ಡ್ರೈವರ್ ಇಲ್ಲದ ಟ್ಯಾಕ್ಸಿಯಲ್ಲಿ ಭಾರತೀಯ ಮಹಿಳೆ: ಅನುಭವವನ್ನು ಬಿಚ್ಚಿಟ್ಟಿದ್ದು ಹೀಗೆ... ಭಾರತದಲ್ಲಿ ಯಾವಾಗ?
ತಂತ್ರಜ್ಞಾನಗಳು ಮುಂದೆ ಹೋದಂತೆಲ್ಲಾ ಮನುಷ್ಯ ಅದಕ್ಕೆ ಬೇಕಾದ ರೀತಿಯಲ್ಲಿ ತನ್ನನ್ನು ತಾನು ಒಗ್ಗಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ಸಾರಿಗೆಯಲ್ಲಿ ಆಗುತ್ತಿರುವ ತಂತ್ರಜ್ಞಾನನ ಬೆಳವಣಿಗೆಗಗಳನ್ನು ನೋಡಿದರೆ, ಭವಿಷ್ಯದಲ್ಲಿ ನಾವ್ಯಾರೂ ಊಹಿಸಲಾಗದ ರೀತಿಯಲ್ಲಿ ಬೆಳೆದು ನಿಲ್ಲುವುದಂತೂ ಖಂಡಿತ. ಇದಕ್ಕೆ ಹಲವಾರು ರೀತಿಯ ಉದಾಹರಣೆಗಳು ಈಗಾಗಲೇ ನಮ್ಮೆಲ್ಲರ ಮುಂದೆ ಇವೆ.
ಸಾರಿಗೆಯಲ್ಲಿ ತಂತ್ರಜ್ಞಾನದ ಮಾತುಗಳು ಬಂದಂತೆಲ್ಲಾ ನಮಗೆ ಕಣ್ಣು ಮುಂದೆ ಬರುವ ಮೊದಲ ಚಿತ್ರಣವೆಂದರೆ ಅದು ಡ್ರೈವರ್ ಇಲ್ಲದೇ ಚಲಿಸುವ ವಾಹನಗಳು (Autopilot Taxi). ಹೌದು, ಇತ್ತೀಚಿನ ದಿನಗಳಲ್ಲಿ ಆಡಾಸ್ ಅಥವಾ ಆಟೋ ಪೈಲೆಟ್ ತಂತ್ರಜ್ಞಾನ ಬಂದಂತೆಲ್ಲಾ ಡ್ರೈವರ್ ಇಲ್ಲದೇ ವಾಹನಗಳನ್ನು ಚಲಾಯಿಸುವುದು ಒಂದು ರೀತಿಯಲ್ಲಿ ಟ್ರೆಂಡ್ ಆಗಿಬಿಟ್ಟಿದೆ.

ಆಟೋ ಪೈಲೆಟ್ ತಂತ್ರಜ್ಞಾನವನ್ನು ಇತರ ದೇಶಗಳಿಗೆ ಹೋಲಿಸಿದರೆ ಭಾರತ ತೀರಾ ಹಿಂದೆ ಉಳಿದಿದೆ. ಇಲ್ಲೊಂದು ಭಾರತೀಯ ಮಹಿಳೆ ಅಮೇರಿಕಾದಲ್ಲಿ ತಾನು ಅನುಭವಿಸಿದ ಆಟೋಪೈಲೆಟ್ ಪ್ರಯಾಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸದ್ಯಕ್ಕೆ ವೈರಲ್ ಆಗುತ್ತಿದೆ. ತನ್ನ ಮೊದಲ ಆಟೋಪೈಲೆಟ್ ಟ್ಯಾಕ್ಸಿ ಪ್ರಯಾಣವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಮಹಿಳೆ ತೀರಾ ಎಕ್ಸೈಟ್ ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಕಾಣುವಂತೆ ಮಹಿಳೆಯೊಬ್ಬರು ಟ್ಯಾಕ್ಸಿ ಒಂದನ್ನು ಬುಕ್ ಮಾಡುವುದರ ಮೂಲಕ ಈ ಎಲ್ಲಾ ಘಟನೆಗಳ ಆರಂಭ ಎಂದೇ ಹೇಳಬಹುದು. ಕೆಲವೇ ನಿಮಿಷದಲ್ಲಿ ಅವರಿದ್ದ ಜಾಗಕ್ಕೆ ಜಾಗುವಾರ್ ಕಂಪನಿಯ ಐ ಪೇಸ್ ಕಾರು ಅವರ ಮುಂದೆ ಬಂದು ನಿಲ್ಲುತ್ತದೆ. ಕಾರನ್ನು ಗಮನಿಸಿದರೆ ದೊಡ್ಡ ದೊಡ್ಡ ಸೆನ್ಸಾರ್‌ಗಳು ಮತ್ತ ಕ್ಯಾಮೆರಾಗಳು ಅದರ ಮೇಲೆ ಇರುವುದನ್ನು ಕಾಣಬಹುದು.
ಇದಾದ ಕೆಲವೇ ಕ್ಷಣಗಳಲ್ಲಿ ಆಕೆ ಒಂದು ಆ್ಯಪ್ ಸಹಾಯದಿಂದ ಆ ಕಾರಿನ ಡೋರ್‌ಗಳನ್ನು ಓಪನ್ ಮಾಡಿ ಆಕೆ ಮತ್ತು ಆಕೆಯ ಜೊತೆಗಿದ್ದ ಗೆಳೆಯರು ಕಾರಿನೊಳಗೆ ಕೂತು ಊಬರ್‌ನಲ್ಲಿ ಹೇಳು ವಂತೆ ರೈಡ್ ಸ್ಟಾರ್ಟ್ ಮಾಡುವಂತೆ ಹೇಳುತ್ತಾಳೆ. ಅದಕ್ಕಾಗಿ ಕಾರಿನ ಸ್ಕ್ರೀನ್‌ನಲ್ಲಿ ಕಾಣುವ ಸ್ಟಾರ್ಟ್ ಬಟನ್ ಅನ್ನು ಪ್ರೆಸ್ ಮಾಡುತ್ತಾರೆ. ಕೆಲವೇ ಕ್ಷಣಗಳಲ್ಲಿ ಕಾರು ಸ್ಟಾರ್ಟ್ ಆಗಿ ಲೊಕೇಷನ್‌ನಲ್ಲಿ ತಿಳಿಸಿರುವ ಜಾಗದ ಕಡೆ ಪ್ರಯಾಣ ಆರಂಭಿಸುತ್ತದೆ.
ಇದು ಅವರ ಹೊಸ ಅನುಭವ ಆಗಿರುವುದರಿಂದ ತೀರಾ ಎಕ್ಸೈಟ್ ಆಗಿದ್ದರು ಎಂಬುದು ವಿಡಿಯೋದಿಂದ ತಿಳಿದು ಬರುತ್ತದೆ. ಅವರು ಡ್ರೈವರ್ ಇಲ್ಲದಿರುವ ಕಾರ್‌ನಲ್ಲಿ ಚಲಿಸುತ್ತಿರುವಾಗ ತಾರ್‌ಝಾನ್ ವಾಂಡರ್ ಕಾರು ನೆನಪಾಗಿರುವುದಂತೂ ಖಂಡಿತ. ಆ ಚಿತ್ರದಲ್ಲಿಯೂ ಸಹ ವರ್ಷಗಳ ಹಿಂದೆಯೇ ಈ ರೀತಿ ಡ್ರೈವರ್ ಇಲ್ಲದಿರುವ ಕಾರನ್ನು ನಾವು ನೋಡಿದ್ದೇವೆ.

ಇನ್ನು ಈ ವಿಡಿಯೋದ ಕಾಮೆಂಟ್ ಸೆಕ್ಷನ್ ನೋಡುವುದಾದರೆ ಹಲವರು ಈ ಪ್ರಯಾಣದ ಕುರಿತಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದು ಬಹುತೇಕರು ಖುಷಿ ಖುಷಿಯಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಲವರು ತಾವೂ ಸಹ ಈ ರೀತಿ ಡ್ರೈವರ್ ಇಲ್ಲದಿರುವ ಕಾರುಗಳಲ್ಲಿ ಪ್ರಯಾಣ ಮಾಡಬೇಕು ಎಂಬ ಇಚ್ಚೆಯನ್ನು ಸಹ ವ್ಯಕ್ತಪಡಿಸಿದ್ದಾರೆ.
ಆದರೆ ಡ್ರೈವರ್ ಲೆಸ್ ಕಾರುಗಳಲ್ಲಿ ಎಕ್ಸೈಟ್‌ಮೆಂಟ್‌ಗಿಂತ ಹೆಚ್ಚಿನ ಅಪಾಯಗಳು ಸಹ ಇರುತ್ತದೆ ಎಂಬುದನ್ನು ನಾವು ಗಮನಿಸಬೇಕು. ಡ್ರೈವರ್ ಇಲ್ಲದೇ ಚಲಿಸುತ್ತಿರುವುದರಿಂದ ಎದುರುಗಡೆಯಿಂದ ಒಂದು ವಾಹನ ನೇರವಾಗಿ ಬಂದು ಈ ಕಾರಿನೊಂದಿಗೆ ಗುದ್ದಿದರೆ ಆಗ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಏನೇ ಆದರೂ ತಂತ್ರಜ್ಞಾನದ ಬೆಳವಣಿಗೆ ಒಳ್ಳೆದೇ. ಆದರೆ ನಾವು ಎಚ್ಚರಿಕೆಯಿದ ಇರಬೇಕಾದುದು ಮುಖ್ಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications