ಪ್ರತಿವರ್ಷ ಈ ಕಾರು ವಿಧಾನಸೌಧ ಎದುರಿಗೆ ಬಂದು ನಿಲ್ಲುತ್ತದೆ.. ಆ ಮಹಾನ್ ವ್ಯಕ್ತಿಗೆ ಇಂದಿರಾ ಗಾಂಧಿ ಗಿಫ್ಟ್ ಕೊಟ್ಟಿದ್ದರು!

ಪ್ರತಿವರ್ಷ ಆಗಸ್ಟ್ 20ರಂದು ಕಪ್ಪು ಬಣ್ಣದ ಹಳೆಯ ಮರ್ಸಿಡಿಸ್ ಬೆಂಜ್ ಕಾರೊಂದು ಬೆಂಗಳೂರಿನ ವಿಧಾನಸೌಧದ ಮುಂಭಾಗ ಬಂದು ನಿಲ್ಲುತ್ತದೆ. ಅಂದು ಈ ಕಾರು ಎಲ್ಲರ ಆಕರ್ಷಣೀಯ ಕೇಂದ್ರ ಬಿಂದು ಆಗಿಬಿಟ್ಟಿರುತ್ತದೆ. ಇದರ ಮುಂದೆ ನಿಂತುಕೊಂಡು ಹಲವರು ಫೋಟೋಗಳನ್ನು ಕೂಡ ತೆಗೆಸಿಕೊಳ್ಳುತ್ತಾರೆ. ಅಂದಹಾಗೆ ನಾವಿಲ್ಲಿ ಹೇಳಲು ಹೊರಟಿರುವುದು ಹಿಂದುಳಿದ ವರ್ಗಗಳ ಹರಿಕಾರ, ಉಳುವವನೇ ಭೂಮಿಯ ಒಡೆಯ ಕಾನೂನುನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬಳಸುತ್ತಿದ್ದ ಕಾರಿನ ಬಗ್ಗೆ.. ಮಂಗಳವಾರ ಅವರ 109ನೇ ಜನ್ಮ ದಿನಾಚರಣೆ ಮಾಡಲಾಗಿದೆ. ನಮ್ಮ ಸಹೋದರ ಸಂಸ್ಥೆಯಾಗಿರುವ 'ಒನ್ಇಂಡಿಯಾ ಕನ್ನಡ' ಪ್ರತಿನಿಧಿ ಈ ಕಾರಿನ ಕುರಿತಂತೆ ತಿಳಿಸಿಕೊಡುವ ಸಲುವಾಗಿ ಅರಸು ಆಪ್ತರಾಗಿದ್ದ ಜಿ.ಎಂ.ಬಾಬು ಅವರ ವಿಶೇಷ ಸಂದರ್ಶನವೊಂದನ್ನು ನಡೆಸಿದ್ದಾರೆ.

ಮರ್ಸಿಡಿಸ್ ಬೆಂಜ್ ಕಾರು ದೇವರಾಜ ಅರಸು ಅವರಿಗೆ ಸಿಕ್ಕಿದ್ದು ಹೇಗೆ: 1972ರ ಚುನಾವಣೆಯಲ್ಲಿ ದೇವರಾಜ ಅರಸು (Devaraj Urs) ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಪ್ರಚಂಡವಾದ ಗೆಲುವನ್ನು ಸಾಧಿಸುತ್ತಾರೆ. ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರು, ವಿದೇಶದಿಂದ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ (Mercedes-Benz) ಕಾರನ್ನು ಆಮದು ಮಾಡಿಕೊಂಡು ರಾಜ್ಯ ಸರ್ಕಾರಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಇದಕ್ಕೂ ಮೊದಲು ಅರಸು ಅವರು ಅಂಬಾಸಿಡರ್ ಕಾರನ್ನು ಬಳಕೆ ಮಾಡುತ್ತಿದ್ದರು.

Indira Gandhi Gave Mercedes Car For Former Cm Devaraj Urs Details

1968ರ ಮಾಡೆಲ್‌ನ ಎಂಇಒ 777 ನೋಂದಣಿ ಸಂಖ್ಯೆ ಹೊಂದಿದ್ದ ಈ ಕಾರು, 10 ವರ್ಷಗಳು ದೇವರಾಜ ಅರಸು ಅವರ ಮೆಚ್ಚಿನ ಸಾರಥಿಯಾಗಿತ್ತು. ಆ ನಂತರ ಹಲವು ವರ್ಷಗಳ ಕಾಲ ಸರ್ಕಾರದ ವಶದಲ್ಲಿದ್ದ ಕಾರನ್ನು ಹರಾಜಿನಲ್ಲಿ ಅರಸು ಆಪ್ತರಾಗಿದ್ದ ಜಿ.ಎಂ.ಬಾಬು ಅವರು ತೆಗದುಕೊಳ್ಳುತ್ತಾರೆ. ಇಲ್ಲಿವರೆಗೆ ಕಾಪಾಡಿಕೊಂಡು ಬಂದಿದ್ದು, ಈಗಲೂ ಚಾಲನೆಗೆ ಯೋಗ್ಯವಾಗಿದೆ.

ಎಲ್ಲರಿಗೂ ಅಚ್ಚುಮೆಚ್ಚು: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಯಾರೇ ಮುಖ್ಯಮಂತ್ರಿಯಾಗಿದ್ದರೂ ಪ್ರತಿವರ್ಷ ಆಗಸ್ಟ್ 20ರಂದು ಈ ಕಾರು ವಿಧಾನಸೌಧದ ಮುಂದೆ ಬಂದು ನಿಲ್ಲುತ್ತದೆ. ಪ್ರತಿಯೊಬ್ಬ ಮುಖ್ಯಮಂತ್ರಿಗಳು ಸಹ ಅರಸು ಅವರ ಕಾರಿನ ಎದುರಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಈ ಹಿಂದೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಕ್ಲಿಕ್ಕಿಸಿ ಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಹಿಂದಿನ ಅವಧಿಯಲ್ಲಿ ಇದೇ ಕಾರಿನಲ್ಲಿ ವಿಧಾನಸೌಧದ ಸುತ್ತಲೂ ಒಂದು ಸುತ್ತು ತಿರುಗಾಡಿದ್ದರು.

ದೇವರಾಜು ಅರಸು ಅವರ ಸಾಧನೆಗಳೇನು: ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸು ಅವರು ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಹರಿಕಾರರಾಗಿದ್ದ ಅವರು, ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣಕರ್ತರು ಆಗಿದ್ದಾರೆ. ಮೈಸೂರು ರಾಜ್ಯವನ್ನು1973ರ ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಿದ ಕೀರ್ತಿಯು ಅರಸು ಅವರಿಗೆ ಸಲ್ಲುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 21, 2024, 12:55 [IST]
English summary
Indira gandhi gave mercedes car for former cm devaraj urs details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+