ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿ ರೈಲು ಪ್ರಯಾಣವನ್ನು ಕಡಿಮೆ ಹಾಗೂ ಆರಾಮದಾಯಕವೆಂದು ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಮೊದಲು ರೈಲು ಎಂಜಿನ್‍‍ಗಳಲ್ಲಿ ಕಲ್ಲಿದ್ದಲ್ಲನ್ನು ಬಳಸಲಾಗುತ್ತಿತ್ತು.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಈಗ ಕಲ್ಲಿದ್ದಲು ಎಂಜಿನ್‍‍ಗಳಿದ್ದರೂ ಕೆಲವೆಡೆ ಎಲೆಕ್ಟ್ರಿಕ್ ಎಂಜಿನ್‍‍ಗಳನ್ನು ಬಳಸಲಾಗುತ್ತದೆ. ಅಷ್ಟಾಗಿ ಎಲೆಕ್ಟ್ರಿಕ್ ಸೌಲಭ್ಯಗಳಿಲ್ಲದ ಕಡೆ ಇನ್ನೂ ಡೀಸೆಲ್ ಎಂಜಿನ್‍‍ಗಳನ್ನೇ ಬಳಸಲಾಗುತ್ತಿದೆ. ಬಹಳಷ್ಟು ಜನರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೂ ಅವುಗಳು ನೀಡುವ ಮೈಲೇಜ್ ಬಗ್ಗೆ ಅನೇಕರಿಗೆ ಗೊತ್ತಿಲ್ಲ.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಡೀಸೆಲ್ ಎಂಜಿನ್ ಹೊಂದಿರುವ ರೈಲು ಪ್ರತಿ ಕಿ.ಮೀ ಪ್ರಯಾಣಕ್ಕೆ ಎಷ್ಟು ಲೀಟರ್ ಡೀಸೆಲ್ ಅನ್ನು ಬಳಸುತ್ತದೆ. ಪ್ರತಿ ಕಿ.ಮೀಗೆ ಎಷ್ಟು ಖರ್ಚು ಬರುತ್ತದೆ ಮುಂತಾದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಅಂದ ಹಾಗೆ ಲೊಕೊಮೋಟಿವ್ ಡೀಸೆಲ್ ಎಂಜಿನ್ ಹೊಂದಿರುವ ರೈಲುಗಳ ಮೈಲೇಜ್ ಅನ್ನು ಪ್ರತಿ ಕಿ.ಮೀಗೆ ಬಳಸುವ ಲೀಟರ್ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಪ್ರತಿ ಗಂಟೆಗೆ ಬಳಸುವ ಲೀಟರ್ ಎಂದು ಪರಿಗಣಿಸಲಾಗುತ್ತದೆ.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಎಂಜಿನ್‍‍ಗಳು ನೀಡುವ ಮೈಲೇಜ್ ಅವುಗಳ ಮೇಲೆ ಹಾಕಲಾಗುವ ತೂಕವನ್ನು ಅವಲಂಬಿಸಿರುತ್ತದೆ. ಲೊಕೊಮೋಟಿವ್ ಎಂಜಿನ್‍‍ಗಳನ್ನು ಅವುಗಳ ಫ್ಯೂಯಲ್ ಸಾಮರ್ಥ್ಯದ ಆಧಾರದ ಮೇಲೆ 5,000 ಲೀಟರಿನ ಎಂಜಿನ್, 5,500 ಲೀಟರಿನ ಎಂಜಿನ್ ಹಾಗೂ 6,000 ಲೀಟರಿನ ಎಂಜಿನ್ ಎಂದು ಮೂರು ಭಾಗ ಮಾಡಲಾಗುತ್ತದೆ.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾರ್ ಆಗಿರಲಿ ಅಥವಾ ಬೈಕ್ ಆಗಿರಲಿ, ಅವುಗಳ ಮೈಲೇಜ್ ಅವುಗಳ ಮೇಲೆ ಇರುವ ತೂಕವನ್ನು ಅವಲಂಬಿಸಿರುತ್ತದೆ. ಅದೇ ರೀತಿ ರೈಲಿನ ಮೈಲೇಜ್ ಸಹ ತೂಕವನ್ನು ಅವಲಂಬಿಸಿರುತ್ತದೆ. 24 ಬೋಗಿಗಳನ್ನು ಹೊಂದಿರುವ ಪ್ಯಾಸೆಂಜರ್ ರೈಲು 6 ಲೀಟರ್ ಡೀಸೆಲ್‍‍ನಿಂದ 1 ಕಿ.ಮೀ ದೂರ ಚಲಿಸುತ್ತದೆ.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತಿಯೊಂದು ರೈಲ್ವೆ ಸ್ಟೇಷನ್‍‍ನಲ್ಲಿ ನಿಲುಗಡೆಯಾಗುವ 12 ಬೋಗಿಗಳ ಪ್ಯಾಸೆಂಜರ್ ರೈಲು 6 ಲೀಟರ್ ಡೀಸೆಲ್‍‍ನಿಂದ 1 ಕಿ.ಮೀ ದೂರ ಚಲಿಸುತ್ತದೆ. ಇನ್ನು ಎಕ್ಸ್ ಪ್ರೆಸ್ ರೈಲುಗಳು, ಹೆಚ್ಚು ನಿಲುಗಡೆ ಹೊಂದದ ಕಾರಣಕ್ಕೆ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತವೆ.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಎಕ್ಸ್ ಪ್ರೆಸ್ ರೈಲುಗಳು 4.5 ಲೀಟರ್ ಡೀಸೆಲ್‍‍ನಿಂದ 1 ಕಿ.ಮೀ ದೂರ ಚಲಿಸುತ್ತವೆ. ಡೀಸೆಲ್ ಎಂಜಿನ್ ಹೊಂದಿರುವ ರೈಲುಗಳನ್ನು ಹೆಚ್ಚು ಹೊತ್ತು ರೈಲ್ವೆ ಸ್ಟೇಷನ್‍‍ಗಳಲ್ಲಿ ನಿಲ್ಲಿಸಿದ್ದರೂ ಸಹ ಅವುಗಳಲ್ಲಿರುವ ಎಂಜಿನ್ ಅನ್ನು ಆಫ್ ಮಾಡದೇ ಇರುವುದನ್ನು ಗಮನಿಸಬಹುದು.

ಡೀಸೆಲ್ ಎಂಜಿನ್ ರೈಲು ನೀಡುವ ಮೈಲೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಡೀಸೆಲ್ ಎಂಜಿನ್ ಅನ್ನು ನಿಲ್ಲಿಸಿದಾಗ ಬ್ರೇಕ್ ಪೈಪ್‍‍ನ ಪ್ರೆಷರ್ ಕಡಿಮೆಯಾಗುತ್ತದೆ. ಪ್ರೆಷರ್ ಅನ್ನು ಹೆಚ್ಚಿಸಲು ಬಹಳ ಸಮಯ ಬೇಕಾಗುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ. ಇದರ ಜೊತೆಗೆ, ಡೀಸೆಲ್ ಎಂಜಿನ್ ಅನ್ನು ರಿ ಸ್ಟಾರ್ಟ್ ಮಾಡಲು 10ರಿಂದ 15 ನಿಮಿಷಗಳು ಬೇಕಾಗುತ್ತವೆ.

Most Read Articles

Kannada
English summary
What is the fuel efficiency offered by diesel locomotives. Read in Kannada.
Story first published: Thursday, February 13, 2020, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X