ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಡ್ರೈವ್ ಸ್ಪಾರ್ಕ್ ಕನ್ನಡ ಸೈಟ್ ನಲ್ಲಿ ನಮ್ಮ ಓದುಗರಿಗಾಗಿ ವಿಮಾನಗಳ ಬಗೆ ವಿವಿಧ ಆಸಕ್ತಿದಾಯಕ ಮಾಹಿತಿಯನ್ನು ನೀಡುತ್ತಲೇ ಇದ್ದೇವೆ. ಈ ಲೇಖನದಲ್ಲಿ ವಿಮಾನದ ಕಾಕ್ ಪಿಟ್ ನಲ್ಲಿರುವ ಐ ಪೊಸಿಷನ್-ಇಂಡಿಕೇಟರ್ ಬಗೆಗಿನ ಮಾಹಿತಿಯನ್ನು ನೋಡೋಣ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಕಾರುಗಳಲ್ಲಿ ಇರುವಂತೆಯೇ ವಿಮಾನಗಳ ಮುಂಭಾಗದಲ್ಲಿ ಮಿರರ್ ಗಳಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದನ್ನು ವಿಂಡ್‌ಶೀಲ್ಡ್ ಎಂದು ಕರೆಯಲಾಗುತ್ತದೆ. ಈ ವಿಂಡ್ ಶೀಲ್ಡ್ ಮಧ್ಯದಲ್ಲಿ ಪಿಲ್ಲರ್ ನಂತಹ ರಚನೆಯನ್ನು ನೀಡಲಾಗಿರುತ್ತದೆ. ಇದರಲ್ಲಿ ಮೂರು ಚೆಂಡುಗಳನ್ನು ಕಾಣಬಹುದು. ಇದನ್ನು ನೇರವಾಗಿ ಅಥವಾ ಫೋಟೋಗಳಲ್ಲಿ ನೋಡಿರಬಹುದು.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಇದರಲ್ಲಿ ಮಧ್ಯದಲ್ಲಿರುವ ಚೆಂಡು ಕೆಂಪಾಗಿದ್ದರೆ ಅದರ ಎರಡು ಬದಿಯಲ್ಲಿ ಎರಡು ಬಿಳಿ ಚೆಂಡುಗಳಿರುತ್ತವೆ. ಇದರಿಂದ ಒಟ್ಟಾರೆಯಾಗಿ ವಿಂಡ್ ಶೀಲ್ಡ್ ಕಂಬದ ಮಧ್ಯದಲ್ಲಿ ಮೂರು ಚೆಂಡುಗಳನ್ನು ನೋಡಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವಿದೆ. ಮಧ್ಯದಲ್ಲಿರುವ ಚೆಂಡು ಹೆಚ್ಚಾಗಿ ಕೆಂಪು ಬಣ್ಣದಲ್ಲಿರುತ್ತದೆ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಕೆಲವೊಮ್ಮೆ ಕಿತ್ತಳೆ ಬಣ್ಣದ ಚೆಂಡನ್ನು ಮಧ್ಯದಲ್ಲಿ ಇಡಲಾಗುತ್ತದೆ. ಆದರೆ ಹೆಚ್ಚಿನ ವಿಮಾನಗಳಲ್ಲಿ ಕೆಂಪು ಚೆಂಡು ಮಧ್ಯದಲ್ಲಿರುತ್ತದೆ. ವಿಮಾನಗಳು ಏಕೆ ಬಿಳಿ ಹಾಗೂ ಕೆಂಪು ಚೆಂಡುಗಳನ್ನು ಹೊಂದಿರುತ್ತವೆ ಎಂಬ ಪ್ರಶ್ನೆ ಉದ್ಭವಿಸಬಹುದು. ಈ ಲೇಖನದಲ್ಲಿ ಆ ಪ್ರಶ್ನೆಗೆ ಉತ್ತರ ನೋಡೋಣ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಕೆಲವು ಜನರು ಈ ಚೆಂಡುಗಳನ್ನು ಸ್ವಿಚ್ ಎಂದು ಭಾವಿಸುತ್ತಾರೆ. ಈ ಕಾರಣಕ್ಕೆ ಇದು ಪ್ರಕಾಶಮಾನವಾಗಿರುತ್ತದೆ ಎಂದು ನಂಬಲಾಗಿದೆ. ಆದರೆ ಇದು ನಿಜವಲ್ಲ.ಇವು ಕೇವಲ ಚೆಂಡುಗಳು. ಈ ಚಿಕ್ಕ ಚೆಂಡುಗಳನ್ನು ಇಡುವ ಹಿಂದೆ ಒಂದು ದೊಡ್ಡ ಕಾರಣವಿದೆ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಈ ಚೆಂಡುಗಳನ್ನು ಐ ಪೊಸಿಷನ್ ಇಂಡಿಕೇಟರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ವಾಹನವಾದರೂ ಕಾರು, ಬಸ್, ಟ್ರಕ್, ಸೀಟುಗಳು ಬಹಳ ಮುಖ್ಯ. ಚಾಲಕ ಸರಿಯಾದ ಸ್ಥಾನದಲ್ಲಿ ಕುಳಿತಿದ್ದರೆ ಮಾತ್ರ ವಾಹನವನ್ನು ಸುರಕ್ಷಿತವಾಗಿ ಹಾಗೂ ಆರಾಮವಾಗಿ ನಿರ್ವಹಿಸಬಹುದು.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ವಿಮಾನದ ಪೈಲಟ್‌ಗಳಿಗೆ ಈ ಸೀಟ್ ಬಹಳ ಮುಖ್ಯವಾಗಿರುತ್ತದೆ. ಪೈಲಟ್‌ಗಳು ಸರಿಯಾದ ಸ್ಥಾನವನ್ನು ಕಂಡುಕೊಳ್ಳಲಿ ಎಂಬ ಕಾರಣಕ್ಕೆ ಈ ಚೆಂಡುಗಳನ್ನು ನೀಡಲಾಗುತ್ತದೆ. ವಿಮಾನಗಳಲ್ಲಿ ಸೀಟುಗಳನ್ನು ಕಾರುಗಳಂತೆ ಹಿಂದಕ್ಕೆ, ಮುಂದಕ್ಕೆ, ಮೇಲಕ್ಕೆ ಹಾಗೂ ಕೆಳಕ್ಕೆ ಅಡ್ಜಸ್ಟ್ ಮಾಡಬಹುದು.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಮಧ್ಯದಲ್ಲಿರುವ ಕೆಂಪು ಚೆಂಡನ್ನು ನೋಡುವಾಗ ಪೈಲಟ್‌ಗಳು ಸೀಟುಗಳನ್ನು ಹಿಂದಕ್ಕೆ, ಮುಂದಕ್ಕೆ ಅಥವಾ ಕೆಳಕ್ಕೆ ಅಡ್ಜಸ್ಟ್ ಮಾಡುತ್ತಾರೆ. ಕೆಂಪು ಚೆಂಡಿನ ಹಿಂದಿರುವ ಬಿಳಿ ಚೆಂಡು ಕಣ್ಮರೆಯಾಗುವಂತೆ, ಮತ್ತೊಂದು ಬಿಳಿ ಚೆಂಡು ಕೆಂಪು ಚೆಂಡಿಗೆ ಸಮಾನಾಂತರವಾಗಿ ಒಂದೇ ಸಾಲಿನಲ್ಲಿರುವಂತೆ ಅಡ್ಜಸ್ಟ್ ಮಾಡಲಾಗುತ್ತದೆ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಸೀಟ್ ಅನ್ನು ಗೋಚರಿಸುವಂತೆ ಅಡ್ಜಸ್ಟ್ ಮಾಡಿದರೆ ಸರಿಯಾದ ಸೀಟ್ ಪೊಸಿಷನ್ ಪಡೆಯಬಹುದು. ಇದರಿಂದ ಪೈಲಟ್‌ಗಳಿಗೆ ಸರಿಯಾದ ನೋಟ ಸಿಗುತ್ತದೆ. ಇದರಿಂದ ಪೈಲಟ್‌ಗಳು ಪ್ರೈಮರಿ ಫ್ಲೈಟ್ ಡಿಸ್ ಪ್ಲೇ (ಪಿಎಫ್‌ಡಿ) ಹಾಗೂ ನ್ಯಾವಿಗೇಷನ್ ಡಿಸ್‌ಪ್ಲೇ (ಎನ್‌ಡಿ) ನಂತಹ ಸಾಧನಗಳನ್ನು ಸುಲಭವಾಗಿ ಕಾಣಬಹುದು.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಇದರ ಜೊತೆಗೆ ಹೊರಭಾಗವನ್ನು ಪೈಲಟ್ ಗಳು ಸ್ಪಷ್ಟವಾಗಿ ನೋಡಬಹುದು. ವಿಂಡ್ ಶೀಲ್ಡ್ ಕಂಬದ ಮಧ್ಯದಲ್ಲಿರುವ ಚೆಂಡುಗಳನ್ನು ನೋಡುವಾಗ ಸೀಟ್ ಅನ್ನು ಅಡ್ಜಸ್ಟ್ ಮಾಡಿದರೆ ಸರಿಯಾದ ಸೀಟ್ ಪೊಸಿಷನ್ ಪಡೆಯಬಹುದು. ಇದಕ್ಕಾಗಿಯೇ ವಿಮಾನಗಳಲ್ಲಿ ಬಿಳಿ ಹಾಗೂ ಕೆಂಪು ಚೆಂಡುಗಳನ್ನು ನೀಡಲಾಗುತ್ತದೆ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಈ ಸೀಟ್ ಪೊಸಿಷನ್ ಪೈಲಟ್‌ಗಳಿಗೆ ಸರಿಯಾದ ನೋಟವನ್ನು ನೀಡುತ್ತದೆ. ಇದರಿಂದ ಕಾಕ್‌ಪಿಟ್‌ನಲ್ಲಿ ಸ್ವಿಚ್‌ ಹಾಗೂ ಸಲಕರಣೆಗಳನ್ನು ಬಳಸಲು ಸುಲಭವಾಗುತ್ತದೆ. ವಿಮಾನಗಳಲ್ಲಿ ಬಿಳಿ ಹಾಗೂ ಕೆಂಪು ಚೆಂಡುಗಳನ್ನು ಏಕೆ ಬಳಸಲಾಗುತ್ತದೆ ಎಂಬ ಪ್ರಶ್ನೆಗೆ ಈ ಲೇಖನದಿಂದ ಉತ್ತರ ಸಿಕ್ಕಿರಬಹುದೆಂದು ಎಂದು ನಾವು ಭಾವಿಸುತ್ತೇವೆ.

ವಿಮಾನಗಳ ಕಾಕ್ ಪಿಟ್'ಗಳಲ್ಲಿರುವ ಐ ಪೊಸಿಷನ್ ಇಂಡಿಕೇಟರ್'ಗಳ ಬಗೆಗಿನ ಸಂಗತಿಗಳಿವು

ಆಗಸದಲ್ಲಿ ಹಾರಾಡುವ ವಿಮಾನಗಳು ನಿಜಕ್ಕೂ ವಿಸ್ಮಯಗಳ ಆಗರವಾಗಿವೆ. ವಿಮಾನಗಳು ಎಷ್ಟು ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ದೊಡ್ಡ ವಿಮಾನಗಳು ಹಲವು ದಶಕಗಳವರೆಗೆ ಸೇವೆ ಸಲ್ಲಿಸುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದರೆ ವಿಮಾನವೊಂದರ ಸರಾಸರಿ ಜೀವಿತಾವಧಿ ಕೇವಲ 25 ವರ್ಷದಿಂದ 30 ವರ್ಷಗಳಾಗಿರುತ್ತದೆ. ಯಾವುದೇ ವಿಮಾನವು ಸಂಪೂರ್ಣವಾಗಿ ಹಳೆಯದಾಗುವವರೆಗೆ ಕಾಯುವುದಿಲ್ಲ. ಹಲವು ವಿಮಾನಗಳು ತಮ್ಮ ಪೂರ್ಣ ಜೀವನವನ್ನು ಸಹ ತಲುಪುವುದಿಲ್ಲ. ವಿಮಾನದ ಜೀವಿತಾವಧಿ ಸುಮಾರು 25 ವರ್ಷಗಳೇ ಆದರೂ ಬಹುತೇಕ ವಿಮಾನಗಳು 18 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಿಯಾಗುತ್ತವೆ.ವಿಮಾನವು ನಿವೃತ್ತಿಯಾದ ನಂತರ ಅದು ತನ್ನ ಕೊನೆಯ ಹಾರಾಟವನ್ನು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಮಾಡುತ್ತದೆ. ಈ ಸ್ಟೋರೆಜ್ ವಿಮಾನ ನಿಲ್ದಾಣವು ದೊಡ್ಡದಾಗಿದ್ದು, ತೆರೆದ ಆಕಾಶದ ಅಡಿಯಲ್ಲಿರುತ್ತದೆ. ಈ ಸ್ಟೋರೆಜ್ ವಿಮಾನ ನಿಲ್ದಾಣಗಳನ್ನು ಪ್ರಪಂಚದ ಹಲವು ಭಾಗಗಳಲ್ಲಿ ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ನೈಋತ್ಯ ಅಮೆರಿಕಾದಲ್ಲಿವೆ. ಈ ಸ್ಥಳದಲ್ಲಿ ಭೂಮಿಯ ಲಭ್ಯತೆ ಹೆಚ್ಚಾಗಿದ್ದು ಗಾಳಿ ಒಣಗಿರುವುದರಿಂದ ವಿಮಾನಗಳು ತುಕ್ಕು ಹಿಡಿಯುವ ಪ್ರಕ್ರಿಯೆ ತುಂಬಾ ನಿಧಾನವಾಗಿರುತ್ತದೆ.ವಿಮಾನವು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಬಂದ ನಂತರ, ಅದರ ಮೇಲಿರುವ ಉಪ್ಪಿನ ಅಂಶವನ್ನು ತೆಗೆದುಹಾಕಲು ವಿಮಾನವನ್ನು ಚೆನ್ನಾಗಿ ತೊಳೆಯಲಾಗುತ್ತದೆ. ನಂತರ ಆ ವಿಮಾನದ ಪ್ಯುಯಲ್ ಟ್ಯಾಂಕ್‌ಗಳನ್ನು ಬರಿದಾಗಿಸಿ, ಲೂಬ್ರಿಕಂಟ್‌ಗಳನ್ನು ಹಚ್ಚಲಾಗುತ್ತದೆ. ವಿಮಾನಗಳ ಟಯರ್‌ಗಳನ್ನು ಸಹ ಸುರಕ್ಷಿತವಾಗಿಡಲಾಗುತ್ತದೆ.

Most Read Articles

Kannada
English summary
Information about cockpit eye position indicators in airplanes details
Story first published: Sunday, August 29, 2021, 11:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X