ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಕಲಾವಿದನೊಬ್ಬನ ಕೈಚಳಕಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಆತನ ಕೈಚಳಕದಿಂದ ಮೂಡಿಬಂದಿರುವ ಕಾರೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್‌ ಆಗಿದ್ದು, ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಕಲಾವಿದ ಅಂದುಕೊಂಡರೆ ಏನನ್ನಾದರೂ ಸೃಷ್ಟಿಸಬಲ್ಲ ಎಂಬುದಕ್ಕೆ ಈತ ನಿದರ್ಶನವಾಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್ಸ್‌ ಮೂಲಕ ಹಾಡಿಹೊಗಳುತ್ತಿದ್ದಾರೆ.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಹೌದು. ಇಂದೋರ್‌ನ ಕಲಾವಿದರೊಬ್ಬರು ಅದ್ಭುತವಾದ ಕಲಾಕೃತಿಯನ್ನು ರಚಿಸಿ ಪ್ರತಿಯೊಬ್ಬರ ಹುಬ್ಬೇರಿಸುವಂತೆ ಮಾಡಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ 'ಸುಂದರ್ ಗುರ್ಜರ್' ಹಳೆಯ ಅಂಬಾಸಿಡರ್ ಕಾರನ್ನು ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿಕೊಂಡು ಅದ್ಬುತವಾಗಿ ತಯಾರಿಸಿದ್ದಾರೆ. ಈ ಕಾರು ನೋಡಲು ರೋಬೋಟ್‌ನಂತೆ ಕಾಣುತ್ತಿದ್ದು, ನೋಡುಗರನ್ನು ಆಶ್ವರ್ಯ ಚಕಿತರನ್ನಾಗಿಸಿದೆ.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಸುಂದರ್ ಗುರ್ಜರ್ ಹಳೆ ಅಂಬಾಸಿಡರ್‌ ಮರುತಯಾರಿಗಾಗಿ ಸುಮಾರು 1,000 ಕೆ.ಜಿಯಷ್ಟು ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿದ್ದಾರೆ. ಈಗ ಈ ಕಾರು ಸಂಪೂರ್ಣವಾಗಿ ಹೊಸದಾಗಿ ಕಾಣುತ್ತಿದ್ದು, ಅದರ ಮೇಲೆ ಮಾಡಲಾದ ಡಿಸೈನ್ ಆಕರ್ಷಣೀಯವಾಗಿದೆ. ಇಡೀ ಕಾರಿಗೆ 700 ಕೆ.ಜಿ ಬೋಲ್ಟ್‌ಗಳು, 400 ಕೆ.ಜಿ ಚೈನ್ ಮತ್ತು ಇತರ ಬಿಡಿ ಭಾಗಗಳನ್ನು ಅಳವಡಿಸಿದ್ದಾರೆ. ಈ ಸುಂದರವಾದ ಅಂಬಾಸಿಡರ್ ಕಾರನ್ನು ತಯಾರಿಸಲು ಒಟ್ಟು 3 ತಿಂಗಳು ಬೇಕಾಯಿತು ಎಂದು ಸುಂದರ್ ಗುರ್ಜರ್ ತಿಳಿಸಿದ್ದಾರೆ.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್ ಕಾರು ಸಾರ್ವಕಾಲಿಕ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈ ವಾಹನದ ಮೇಲಿನ ವಾಹನ ಸವಾರರ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು 2014 ರಲ್ಲಿ ಸ್ಥಗಿತಗೊಳಿಸಲಾಯಿತು.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ವಾಹನ ಮಾರುಕಟ್ಟೆಯಲ್ಲಿ ದಶಕಗಳಿಂದ ಅಧಿಪತ್ಯ ಸಾಧಿಸಿರುವ ಅಂಬಾಸಿಡರ್ ಕಾರನ್ನು ಇನ್ನೂ ಹಲವರು ಗ್ರಾಹಕರು ಬಳಸುತ್ತಿದ್ದಾರೆ. ಭಾರತದಲ್ಲಿ ಸ್ಕ್ರ್ಯಾಪಿಂಗ್ ವ್ಯವಸ್ಥೆ ಜಾರಿಗೆ ಬಂದ ನಂತರ, ಎಲ್ಲಾ ಹಳೆಯ ಕಾರುಗಳನ್ನು ಸಹ ಮರೆಬೇಕಾಯಿತು. ಇದರ ಭಾಗವಾಗಿ ಈ ಹೆಚ್ಚಿನ ಕಾರುಗಳು ನಶಿಸಿ ಹೋಗುತ್ತಿವೆ.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಆದಾಗ್ಯೂ ಇಲ್ಲಿ ಕಾಣುವ ಅಪರೂಪದ ಕಾರು ಸಂಪೂರ್ಣವಾಗಿ ಸ್ಕ್ರ್ಯಾಪ್‌ನಿಂದ ಮಾಡಲ್ಪಟ್ಟಿದೆ. ಆದರೆ, ಇದರ ತಯಾರಿಕೆಯಲ್ಲಿ ನಮ್ಮ ಕಲಾವಿದನ ಅದ್ಭುತ ಪ್ರತಿಭೆ ಕಣ್ಣಿಗೆ ಕಟ್ಟಿದಂತಿದೆ. ಕಾರಿನ ನೋಟಕ್ಕೆ ಅಡ್ಡಿಯಾಗದಂತೆ ಎಲ್ಲಾ ಕಬ್ಬಿಣದ ತುಣುಕುಗಳನ್ನು ಸರಿಯಾಗಿ ಒಟ್ಟಿಗೆ ಅಂಟಿಸಲಾಗಿದೆ ಎಂದು ಅವರು ಖಚಿತಪಡಿಸಿದರು.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಸುಂದರ್ ಗುರ್ಜರ್ ಅವರು ಫೈನ್‌ ಆರ್ಟ್ಸ್‌ ಮಾಡಿದ್ದಾರೆ. ಕಲಿತ ವಿದ್ಯೆಯಿಂದ ಈಗಾಗಲೇ ಅನೇಕ ವಸ್ತುಗಳ ತಯಾರಿಯನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ, ಈಗ ತಯಾರಿಸಿರುವ ಅಂಬಾಸಿಡರ್ ಕಾರು ಹಳೆಯ ದಿನಗಳನ್ನು ನೆನಪಿಸುವಂತಿದೆ. ತುಂಬಾ ಬೆಳ್ಳಗೆ ಕಾಣುತ್ತಿದ್ದ ಕಾರು ಈಗ ಕಬ್ಬಿಣದ ಸರಪಳಿ ಇರುವ ರೋಬೋಟ್ ನಂತೆ ಕಾಣುತ್ತಿದೆ.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

'ಹಿಂದೂಸ್ತಾನ್ ಮೋಟಾರ್ಸ್'ನ 'ಅಂಬಾಸಿಡರ್' ಕಾರು ಒಂದು ಕಾಲದಲ್ಲಿ ಶ್ರೀಮಂತರು ಮತ್ತು ಸರ್ಕಾರಿ ಅಧಿಕಾರಿಗಳು ಬಳಸುವ ವಾಹನ ಎಂದು ಅನೇಕರಿಗೆ ಚಿರಪರಿಚಿತ. 1990ರ ದಶಕದಲ್ಲಿ ಈ ಕಾರು ಅಪಾರ ಜನಪ್ರಿಯತೆಯನ್ನು ಗಳಿಸುವುದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದೆ.

ಸ್ಕ್ರ್ಯಾಪ್ ಮೆಟೀರಿಯಲ್ ಬಳಸಿ ಅಂಬಾಸಿಡರ್ ಕಾರಿಗೆ ಸುಂದರ ಆಕೃತಿ ನೀಡಿದ ಕಲಾವಿದ

ಸ್ವಾತಂತ್ರ್ಯದ ನಂತರ ಭಾರತದಲ್ಲಿ ವಾಹನ ಯುಗವನ್ನು ಆರಂಭಿಸಿದ 'ಅಂಬಾಸಿಡರ್' ಕಾರು ಬಿಎಸ್ 6 ಎಮಿಷನ್ ಮಾನದಂಡಗಳನ್ನು ಅನುಸರಿಸದ ಕಾರಣ ಸ್ಥಗಿತಗೊಂಡಿತು. ಹಿಂದೂಸ್ತಾನ್ ಅಂಬಾಸಿಡರ್ ಅನ್ನು ಇನ್ನೂ ಅನೇಕ ಸ್ಥಳಗಳಲ್ಲಿ ಟ್ಯಾಕ್ಸಿ ಮತ್ತು ಕ್ಯಾಬ್ ಆಗಿ ಬಳಸಲಾಗುತ್ತಿದೆ.

Most Read Articles

Kannada
English summary
Indore man who made an old ambassador car using scrap material
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X