ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ವಾಹನಗಳ ಕಾರ್ಯಾಚರಣೆಗೆ ಅಗತ್ಯವಾದ ಭಾಗಗಳಲ್ಲಿ ಟಯರ್ ಸಹ ಒಂದು. ಈ ಉದ್ದೇಶಕ್ಕಾಗಿ ಶೀಘ್ರದಲ್ಲೇ ಭಾರತದಲ್ಲಿ ವಿಶೇಷ ಉದ್ಯಾನವನವು ತಲೆ ಎತ್ತಲಿದೆ. ಭಾರತದಲ್ಲಿ ಟಯರ್‌ಗಳಿಗಾಗಿ ಟಯರ್ ಪಾರ್ಕ್ ಸ್ಥಾಪನೆಯಾಗಲಿದೆ ಎಂದು ವರದಿಯಾಗಿದೆ.

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಇದು ಟಯರ್‌ಗಳಿಗಾಗಿ ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಪಾರ್ಕ್ ಆಗಿರಲಿದೆ. ಈ ಪಾರ್ಕ್ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯ ಸಾರಿಗೆ ಇಲಾಖೆಯ ಯೋಜನೆಯಡಿಯಲ್ಲಿ ಸ್ಥಾಪನೆಯಾಗಲಿದೆ. ಈ ಪಾರ್ಕ್ ನಿಷ್ಪ್ರಯೋಜಕ ಟಯರ್‌ಗಳಿಂದ ತಯಾರಾದ ಶಿಲ್ಪಕಲೆಯಂತಹ ಕಲಾಕೃತಿಗಳನ್ನು ಹೊಂದಿರಲಿದೆ.

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಇದರ ಜೊತೆಗೆ ಟಯರ್‌ಗಳ ವಿಶೇಷತೆ ಬಗ್ಗೆ ಆಸಕ್ತಿದಾಯಕ ಮಾಹಿತಿಯು ಲಭ್ಯವಿರಲಿದೆ ಎಂದು ಹೇಳಲಾಗಿದೆ. ಈ ಉದ್ಯಾನವನವು ಟಯರ್ ಗಳಿಂದ ತಯಾರಾದ ಹೆಚ್ಚಿನ ಸಂಖ್ಯೆಯ ಕಲಾಕೃತಿಗಳನ್ನು ಹೊಂದಿರಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರವು ತ್ಯಾಜ್ಯ ಟಯರ್‌ಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಕೈ ಹಾಕಿದೆ. ಅನುಪಯುಕ್ತ ಟಯರ್‌ಗಳನ್ನು ಸರಕುಗಳಾಗಿ ಪರಿವರ್ತಿಸಬಹುದು ಎಂದು ತೋರಿಸುವ ಕಾರಣಕ್ಕೆ ಈ ಯೋಜನೆಯನ್ನು ಹಮ್ಮಿಕೊಂಡಿದೆ.

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ದೇಶದ ಬೇರೆ ಯಾವ ರಾಜ್ಯ ಸರ್ಕಾರವೂ ಇಂತಹ ಪ್ರಯತ್ನ ಮಾಡಿಲ್ಲ ಎಂಬುದು ಗಮನಾರ್ಹ. ಸೈಕಲ್‌ಗಳಿಂದ ಹಿಡಿದು ಟ್ರಕ್‌ಗಳವರೆಗೆ ಎಲ್ಲಾ ವಾಹನಗಳು ಟಯರ್‌ಗಳನ್ನು ಹೊಂದಿರುತ್ತವೆ. ಟಯರ್ ಗಳಿಲ್ಲದೇ ವಾಹನಗಳು ಪರಿಪೂರ್ಣವಾಗಲಾರವು ಎಂದು ಹೇಳಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಈ ಯೋಜನೆಯ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜನ್ವೀರ್ ಕಪೂರ್, ಯಾವುದನ್ನೂ ನಿಷ್ಪ್ರಯೋಜಕ ತ್ಯಾಜ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಟಯರ್ ಗಳನ್ನು ಮರುಬಳಕೆ ಮಾಡಿ ಕಲಾ ಪ್ರಕಾರವಾಗಿ ಪರಿವರ್ತಿಸಬಹುದು. ಅದರಂತೆ ಪಶ್ಚಿಮ ಬಂಗಾಳ ಸಾರಿಗೆ ನಿಗಮವು ಶೀಘ್ರದಲ್ಲೇ ಟಯರ್ ಪಾರ್ಕ್ ಆರಂಭಿಸಲಿದೆ ಎಂದು ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ವಿವಿಧ ಬಸ್ ಡಿಪೋಗಳಲ್ಲಿ ತ್ಯಾಜ್ಯವನ್ನು ಹಾಕುವ ಸ್ಕ್ರ್ಯಾಪ್ ಟಯರ್ ಗಳನ್ನು ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಆಂತರಿಕ ತಂಡವು ಪುನಃ ರಚಿಸುತ್ತಿದ್ದು, ವರ್ಣಮಯ ಮಾದರಿಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಹೇಳಿದರು.

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಎಸ್ಪ್ಲನೇಡ್ ನಲ್ಲಿ ಟಯರ್ ಪಾರ್ಕ್ ಸ್ಥಾಪಿಸಲಾಗುವುದು. ಪ್ರವಾಸಿಗರು ಕುಳಿತುಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಸಣ್ಣ ಕೆಫೆಯನ್ನು ಸಹ ಸ್ಥಾಪಿಸಲಾಗುವುದು ಎಂದು ಕಪೂರ್ ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಟಯರ್ ಗಳಿಂದ ತಯಾರಾದ ಕರಕುಶಲ ವಸ್ತುಗಳನ್ನು ಆನಂದಿಸುವುದರ ಜೊತೆಗೆ ರುಚಿಯಾದ ಚಹಾ ಹಾಗೂ ಕಾಫಿಯನ್ನು ಸವಿಯಸಬಹುದು ಎಂದು ಅವರು ಹೇಳಿದರು. ಉದ್ಯಾನವನವು ಯಾವಾಗ ಕಾರ್ಯರೂಪಕ್ಕೆ ಬರಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರವು ಇನ್ನೂ ಘೋಷಿಸಿಲ್ಲ.

ಶೀಘ್ರದಲ್ಲೇ ತಲೆ ಎತ್ತಲಿದೆ ದೇಶದ ಮೊದಲ ಟಯರ್ ಪಾರ್ಕ್

ಪಶ್ಚಿಮ ಬಂಗಾಳದಲ್ಲಿ ತಲೆ ಎತ್ತಲಿರುವ ಟಯರ್ ಪಾರ್ಕ್ ವಾಹನ ಚಾಲಕರನ್ನು ಮಾತ್ರವಲ್ಲದೆ ಸಾರ್ವಜನಿಕರನ್ನೂ ತನ್ನತ್ತ ಆಕರ್ಷಿಸಲಿದೆ. ಇದೇ ರೀತಿ ಚೆನ್ನೈ ಐಸಿಎಫ್‌ನಲ್ಲಿ ತ್ಯಾಜ್ಯ ಕಬ್ಬಿಣದ ಉತ್ಪನ್ನಗಳನ್ನು ಬಳಸಿ ಮನುಷ್ಯರಂತೆ ಹಾಗೂ ಕಾಡು ಪ್ರಾಣಿಗಳಂತೆ ವಿನ್ಯಾಸಗೊಳಿಸಲಾಗಿದೆ.ಹಲವು ಕಂಪನಿಗಳು ತ್ಯಾಜ್ಯ ವಸ್ತುಗಳನ್ನು ಬಳಸಿ ಕಲಾ ವಸ್ತುಗಳನ್ನು ರಚಿಸಿವೆ ಎಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಹಳೆಯ ಟಯರ್‌ಗಳನ್ನು ಪುನರುಜ್ಜೀವನಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರವು ಮುಂದಾಗಿದೆ.

Most Read Articles

Kannada
English summary
India's first tyre park to be open in Kolkata soon. Read in Kannada.
Story first published: Monday, November 2, 2020, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X