ಭಾರತದ ಮೊದಲ Electric Maruti 800: ಹೊಸ ತಂತ್ರಜ್ಞಾನವಿದ್ದಾಗ ಕಾರು ಹಳೆಯದಾದರೇನು?

1983 ರಿಂದ ಭಾರತೀಯರ ಅಚ್ಚುಮೆಚ್ಚಿನ ಕಾರಾಗಿ ಗುರ್ತಿಸಿಕೊಂಡಿದ್ದ ಮಾರುತಿ 800 ಹ್ಯಾಚ್‌ಬ್ಯಾಕ್ ಅನ್ನು 2014 ರಲ್ಲಿ ಸ್ಥಗಿತಗೊಳಿಸಲಾಯಿತು. ಆದ್ರೂ ಕೂಡ ಭಾರತೀಯ ವಾಹನ ಇತಿಹಾಸದಲ್ಲಿ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾಗಿ ಮಾರುತಿ 800 ಈಗಲೂ ತನ್ನ ಗತ್ತನ್ನು ಉಳಿಸಿಕೊಂಡಿದೆ. ಇಂತಹ ಕಾರಿಗೆ ಯುವಕನೊಬ್ಬ ಎಲೆಕ್ಟ್ರಿಕ್ ಅವತರನ್ನು ನೀಡಿ ಅಚ್ಚರಿಗೊಳಸಿದ್ದಾನೆ.

ಹಳೆಯ ಮಾರುತಿ 800 ಹ್ಯಾಚ್‌ಬ್ಯಾಕ್ ಅನ್ನು ರಿಯರ್-ವೀಲ್-ಡ್ರೈವ್ (RWD) ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕುರಿತ ಸಂಪೂರ್ಣ ವೀಡಿಯೊವನ್ನು ವಿಪ್ಟ್ರೋನಿಕ್ಸ್ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದ ಆರಂಭದಲ್ಲಿಯೇ, ಅವರು EV ಪರಿವರ್ತನೆ ಕಿಟ್ ಅನ್ನು ಆರ್ಡರ್ ಮಾಡಿರುವುದಾಗಿ ತಿಳಿಸಿ, ಮೂರು ದಿನಗಳ ಒಳಗೆ 800ಗೆ ಜೋಡಿಸಲು ನಿರ್ಧರಿಸಿದ್ದರು.

indias-first-electric-maruti-800-video

ಈ ಮಾರುತಿ 800 EV ಯನ್ನು ನಿರ್ಮಿಸಲು ಅವರಿಗಿದ್ದ ಮೊದಲ ಸವಾಲು ಬ್ಯಾಟರಿ ಪ್ಯಾಕ್ ಅಳವಡಿಸುವುದು. ಇದಕ್ಕಾಗಿ ಅವರು ಬಾನೆಟ್ ಅಡಿಯಲ್ಲಿದ್ದ ಎಂಜಿನ್ ಮತ್ತು ಇತರ ಘಟಕಗಳನ್ನು ತೆಗೆದುಹಾಕಿದ್ದಾರೆ. ಬಜೆಟ್ ಇಲ್ಲದ ಕಾರಣದಿಂದಾಗಿ ಮಾಲೀಕರು ಚಿಕ್ಕದಾದ ಬ್ಯಾಟರಿ ಪ್ಯಾಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆದ್ಯತೆಗೆ ಅನುಗುಣವಾಗಿ ಕಾರು ಕಾಂಪ್ಯಾಕ್ಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಹಾಗೆಯೇ ಸುಧಾರಿತ ಮತ್ತು ಹೆಚ್ಚುವರಿ ರೇಂಜ್ ನೀಡಲು ಹೆಚ್ಚುವರಿ ಬ್ಯಾಟರಿಗಳನ್ನು ಬಳಸಿಕೊಳ್ಳಬಹುದಾದ ಇನ್ನೂ ಸಾಕಷ್ಟು ಸ್ಥಳಾವಕಾಶಕ್ಕೂ ಜಾಗ ನೀಡಲಾಗಿದೆ. ಉಳಿದಂತೆ ವೈರಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಹವಾನಿಯಂತ್ರಣ (ಎಸಿ) ಘಟಕವನ್ನು ಸಹ ಕಾರಿನಿಂದ ತೆಗೆದುಹಾಕಲಾಗಿದೆ. ಜೊತೆಗೆ ಮೋಟಾರನ್ನು ಹಿಂದಿನ ಆಕ್ಸಲ್‌ನಲ್ಲಿ ಇರಿಸುವ ಮೂಲಕ ಕಾರನ್ನು ಭಾರತದ ಮೊದಲ ಎಲೆಕ್ಟ್ರಿಕ್ ಹಿಂಬದಿ-ಚಕ್ರ-ಡ್ರೈವ್ 800 ಹ್ಯಾಚ್‌ಬ್ಯಾಕ್ ಆಗಿ ಪರಿವರ್ತಿಸಲಾಗಿದೆ.

indias-first-electric-maruti-800-video

ತೂಕವನ್ನು ಸಮತೋಲನಗೊಳಿಸಲು ಬ್ಯಾಟರಿಗಳನ್ನು ಮುಂಭಾಗದಲ್ಲಿ ಇರಿಸಲಾಗಿದೆ. ಕಂಟ್ರೋಲರ್‌ ಅನ್ನು ಟ್ರಂಕ್‌ನಲ್ಲಿ ಇರಿಸಲಾಗಿದ್ದು, ಇತ್ತ ಕ್ಯಾಬಿನ್‌ನೊಳಗೆ ಪ್ರತ್ಯೇಕ ಕೀಯನ್ನು-ಇಗ್ನಿಷನ್ ಕೀಗಿಂತ ಭಿನ್ನವಾಗಿ-ಮೋಟಾರ್ ಅನ್ನು ಪ್ರಾರಂಭಿಸಲು ನೀಡಲಾಗಿದೆ. ಉಳಿದಂತೆ ಹೆಡ್‌ಲೈಟ್‌ಗಳು, ವೈಪರ್‌ಗಳು ಕಾರಿನ ಎಲ್ಲಾ ಸಾಮಾನ್ಯ ಪವರ್ ಯುನಿಟ್‌ಗಳಂತೆ ಕಾರ್ಯನಿರ್ವಹಿಸುತ್ತಿವೆ.

ಪರಿವರ್ತನಾ ಕಿಟ್‌ನಿಂದ ಒದಗಿಸಲಾದ ಘಟಕಕ್ಕಾಗಿ ಕಾರ್ಖಾನೆಯ ವೇಗವರ್ಧಕ ಪೆಡಲ್ ಅನ್ನು ಬದಲಾಯಿಸಲಾಗಿದೆ. ಒಂದು ಸ್ವಿಚ್ ಮುಂದಕ್ಕೆ ಮತ್ತು ಹಿಮ್ಮುಖ ಚಲನೆಯ ಮೇಲೆ ನಿಯಂತ್ರಣವನ್ನು ಸುಗಮಗೊಳಿಸುತ್ತದೆ. ಗೇರ್ ಲಿವರ್ 1, 2 ಮತ್ತು 3 ಎಂಬ ಮೂರು ಹಂತದ ವೇಗವರ್ಧನೆಯ ಸೆಟ್ಟಿಂಗ್‌ಗಳನ್ನು ಸಂಯೋಜಿಸುತ್ತದೆ. ಒಟ್ಟಾರೆ ಒಳಗೂ ಸಾಷ್ಟು ಬದಲಾವಣೆಗಳನ್ನು ಮಾಡಿರುವುದನ್ನು ನೋಡಬಹುದು.

indias-first-electric-maruti-800-video

ಇಲ್ಲಿ ಗಮನಿಸಿ: ಇಂತಹ ಎಲೆಕ್ಟ್ರಿಕ್ ಪರಿವರ್ತನೆಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಅನೇಕ ಸಂದರ್ಭಗಳಲ್ಲಿ ಇಂತಹ ಮಾಡಿಫೈಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿ (RTO) ಅನುಮೋದಿಸುವುದಿಲ್ಲ. ಇದು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ವೈರಿಂಗ್, ಬ್ಯಾಟರಿಗಳು ಮತ್ತು ಮೋಟರ್‌ನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವಿಸಬಹುದು.

ಈ ನಿರ್ದಿಷ್ಟ ಕಾರಿನಲ್ಲಿ ಮಾಡಲಾದ ಮಾರ್ಪಾಡುಗಳು ನಿರ್ದಿಷ್ಟ ಮಟ್ಟದ ಶುಚಿತ್ವ ಮತ್ತು ನಿಖರತೆಯನ್ನು ಹೊಂದಿರುವುದಿಲ್ಲ. ಹಾಗಯೇ ಗ್ಯಾರೆಂಟಿ ಕೂಡ ಇರುವುದಿಲ್ಲ. ಇದು ವಿಡಿಯೋಗಾಗಿ ಅವರು ಮಾಡಿದ್ದರೂ ಕಾರು ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬುದರ ಕುರಿತು ಅವರು ಗ್ಯಾರೆಂಟಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಓದುಗರು ಇಂತಹ ಪರಿವರ್ತನೆಗಳನ್ನು ಮಾಡುವ ಯೋಚನೆಗಳಿಂದ ದೂರವಿದ್ದರೆ ಉತ್ತಮ.

ಡ್ರೈವ್‌ಸ್ಪಾರ್ಕ್ ಅಭಿಪ್ರಯ: ಭಾರತದಲ್ಲಿನ ಕೆಲವು ಕಾರ್ಯಾಗಾರಗಳು RTO ಅನುಮೋದಿತ ಎಲೆಕ್ಟ್ರಿಕ್ ಪರಿವರ್ತನೆ ಕಿಟ್‌ಗಳನ್ನು ನೀಡುತ್ತವೆ. ತಮ್ಮ ಕಾರುಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಆಸಕ್ತಿ ಹೊಂದಿರುವವರಿಗೆ ಉತ್ತಮ ಗುಣಮಟ್ಟದಲ್ಲಿ ಪರಿವರ್ತನೆಗೊಳಿಸುತ್ತವೆ. ಆಸಕ್ತಿ ಉಳ್ಳವರು ಅಂತಹ ಕಂಪನಿಗಳನ್ನು ಸಂಪರ್ಕಿಸುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 28, 2023, 11:22 [IST]
English summary
Indias first electric maruti 800 video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+