು ಸಾಧಾರಣ ಜನರಿಗೂ ಪ್ರಯಾಣ ಮಾಡಲು ಸಾಧ್ಯವಾಗುವ ಆದರೆ ಅದೇ ಸಮಯದಲ್ಲಿ ವಂದೇ ಭಾರತ್ ರೈಲಿನ ಸೌಲಭ್ಯ ಇರುವ ರೈಲನ್ನು ನಿರ್ಮಿಸುತ್ತಿದೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ ಭಾರತೀಯ ರೈಲ್ವೇಯು, ನಾನ್ ಎಸಿ ವಂದೇ ಸಾಧರಣ್ (Vande Sadharan) ಎಂಬ ರೈಲನ್ನು ನಿರ್ಮಿಸುತ್ತಿದೆ. ಈ ರೈಲಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸಿಗುವ ಕೆಲವು ಸೌಲಭ್ಯಗಳು ದೊರಕಲಿದೆ ಎಂದು ತಿಳಿದು ಬಂದಿದೆ. ಅವುಗಳಲ್ಲಿ ಮುಖ್ಯವಾಗಿ ವಂದೇ ಭಾರತ್‌ನಲ್ಲಿರುವ ಬಯೋ ವ್ಯಾಕ್ಯೂಮ್ ಶೌಚಾಲಯಗಳು ಸೇರಲಿದೆ.
ಮುಖ್ಯವಾಗಿ ಈ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharath Express) ರೀತಿಯಲ್ಲೇ ಇರಲಿದ್ದು ಆದರೆ ನಾನ್ ಎಸಿ ಆಗಿರಲಿದೆ. ಹೀಗಾಗಿ ಇದರ ಬೆಲೆಯೂ ಸಹ ವಂದೇ ಭಾರತ್ ಗಿಂದ ಕಡಿಮೆ ಇರಲಿದೆ ಎಂಬುದು ಸಮಾಧಾನಕರವಾದ ವಿಷಯ. ಈ ಹಿಂದೆ ವಂದೇ ಭಾರತ್ ಕುರಿತಾಗಿ ಎಲ್ಲರಿಗೂ ಇದ್ದ ದೂರು ಸಹ ವಂದೇ ಭಾರತ್ ಟಿಕೇಟ್ ದರ ಕುರಿತಾಗಿಯೇ ಇತ್ತು.

ಇದೀಗ ವಂದೇ ಸಾಧಾರಣ್ ರೈಲು ಬರುವ ಮೂಲಕ ಅಗ್ಗದ ಬೆಲೆಗೆ ಪ್ರಯಾಣಿಸಬಹುದು ಎಂಬುದು ಪ್ರಯಾಣಿಕರ ನಿರೀಕ್ಷೆ. ಇನ್ನು ಈ ರೈಲಿನ ನಿರ್ಮಣವನ್ನು ಐಸಿಎಫ್ ಚೆನ್ನೈನಲ್ಲಿ ನಡೆಯಲಿದೆ. ಮುಖ್ಯವಾಗಿ ಈ ವಂದೇ ಸಾಧಾರಣ್ ರೈಲಿನಲ್ಲಿ ದೂರ ಪ್ರಯಾಣಕ್ಕೆ ಸಹಾಯವಾಗುವಂತಹ ಸ್ಲೀಪರ್ ಮತ್ತು ಇತರ ಸೌಲಭ್ಯಗಳೂ ಪ್ರಯಾಣಿಕರಿಗೆ ದೊರಕಲಿದೆ.
ಈ ವಂದೇ ಸಾಧಾರಣ್ ರೈಲು ನಿರ್ಮಾಣಕ್ಕೆ ಸುಮಾರು 65 ಕೋಟಿ ರೂಗಳು ಖರ್ಚಾಗಲಿದ್ದು ಈ ವರ್ಷದ ಕೊನೆಯಲ್ಲಿ ಇದು ಪ್ರಯಾಣಿಕರಿಗೆ ಸೇವೆ ಒದಗಿಸಲು ಸಿದ್ದವಾಗಲಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈ ರೈಲಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇರುವ ರೀತಿಯ ಸೀಟಿಂಗ್ ವ್ಯವಸ್ಥೆ ಸಿಗಲಿದೆ ಎಂಬುದು ಇದರ ಇನ್ನೊಂದು ಹೈಲೈಟ್.
ಈ ರೈಲಿನ ಸುರಕ್ಷತೆಯನ್ನು ಹೆಚ್ಚಿಸುವುದಕ್ಕೆ ಎಲ್ಲಾ ಬೋಗಿಗಳಲ್ಲು ಸಿಸಿಟಿವಿಗಳನ್ನು ಅಳವಡಿಸಲಾಗುತ್ತದೆ. ಜೊತೆಗೆ ವಂದೇ ಸಾಧಾರಣ್ ರೈಲುಗಳ ಜೊತೆಗೆ ವಂದೇ ಮೆಟ್ರೋ ಅನ್ನು ಸಹ ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ಕೆಲವು ವರದಿಗಳಿಂದ ತಿಳಿದು ಬಂದಿದ್ದು, ಮೆಟ್ರೊದಲ್ಲಿಯೂ ಸಹ ಕ್ರಾಂತಿಯನ್ನು ನಿರೀಕ್ಷಿಸಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications