ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಉದ್ಯಮಿ ಕುಮಾರಮಂಗಲಂ ಬಿರ್ಲಾರವರು ಇತ್ತೀಚೆಗೆ ರೋಲ್ಸ್ ರಾಯ್ಸ್ ಘೋಸ್ಟ್ ಇಡಬ್ಲ್ಯೂಬಿ ಕಾರ್ ಅನ್ನು ಖರೀದಿಸಿದ್ದಾರೆ. ಅವರು ಖರೀದಿಸಿರುವ ಕಾರು ಇತ್ತೀಚಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದೆ. ಹೊಸ ತಲೆಮಾರಿನ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಕಂಪನಿಯ ನಾಲ್ಕನೇ ಮಾದರಿಯಾಗಿದೆ. ಈ ಕಾರಿನ ಆನ್ ರೋಡ್ ಬೆಲೆ ರೂ.9 ಕೋಟಿಗಳಾಗಿದೆ. ಕುಮಾರಮಂಗಲಂ ಬಿರ್ಲಾರವರು ಖರೀದಿಸಿರುವುದು ರೋಲ್ಸ್ ರಾಯ್ಸ್ ಘೋಸ್ಟ್‌ನ ಎಕ್ಸ್'ಟೆಂಟೆಡ್ ವ್ಹೀಲ್‌ಬೇಸ್ ಮಾದರಿ ಕಾರನ್ನು.

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಈ ಕಾರನ್ನು ಇಡಬ್ಲ್ಯೂಬಿ ಎಂದೂ ಸಹ ಕರೆಯಲಾಗುತ್ತದೆ. ರೋಲ್ಸ್ ರಾಯ್ಸ್ ಘೋಸ್ಟ್ ಇಡಬ್ಲ್ಯೂಬಿ ಕಾರಿನ ಬೆಲೆ ಕಸ್ಟಮೈಸ್ ಆಯ್ಕೆ ಅಥವಾ ಯಾವುದೇ ರಸ್ತೆ ತೆರಿಗೆ ಇಲ್ಲದೆ ರೂ.7.95 ಕೋಟಿಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಕುಮಾರಮಂಗಲಂ ಬಿರ್ಲಾ ಈ ಐಷಾರಾಮಿ ಕಾರಿನಲ್ಲಿ ಯಾವುದಾದರೂ ಕಸ್ಟಮೈಸ್ ಆಯ್ಕೆ ಪಡೆದಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಡಬ್ಲ್ಯೂಬಿ ಆವೃತ್ತಿಯು ಸ್ಟಾಂಡರ್ಡ್ ಆವೃತ್ತಿಗಿಂತ 170 ಎಂಎಂ ಉದ್ದವಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಎತ್ತರವಾಗಿರುವುದರಿಂದ ಈ ಮಾದರಿಯು ಸ್ಟಾಂಡರ್ಡ್ ಮಾದರಿಗಿಂತ 80 ಕೆ.ಜಿ ಹೆಚ್ಚು ತೂಕವನ್ನು ಹೊಂದಿದೆ. ಈ ಕಾರಿನ ಎರಡನೇ ತಲೆಮಾರಿನ ಮಾದರಿಯು ಮೊದಲ ತಲೆಮಾರಿನ ಮಾದರಿಗಿಂತ ಭಾರವಾದ ಅಪ್ ಡೇಟ್'ಗಳನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಈ ಕಾರಿನಲ್ಲಿ ಹೊಸ ಸ್ಪೇಸ್ ಫ್ರೇಮ್ ಚಾಸಿಸ್ ಅನ್ನು ಬಳಸಲಾಗಿದೆ. ಈ ಚಾಸಿಸ್ ಅನ್ನು ಫ್ಯಾಂಟಮ್‌ ಕಾರಿನಲ್ಲಿಯೂ ಬಳಸಲಾಗಿದೆ. ಈ ಕಾರು ಹಲವಾರು ಐಷಾರಾಮಿ ಫೀಚರ್ ಹಾಗೂ ಎಕ್ವಿಪ್'ಮೆಂಟ್'ಗಳನ್ನು ಹೊಂದಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ರೋಲ್ಸ್ ರಾಯ್ಸ್ ಘೋಸ್ಟ್ ಇಡಬ್ಲ್ಯೂಬಿ ಕಾರಿನಲ್ಲಿ 6.75 ಲೀಟರಿನ ವಿ 12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 563 ಬಿಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಈ ಎಂಜಿನ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಘೋಸ್ಟ್ ಕಾರಿನಲ್ಲಿರುವ ರೇರ್ ವ್ಹೀಲ್ ಹ್ಯಾಂಡ್ಲಿಂಗ್ ಹೆಚ್ಚಿನ ವೇಗವನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ. ಜೊತೆಗೆ ಕಡಿಮೆ ವೇಗದಲ್ಲಿ ಟರ್ನಿಂಗ್ ರೆಡಿಯಸ್ ಅನ್ನು ಕಡಿಮೆ ಮಾಡುತ್ತದೆ.

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಕುಮಾರಮಂಗಲಂ ಬಿರ್ಲಾ

ಇದಕ್ಕೂ ಮುನ್ನ ಕುಮಾರಮಂಗಲಂ ಬಿರ್ಲಾರವರು ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು ಬಳಸುತ್ತಿದ್ದರು. ಆ ಕಾರನ್ನು ದೀರ್ಘಕಾಲದವರೆಗೆ ಬಳಸಿದ್ದರು.ಈಗ ಹಲವು ವರ್ಷಗಳ ನಂತರ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದ್ದಾರೆ.

Most Read Articles

Kannada
English summary
Industrialist Kumarmangalam Birla buys Rolls Royce Ghost car. Read in Kannada.
Story first published: Friday, April 16, 2021, 20:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X