ಮಗಳಿಗಾಗಿ ಸರ್ವಸ್ವ ತ್ಯಜಿಸಿದ ಅಪ್ಪನಿಗೆ ದುಬಾರಿ ಜೀಪ್ ರಾಂಗ್ಲರ್ ಉಡುಗೊರೆ

ತಂದೆ-ತಾಯಿ ಮಕ್ಕಳ ಕನಸುಗಳನ್ನು ನನಸಾಗಿಸಲು ತಮ್ಮ ಕನಸುಗಳನ್ನು ತ್ಯಾಗ ಮಾಡುತ್ತಾರೆ. ಮಕ್ಕಳು ಎಷ್ಟೇ ದೊಡ್ಡವರಾಗಲಿ ಅವರು ಸದಾ ಕಣ್ಣ ಮುಂದಿದ್ದರೇ ಸಾಕು ಎಂದು ಖುಷಿಪಡುವವರು ಹೆತ್ತವರು. ತಮ್ಮ ಮಕ್ಕಳು ಜೀವನದಲ್ಲಿ ಒಳ್ಳೆಯ ಹೆಸರು ಮಾಡಬೇಕು, ನಾಲ್ಕು ಮಂದಿಯ ಬಳಿ ಸಾಲ ಪಡೆಯಬಾರದು ಎಂಬುದು ಎಲ್ಲಾ ತಂದೆ-ತಾಯಿಯ ಆಶಯವಾಗಿರುತ್ತದೆ. ಇನ್ನು ಮಕ್ಕಳು ಐಷಾರಾಮಿ ಉಡುಗೊರೆ ಕೊಡಬೇಕು ಎಂಬ ಬಯಕೆಗಳು ಹೆತ್ತವರಿಗೆ ಇರುವುದಿಲ್ಲ. ಆದ್ರೆ ಮಕ್ಕಳು ಪ್ರಯೋಜಕರಾಗಿ ಅನಿರೀಕ್ಷಿತವಾಗಿ ಉಡುಗೊರೆ ಕೊಟ್ಟರೆ ಅಂತಹ ಕ್ಷಣಗಳನ್ನು ಅವರು ಮರೆಯುವುದಿಲ್ಲ. ಇಂಥಹದ್ದೇ ಅಪರೂಪದ ಘಟನೆ ಇತ್ತೀಚಗೆ ನಡೆದಿದೆ.

ಯುವತಿಯೊಬ್ಬರು ತಂದೆಗೆ ದುಬಾರಿ ಕಾರನ್ನು ಉಡುಗೊರೆ ನೀಡಿ ಅಚ್ಚರಿಗೊಳಿಸಿದ್ದಾರೆ. ಖ್ಯಾತ ಯ್ಯೂಟೂಬರ್ ಆಕೃತಿ ರಾಣಾ ಅವರು ತಮ್ಮ ತಂದೆಗೆ ಹೊಚ್ಚಹೊಸ ಜೀಪ್ ರಾಂಗ್ಲರ್ ರೂಬಿಕಾನ್ (Jeep Wrangler Rubicon) ಎಸ್‍ಯುವಿಯನ್ನು ಗಿಪ್ಟ್ ಕೊಟ್ಟಿದ್ದಾರೆ. ಈ ಅದ್ಭುತ ಉಡುಗೊರೆಯನ್ನು ನೋಡಿದ ನಂತರ ಆಕೆಯ ತಂದೆ ಅಚ್ಚರಿಗೊಂಡಿದ್ದಾರೆ. ಉಡುಗೊರೆಯಾಗಿ ನೀಡುತ್ತಿರುವ ವೀಡಿಯೊವನ್ನು ಆಕೃತಿ ರಾಣಾ ಅವರು ತನ್ಮ್ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

Jeep Wrangler Rubicon

ವೀಡೀಯೋದಲ್ಲಿ ಜೀಪ್‌ನ ಬಾನೆಟ್‌ನಲ್ಲಿ "1962" ಸ್ಟಿಕ್ಕರ್ ಅನ್ನು ಅಂಟಿಸಿದ್ದಾರೆ. ಇದು ತನ್ನ ತಂದೆಯ ಜನ್ಮ ವರ್ಷವನ್ನು ಪ್ರತಿನಿಧಿಸುತ್ತದೆ. ಇದರ ನಂತರ, ಅವರು ಶಿಮ್ಲಾದಲ್ಲಿ ನೆಲೆಸಿರುವ ತನ್ನ ತಂದೆ ಬಳಿಗೆ ಈ ಎಸ್‍ಯುವಿಯನು ತೆಗೆದುಕೊಂಡು ಹೋಗಿದ್ದಾರೆ. ನಂತರ ಮನೆಗೆ ತೆಗೆದುಕೊಂಡು ಹೋಗಿ ಆಕೆಯ ಸಹೋದರ ತಮ್ಮ ತಂದೆಯನ್ನು ಎಸ್‍ಯುವಿಯ ಮುಂದೆ ಕರೆದುಕೊಂಡು ಹೋದರು. ಅವರು ಒಂದು ಕ್ಷಣ ಅಚ್ಚರಿಗೊಂಡರು. ನಂತರ ಅವರು ಎಲ್ಲರೂ ಹೊಸ ಎಸ್‍ಯುವಿಯಲ್ಲಿ ಡ್ರೈವ್ ಹೋಗಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಜೀಪ್ ಇಂಡಿಯಾ ಅಧಿಕೃತವಾಗಿ ನವೀಕರಿಸಿದ ರಾಂಗ್ಲರ್ ಅನ್ನು ಬಿಡುಗಡೆ ಮಾಡಿತು. ಪ್ರಸ್ತುತ, ಈ ಅನ್ಲಿಮಿಟೆಡ್ ಮತ್ತು ರೂಬಿಕಾನ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ರಾಂಗ್ಲರ್ ಅನ್ಲಿಮಿಟೆಡ್ ರೂಪಾಂತರದ ಬೆಲೆಯು ರೂ.67.65 ಲಕ್ಷದಿಂದ ಪ್ರಾರಂಭವಾದರೆ, ರಾಂಗ್ಲರ್ ರೂಬಿಕಾನ್ ರೂಪಾಂತರದ ಬೆಲೆಯು ರೂ.71.65 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

Jeep Wrangler Rubicon

ಈ ಜೀಪ್ ರಾಂಗ್ಲರ್ ಎಸ್‍ಯುವಿಯಲ್ಲಿ ಗೊರಿಲ್ಲಾ ಗ್ಲಾಸ್ ವಿಂಡ್‌ಶೀಲ್ಡ್, 12-ವೇ ಹೊಂದಾಣಿಕೆ ಸೀಟುಗಳು, ಟಾಮ್‌ಟಾಮ್ ನ್ಯಾವಿಗೇಷನ್, ಸಾಫ್ಟ್-ಟಚ್ ಪ್ಲಾಸ್ಟಿಕ್‌ಗಳು, ದಪ್ಪವಾದ ಕಾರ್ಪೆಟ್‌ಗಳು, ಅಕೌಸ್ಟಿಕ್ ಫ್ರಂಟ್ ಗ್ಲಾಸ್, ಆಕ್ಟಿವ್ ಸೌಂಡ್ ಡೇಟನಿಂಗ್ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು ಇದು ಉತ್ತಮ ರಸ್ತೆ ಉಪಸ್ಥಿತಿಯನ್ನು ಹೊಂದಿರುವ ಎಸ್‍ಯುವಿಯಾಗಿದೆ.

ಈ ಐಕಾನಿಕ್ ರಾಂಗ್ಲರ್ ಆಫ್-ರೋಡ್ ಎಸ್‍ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಯು ಕನೆಕ್ಟ್ 5 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಲೆವೆಲ್-2 ಎಡಿಎಎಸ್ ಸೇರಿದಂತೆ 85 ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಇನ್ನು ಈ ರಾಂಗ್ಲರ್ ಎಸ್‍ಯುವಿಯಲ್ಲಿ 2.0 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 270 bhp ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Jeep Wrangler Rubicon

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ, ಆಫ್-ರೋಡ್ ಸಾಮರ್ಥ್ಯಗಳನ್ನು ಯಾಂತ್ರಿಕವಾಗಿ ಲಾಕ್ ಮಾಡುವ ಮುಂಭಾಗ ಮತ್ತು ಹಿಂಭಾಗದ ವ್ಯತ್ಯಾಸಗಳು, ಪೂರ್ಣ ಫ್ಲೋಟ್ 44 HD ಡಾನಾ ಹಿಂಭಾಗದ ಘನ ಆಕ್ಸಲ್, 4:1 ಕಡಿಮೆ ಅನುಪಾತದೊಂದಿಗೆ ರಾಕ್-ಟ್ರ್ಯಾಕ್ ವರ್ಗಾವಣೆ ಕೇಸ್ ಮತ್ತು BFGoodrich M/T ಟೈರ್‌ಗಳೊಂದಿಗೆ ನವೀಕರಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 25, 2024, 13:52 [IST]
English summary
Influencer gifted jeep wrangler rubicon suv to her father details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+