ಇಂಡಿಮೋಟಾರ್ಡ್‌ 'ಟೊಂಬ್ ರೈಡರ್': ಕಾಂಬೋಡಿಯಾದಲ್ಲೊಂದು ಸಾಹಸ ಪಯಣ

By Nagaraja

ನೀವು ಮೋಟಾರುಸೈಕಲ್ ಸಾಹಸ ರೈಡಿಂಗ್ ಇಷ್ಟಪಡುತ್ತಿದ್ದೀರಾ? ಮುಕ್ತ ಅವಕಾಶ ಸಿಗದಿರುವ ಬೇಸರ ಕಾಡುತ್ತಿದೆಯೇ? ಬೇಸರ ಪಡದಿರಿ. ನಿಮಗಿದೂ ಸುವರ್ಣಾವಕಾಶವೊಂದು ಮುಂದೆ ಬಂದಿದೆ. ಹೌದು, ಮೋಟಾರುಸೈಕಲ್ ಅಡ್ವೆಂಚರ್ ಟೂರಿಂಗ್ ಸಂಸ್ಥೆಯಾಗಿರುವ ಇಂಡಿಮೋಟಾರ್ಡ್ 'ಟೊಂಬ್ ರೈಡರ್' ಪ್ರಸ್ತುತ ಪಡಿಸುತ್ತಿದ್ದು, ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರವಾದ ಕಾಂಬೋಡಿಯಾ ಶೋಧಿಸುವ ಅವಕಾಶ ಲಭ್ಯವಾಗಲಿದೆ.

ಅಂದ ಹಾಗೆ ಈ ಮಹತ್ತರ ಪ್ರವಾಸ ಮುಂಬರುವ ಮಾರ್ಚ್ 16ರಂದು ಆರಂಭವಾಗಲಿದ್ದು, ಒಂಬತ್ತು ದಿನಗಳ ಪರ್ಯಂತ ಮುಂದುವರಿಯಲಿದೆ. ಕಾಂಬೋಡಿಯಾ ರಾಜಧಾನಿ ಪೆನೋಮ್ ಪೆನ್‌ನಿಂದ ಯಾತ್ರೆ ಆರಂಭವಾಗಲಿದೆ.

indiMotard Tomb Raider

ಪ್ರಸ್ತುತ ಪ್ರವಾಸವು ಅತಿ ಸಾಹಸಮಯವಾಗಿರಲಿದ್ದು, ನೀವು ಇದುವರೆಗೆ ತಲುಪಿರದ ರಹಸ್ಯ ತೀರಾ ಪ್ರದೇಶ, ದ್ವೀಪಗಳನ್ನು ಒಳಗೊಂಡಿರಲಿದೆ. ಬಳಿಕ ಉತ್ತರ ಪೂರ್ವ ಕಾಂಬೋಡಿಯಾ ಪ್ರದೇಶವನ್ನು ಪ್ರವೇಶಿಸಲಿರುವ ಯಾತ್ರೆಯು 12ನೇ ಶತಮಾನದ ದೇವಸ್ಥಾನಗಳನ್ನು ನೋಡುವ ಅವಕಾಶ ಪಡೆಯಲಿದ್ದಾರೆ. ಪಯಣವನ್ನು ಇನ್ನೂ ರೋಚಕಗೊಳಿಸುವ ನಿಟ್ಟಿನಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳ ರುಚಿ ನೋಡುವ ಅವಕಾಶವೂ ದೊರಕಲಿದೆ. ಅಷ್ಟೇ ಅಲ್ಲದೆ ಸೀಮ್ ರೀಪ್ ದಟ್ಟಾರಣ್ಯ ಹಾದಿಯು ನಿಮಗೆ ಜೀವಮಾನದ ಅನುಭವ ನೀಡಲಿದೆ.

ಹೋಂಡಾ ಎಕ್ಸ್‌ಆರ್ 250ಎಸ್, ಬಜಾಜ್ 250ಎಸ್, ಯಮಹಾ ಸೆರೊ ಎಕ್ಸ್‌ಟಿ 225 ಬೈಕ್‌ಗಳು ಲಭ್ಯವಿರಲಿದೆ. ಅಲ್ಲದೆ ನುರಿತ ತರಬೇತಿ ತಜ್ಞರು ಮಾರ್ಗದರ್ಶನವನ್ನು ನೀಡಲಿದ್ದಾರೆ. ಇವೆಲ್ಲಕ್ಕೆ ಒಟ್ಟು 1,29,000 ರು. ಖರ್ಚು ತಗುಲಲಿದೆ. ಇದು ವಿಮಾನ ಟಿಕೆಟ್, ವೀಸಾ ವೆಚ್ಚ, ಆರೋಗ್ಯ/ಅಪಘಾತ ವಿಮೆ ವೆಚ್ಚ ಹೊರತುಪಡಿಸಿದ ಲೆಕ್ಕಾಚಾರವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಆನಂದ್ ದರ್ಮರಾಜ್: +91 998 082 9440 / [email protected]

ಅಥವಾ ಭೇಟಿ ಕೊಡಿರಿ www.indimotard.com

More from DriveSpark

Article Published On: Thursday, January 30, 2014, 12:49 [IST]
English summary
If you are passionate about motorcycle adventure touring but are waiting for the right group or do not know how to go about it on your own then here is an excellent opportunity to explore the mysterious and ancient wilderness of Cambodia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+