ಪಾಕಿಸ್ತಾನದಲ್ಲಿ ಒಂದು ತಿಂಗಳ ಕಾರು ಮಾರಾಟವು ಭಾರತದಲ್ಲಿ ಕೇವಲ ಒಂದು ದಿನದ ಮಾರಾಟ

ನೆರೆಯ ಪಾಕಿಸ್ತಾನ ದೇಶವು 1971ರಲ್ಲಿ ಭಾರತದ ವಿರುದ್ಧದ ಯುದ್ದ ಸೋತು ಪ್ರತ್ಯೇಕ ಬಾಂಗ್ಲಾ ದೇಶ ರಚನೆಯಾದಾಗ ಸೃಷ್ಟಿಯಾದ ವೇಳೆ ಆರ್ಥಿಕ ದುಸ್ಥಿತಿ ಇದೀಗ ಮತ್ತೆ ಎದುರಾಗಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಘೋಷಣೆಯಾದ ಬೆನ್ನಲೇ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿದೆ.

ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾದ ಕಾರಣಗಳಿಂದಾಗಿ ಪಾಕಿಸ್ತಾನದ ಷೇರು ಮಾರುಕಟ್ಟೆ ಪಾತಾಳ ಸೇರಿದೆ.ಪಾಕಿಸ್ತಾನ ಕೂಡ ಶ್ರೀಲಂಕಾದ ರೀತಿಯಲ್ಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಐಎಂಎಫ್​ನಿಂದ ಸಾಲ ಮಂಜೂರಾತಿಯಾದರೂ ಹಣ ಬಿಡುಗಡೆ ಆಗುತ್ತಿಲ್ಲ. ಐಎಂಎಫ್ ಹೇಳಿದ ರೀತಿಯಲ್ಲಿ ಪಾಕಿಸ್ತಾನದಲ್ಲಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದು ವಿಳಂಬವಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಐಎಂಎಫ್ ಹಣ ಬಿಡುಗಡೆ ಮಾಡುತ್ತಿಲ್ಲ.

ಪಾಕಿಸ್ತಾನದಲ್ಲಿ 1 ತಿಂಗಳ ಕಾರು ಮಾರಾಟ ಭಾರತದಲ್ಲಿ ಒಂದು ದಿನದ ಮಾರಾಟ

ಇನ್ನು ಪಾಕಿಸ್ತಾನದ ಆಟೋಮೊಬೈಲ್ ರಂಗ ಕೂಡ ಐತಿಹಾಸಿಕ ಕುಸಿತವನ್ನು ಕಂಡಿದೆ. ಇನ್ನು ಭಾರತೀಯ ಮಾರುಕಟ್ಟೆಯು ಕೊರೋನಾ ಬಳಿಕ ಉತ್ತಮ ಚೇತರಿಕೆಯನ್ನು ಕಂಡಿದೆ. ಪಾಕಿಸ್ತಾನ ಮತ್ತು ಭಾರತದ ವಾಹನಗಳ ಮಾರಾಟ ಭಾರೀ ದೊಡ್ಡ ಅಂತರವಿದೆ. ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ 3.34 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಆದರೆ ಪಾಕಿಸ್ತಾನ ಕಳೆದ ತಿಂಗಳು ಕೇವಲ ಐದು ಸಾವಿರಕ್ಕೂ ಹೆಚ್ಚು ವಾಹನಗಳು ಮಾರಾಟ ಮಾಡಿದೆ,

ಪಾಕಿಸ್ತಾನ ಆಟೋ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(PAMA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಕೇವಲ 5,672 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿದೆ. ಇನ್ನು ಪಾಕಿಸ್ತಾನ 2022ರ ಫೆಬ್ರವರಿ ತಿಂಗಳಿನ ಮಾರಾಟ ಮಾಡಿದ ಕಾರುಗಳಿಗೆ ಹೋಲಿಸಿದರೆ ಶೇ .73 ರಷ್ಟು ಅಥವಾ 21,664 ಯುನಿಟ್‌ ಗಳು ಗಮನಾರ್ಹವಾಗಿ ಕಡಿಮೆಯಾಗಿದೆ.

ಪಾಕಿಸ್ತಾನದಲ್ಲಿ 1 ತಿಂಗಳ ಕಾರು ಮಾರಾಟ ಭಾರತದಲ್ಲಿ ಒಂದು ದಿನದ ಮಾರಾಟ

ಒಟ್ಟಾರೆಯಾಗಿ ಭಾರತೀಯ ವಾಹನ ವಲಯದಲ್ಲಿ ಹಲವಾರು ಸವಾಲುಗಳು ಇನ್ನೂ ಇವೆ, ಆದರೂ ವಾಹನಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿವೆ. ಪಾಕಿಸ್ತಾನದ ವಾಹನ ಉದ್ಯಮಕ್ಕೆ ಹೆಚ್ಚು ಸವಾಲಿನೊಂದಿಗೆ ಪಾತಳಕ್ಕೆ ಕುಸಿದು ಹೋಗಿದೆ. ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಪ್ರಯಾಣಿಕ ವಾಹನಗಳು ಆಮದು ಮಾಡಿಕೊಂಡಿರುವುದು ಮತ್ತು ಸ್ಥಳೀಯವಾಗಿ ತಯಾರಿಸಿದ ಮಾದರಿಗಳ ಮಿಶ್ರಣವಾಗಿದೆ.

ಹಣದುಬ್ಬರ ಮತ್ತು ದೇಶದ ಕ್ಷೀಣಿಸುತ್ತಿರುವ ಆರ್ಥಿಕತೆಯು ದೊಡ್ಡ ಪ್ರಮಾಣದ ಟೋಲ್ ಅನ್ನು ತೆಗೆದುಕೊಳ್ಳುದನ್ನು ಮುಂದುವರೆಸಿದ್ದಾರೆ. ಇನ್ನು ಅಲ್ಲಿ ವಾಹನಗಳ ಮೇಲಿನ ತೆರಿಗೆ ಕೂಡ ಹೆಚ್ಚಿದೆ. ಹಲವು ವಾಹನ ತಯಾರಕ ಕಂಪನಿಗಳು ಹಲವು ದಿನಗಳ ಕಾಲ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಕಳೆದ ಏಳು ತಿಂಗಳುಗಳಲ್ಲಿ ಪಾಕ್ ಸುಜುಕಿ ಕಂಪನಿಯು ಸುಮಾರು 40 ದಿನಗಳವರೆಗೆ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಪಾಕಿಸ್ತಾನದಲ್ಲಿ 1 ತಿಂಗಳ ಕಾರು ಮಾರಾಟ ಭಾರತದಲ್ಲಿ ಒಂದು ದಿನದ ಮಾರಾಟ

ಇಂಡಸ್ ಮೋಟಾರ್ ಕಂಪನಿಯು ಕೂಡ ಕಳೆದ ವರ್ಷದ ಆಗಸ್ಟ್‌ನಿಂದ 53 ದಿನಗಳ ಕಾಲ ಅಲ್ಲದೇವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಏರುತ್ತಿರುವ ಇಂಧನ ಬೆಲೆಗಳಿಂದ ಕೂಡ ಕಾರನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಹಲವಾರು ಜನರು ದ್ವಿಚಕ್ರ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಪಾಕಿಸ್ತಾನದ ವಾಹನ ಮಾರುಕಟ್ಟೆಯು ಚೇತರಿಕೆ ಕಾಣಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, March 22, 2023, 16:50 [IST]
English summary
Indians daily buys more cars than pakistan did in last month details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+