ದುಬೈಗಿಂತ ಕಮ್ಮಿಯೇನಲ್ಲ ಇಂಡೋನೇಷ್ಯಾ ಪೊಲೀಸ್
ಸೂಪರ್ ಕಾರುಗಳನ್ನು ತಮ್ಮ ಭದ್ರತಾ ಪಡೆಗೆ ಸೇರ್ಪಡಿಸುವುದರಲ್ಲಿ ದುಬೈ ಪೊಲೀಸ್ ಹೆಸರಾಂತವಾಗಿದೆ. ಇಂತಹದೊಂದು ಸಾಂಪ್ರದಾಯವನ್ನು ಜರ್ಮನ್ನರು ಮೊದಲು ಆರಂಭಿಸಿದ್ದರು ಎಂದು ಹೇಳಿದರೆ ತಪ್ಪಾಗಲಾರದು.
ಆದರೆ ಬೆನ್ನು ಬೆನ್ನಿಗೆ ಸೂಪರ್ ಕಾರುಗಳ ಖರೀದಿಯಿಂದಾಗಿ ದುಬೈ ಪೊಲೀಸ್ ಜಗತ್ತಿನ ಅತ್ಯಂತ ದುಬಾರಿ ಪೊಲೀಸ್ ಪಡೆ ಎನಿಸಿಕೊಂಡಿದೆ. ಈ ಎಲ್ಲ ವಿಷಯಗಳು ಒಂದೆಡೆಯಾದರೆ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಇಂಡೋನೇಷ್ಯಾ ಪೊಲೀಸ್ ಸಹ ಎರಡು ಸೂಪರ್ ಕಾರುಗಳನ್ನು ತಮ್ಮ ತೆಕ್ಕೆಗೆ ಸೇರಿಸಿದೆ.

ಇಟಲಿ ಮೂಲದ ಪ್ರಖ್ಯಾತ ಲಂಬೋರ್ಗಿನಿ ಗಲರ್ಡೊ ಹಾಗೂ ಅವೆಂಟಡೊರ್ ಕಾರುಗಳನ್ನು ಇಂಡೋನೇಷ್ಯಾ ಪೊಲೀಸ್ ಖರೀದಿಸಿವೆ. ಇವೆರಡು ಕಾರುಗಳಿಗೆ ಆಕರ್ಷಕ ಬಣ್ಣವನ್ನು ಸಹ ಬಳಿಯಲಾಗಿದೆ. ಈ ಪೈಕಿ ಅವೆಂಟಡೊರ್‌ನ ವಿ12 ಎಂಜಿನ್ 700 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೆ ಗಲರ್ಡೊದ ವಿ10 ಎಂಜಿನ್ 575 ಅಶ್ವಶಕ್ತಿ ಉತ್ಪಾದಿಸಲಿದೆ.
ನಿಮ್ಮ ಮಾಹಿತಿಗಾಗಿ, ಜರ್ಮನ್ನರು ಮೊದಲ ಬಾರಿಗೆ ಪೋರ್ಷೆ 911 ದುಬಾರಿ ಕಾರನ್ನು ತಮ್ಮದಾಗಿಸಿಕೊಂಡಿತ್ತು. ಇದೇ ಸಾಂಪ್ರದಾಯವನ್ನು ದುಬೈ ಸೇರಿದಂತೆ ಹಲವಾರು ರಾಷ್ಟ್ರಗಳು ಹಿಂಬಾಲಿಸಿತ್ತು.


Click it and Unblock the Notifications








