ದೇಶದ ಅತಿ ಉದ್ದದ ರೈಲು ಸೇತುವೆ 'ವೆಂಬನಾಡ್'
ಪ್ರಕೃತಿ ರಮಣೀಯವಾದ 'ವೆಂಬನಾಡ್ ಕಾಯಲ್' ಅಥವಾ ಸರೋವರದ ಮೇಲೆ ವೆಂಬನಾಡ್ ರೈಲು ಸೇತುವೆ ಹಾದು ಹೋಗುತ್ತದೆ. ಇದು ದೇಶದಲ್ಲೇ ಅತಿ ಉದ್ದದ ರೈಲ್ವೆ ಹಳಿ ಸೇತುವೆಯಾಗಿದ್ದು, ಎಡಪಲ್ಲಿ ಹಾಗೂ ವಲ್ಲಾರ್ ಪಾಡಂ ಪ್ರದೇಶವನ್ನು ಸಂಪರ್ಕಿಸುತ್ತದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಪ್ರಯಾಣಿಕ ರೈಲುಗಳು ಇದರಲ್ಲಿ ಹಾದು ಹೋಗುವುದಿಲ್ಲ ಬದಲಾಗಿ ಸಂಪೂರ್ಣವಾಗಿ ಸರಕು ಸಾಗಾಣಿಕಾ ರೈಲುಗಳಿಗೆ ಮೀಸಲಾಗಿದೆ.
ನೀರ ಮೇಲೆ ಹಾದುಹೋಗುವ ದೇಶದ 10 ಅತಿ ಉದ್ದದ ಸೇತುವೆಗಳು
'ದೇವರ ನಾಡು' ಎಂದೇ ಪ್ರಸಿದ್ಧಿ ಗಿಟ್ಟಿಸಿಕೊಂಡಿರುವ ಕೇರಳದಲ್ಲಿ ನೈಸರ್ಗಿಕ ಸಂಪತ್ತಿಗೇನು ಕಮ್ಮಿಯಿಲ್ಲ. ಇಲ್ಲಿನ ಸುಂದರ ವೆಂಬನಾಡ್ ಜಲಾಶಯದ ನಡುವೆ ಹಾದು ಹೋಗುವ ಈ ಅತಿ ಉದ್ದವಾದ ರೈಲು ಸೇತುವೆ ನಿಜಕ್ಕೂ ಪ್ರೇಕ್ಷಕ ರಮಣೀಯ ಪ್ರದೇಶವೆನಿಸಿದೆ.

ರಾಜ್ಯ: ಕೇರಳ
ನಗರ: ಕೊಚ್ಚಿ
ಸಂಚಾರ: ಸರಕು ಸಾಗಾಣಿಕಾ ರೈಲು
ನಿರ್ಮಾಣವಾದ ವರ್ಷ: 2011
ಉದ್ದ: 4,620 ಮೀಟರ್
ಎಲ್ಲಿ ಹಾದು ಹೋಗುತ್ತದೆ: ವೆಂಬನಾಡ್ ಸರೋವರ

ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಕೊಚ್ಚಿ ನಗರದ ಎಡಪಲ್ಲಿ ಮತ್ತು ವಲ್ಲಾರ್ ಪಾಡಂ ಪ್ರದೇಶಗಳನ್ನು ವೆಂಬನಾಡ್ ರೈಲು ಸೇತುವೆ ಸಂಪರ್ಕಿಸುತ್ತದೆ.

ಇಲ್ಲಿನ ರೈಲು ಸೇತುವೆ ಸರಕು ಸಾಗಾಣೆಗೆ ಮೀಸಲಾಗಿದ್ದು, ಇದರ ಮೇಲೆ ಪ್ರಯಾಣಿಕ ರೈಲು ಓಡಾಡುವುದಿಲ್ಲ.

ವೆಂಬನಾಡ್ ರೈಲು ಸೇತುವೆ ಒಟ್ಟು 4.62 ಕೀ.ಮೀ. ಉದವನ್ನು ಹೊಂದಿದ್ದು, 5 ಮೀಟರ್ ಅಗಲ ಹಾಗೂ 7.5 ಮೀಟರ್ ಎತ್ತರ ಪಡೆದುಕೊಂಡಿದೆ.

2007ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾದ ವೆಂಬನಾಡ್ ರೈಲು ಸೇತುವೆ 2011ರಲ್ಲಿ ಲೋಕಾರ್ಪಣೆಯಾಗಿತ್ತು.

ಪ್ರಸ್ತುತ ರೈಲು ಸೇತುವೆಯ ಶೇಕಡಾ 80ರಷ್ಟು ಕಾಮಗಾರಿಯು ಜಲಾಶಯದ ಮೇಲೆ ನಿರ್ಮಾಣವಾಗಿದ್ದು, ಇಡ್ಯಕ್ಕರ, ಮುಳವುಕಾಡ್ ಸೇರಿದಂತೆ ಮೂರು ಚಿಕ್ಕ ಚಿಕ್ಕ ದ್ವೀಪಗಳನ್ನು ಹಾದು ಹೋಗುತ್ತದೆ.

ವೆಂಬನಾಡ್ ರೈಲು ಸೇತುವೆ ಈಗ ಅಂತಾರಾಷ್ಟ್ರೀಯ ಕಂಟೈನರ್ ಸರಕು ಸಾಗಾಣಿಕಾ ಟರ್ಮಿನಲ್ (International Container Transshipment Terminal) ಆಗಿ ಮಾರ್ಪಾಟ್ಟಿದೆ.

ವೆಂಬನಾಡ್ ಸರೋವರ ದೇಶದಲ್ಲೇ ಪ್ರವಾಸಿಗರ ಸ್ವರ್ಗವಾಗಿದ್ದು, ಇದೇ ಕಾರಣಕ್ಕಾಗಿ ವೆಂಬನಾಡ್ ಎಂಬ ಹೆಸರನ್ನು ಇಡಲಾಗಿದೆ.

ಭವಿಷ್ಯದಲ್ಲಿ ಭಾರತದ ಅತಿ ದೊಡ್ಡ ನೌಕಾ ಸರಕು ಕೇಂದ್ರವಾಗಿ ಮಾರ್ಪಾಡಿಸುವ ಗುರಿಯೊಂದಿಗೆ ಇದನ್ನು ನಿರ್ಮಿಸಲಾಗಿದೆ.

ಈಗ ವೆಂಬನಾಡ್ ರೈಲು ಸೇತುವೆ ಮನೋಹರ ಚಿತ್ರಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








