ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ದೇಶದಲ್ಲಿ ವಾಹನಗಳ ಕಳ್ಳತನ ಸಾಮಾನ್ಯವಾಗಿದೆ. ಪ್ರತಿದಿನ ನೂರಾರು ವಾಹನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಪೊಲೀಸರು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವಾಹನ ಕಳ್ಳತನಗಳನ್ನು ನಿಯಂತ್ರಣಕ್ಕೆ ತರಲಾಗುತ್ತಿಲ್ಲ.

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಕಳ್ಳತನವನ್ನು ತಡೆಗಟ್ಟಲು ಪೊಲೀಸರು ಮಾತ್ರವಲ್ಲದೆ ವಾಹನ ತಯಾರಕ ಕಂಪನಿಗಳು ಸಹ ವಿವಿಧ ಹೊಸ ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸುತ್ತಿವೆ. ಆದರೆ ಕಳ್ಳರು ಹೈ ಟೆಕ್ ತಂತ್ರಜ್ಞಾನಗಳ ಮೂಲಕ ಕಳ್ಳತನ ಮಾಡುತ್ತಿರುವುದು ಪೊಲೀಸರಿಗೆ ಹಾಗೂ ವಾಹನ ಮಾಲೀಕರಿಗೆ ತಲೆ ನೋವಾಗಿ ಪರಿಣಮಿಸಿದೆ. ವಾಹನಗಳ್ಳರು ಹೊಸ ಹೊಸ ತಂತ್ರಗಳೊಂದಿಗೆ ಅನುಸರಿಸುತ್ತಿರುವುದರಿಂದ ಕದ್ದ ವಾಹನಗಳನ್ನು ಪತ್ತೆಹಚ್ಚುವುದು ಸಹ ಕಷ್ಟವಾಗುತ್ತಿದೆ.

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಹಲವು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಪೊಲೀಸರಿಗೆ ವಾಹನಗಳ್ಳರ ಮುಖಚರ್ಯೆಯನ್ನು ಪತ್ತೆ ಹಚ್ಚುವುದು ಸುಲಭವಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಇತ್ತೀಚಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಕಾರನ್ನು ಕಳುವು ಮಾಡಲಾಗಿತ್ತು. ಈ ಘಟನೆಯಲ್ಲಿ ಕಾರಿನ ಮಾಲೀಕರೇ ತಮ್ಮ ಕಳುವಾದ ಕಾರನ್ನು ಬೆನ್ನಟ್ಟಿ ಪೊಲೀಸರಿಗೆ ಮಾಹಿತಿ ನೀಡಿ ಕಾರನ್ನು ಪುನಃ ವಶಕ್ಕೆ ಪಡೆದಿದ್ದಾರೆ.

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಈ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ ಎಂದು ಏಷ್ಯನೆಟ್ ಮಲಯಾಳಂ ಸುದ್ದಿ ತಾಣ ವರದಿ ಮಾಡಿದೆ. ಈ ಕ್ರಿಸ್ಟಾ ಕಾರನ್ನು ಸರ್ವೀಸ್ ಗಾಗಿ ಟೊಯೊಟಾ ಡೀಲರ್ ಬಳಿ ಬಿಡಲಾಗಿತ್ತು. ಈ ವೇಳೆ ಕಾರಿನ ಮಾಲೀಕರು ಸರ್ವೀಸ್ ಸೆಂಟರ್ ನಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು ಕಾರನ್ನು ಸುತ್ತು ಹಾಕಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಸ್ಥಳದಲ್ಲಿ ಯಾರು ಕಾಣದೇ ಇದ್ದಾಗ ಕಾರಿನಲ್ಲಿ ಕುಳಿತು ಕಾರು ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಕಚೇರಿಯೊಳಗಿಂದ ಇವುಗಳನ್ನು ಗಮನಿಸುತ್ತಿದ್ದ ಕಾರಿನ ಮಾಲೀಕರು ಕಳ್ಳನನ್ನು ಹ್ಯುಂಡೈ ಕ್ರೆಟಾ ಕಾರಿನ ಮೂಲಕ ಬೆನ್ನಟ್ಟಿದ್ದಾರೆ. ಒಂದು ಹಂತದಲ್ಲಿ ಅವರು ಕ್ರಿಸ್ಟಾ ಕಾರನ್ನು ಅಡ್ಡಗಟ್ಟಲು ಯಶಸ್ವಿಯಾದರೂ ಸಹ ಕಾರುಗಳ್ಳ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರನ್ನು ಬೆನ್ನಟ್ಟಿ ಕಾರನ್ನು ವಶಕ್ಕೆ ಪಡೆದು ಕಾರುಗಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ಘಟನೆಗಳು ಆಯಾ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಸಾಮಾನ್ಯವಾಗಿ ಒಂದು ಕಾರು ಅಥವಾ ದ್ವಿಚಕ್ರ ವಾಹನವನ್ನು ಸರ್ವೀಸ್ ಸೆಂಟರ್ ನಲ್ಲಿ ಸರ್ವೀಸ್ ಗಾಗಿ ತಂದಾಗ ಕಾರು ಮಾಲೀಕರಿಗೆ ಗೇಟ್ ಪಾಸ್ ಇದ್ದರೆ ಮಾತ್ರ ಕಾರನ್ನು ಹೊರಗೊಯ್ಯಲು ಅವಕಾಶ ನೀಡಲಾಗುತ್ತದೆ.

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಆದರೆ ಈ ಘಟನೆಯಲ್ಲಿ ಕಳ್ಳನು ಕಾರನ್ನು ಸರ್ವೀಸ್ ಸೆಂಟರ್ ನಿಂದ ಹೊರಗೆ ತೆಗೆದುಕೊಂಡದ್ದು ಹೇಗೆ ಎಂಬುದು ತಿಳಿದು ಬಂದಿಲ್ಲ. ಕದ್ದ ವಾಹನಗಳನ್ನು ಹಿಂಬಾಲಿಸದಿದ್ದರೆ ಅವುಗಳನ್ನು ಪತ್ತೆ ಹಚ್ಚುವುದು ಕಷ್ಟ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಕದ್ದ ವಾಹನಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ಜಿಪಿಎಸ್ ಹಾಗೂ ನ್ಯಾವಿಗೇಷನ್‌ನಂತಹ ಟ್ರ್ಯಾಕಿಂಗ್ ಸಾಧನಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗ ಮಾರಾಟವಾಗುತ್ತಿರುವ ಬಹುತೇಕ ವಾಹನಗಳಲ್ಲಿ ಈ ಫೀಚರ್ ಅಳವಡಿಸಲಾಗುತ್ತಿದೆ.

ಸರ್ವೀಸ್ ಸೆಂಟರ್ ನಿಂದಲೇ ಕಳುವಾದ ಟೊಯೊಟಾ ಇನೋವಾ ಕ್ರಿಸ್ಟಾ

ಆದರೆ ಈ ಫೀಚರ್ ಲಭ್ಯವಿರುವುದು ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಮಾತ್ರ. ಕೈಗೆಟಕುವ ದರದಲ್ಲಿ ವಾಹನಗಳನ್ನು ಮಾರಾಟ ಮಾಡುವ ವಾಹನ ತಯಾರಕ ಕಂಪನಿಗಳು ಈ ಫೀಚರ್ ಗಳನ್ನು ನೀಡುತ್ತಿಲ್ಲ. ಆದರೆ ಈ ಫೀಚರ್ ಅನ್ನು ಆಫ್ಟರ್ ಮಾರ್ಕೆಟ್ ಮೂಲಕವೂ ಅಳವಡಿಸಿಕೊಳ್ಳಬಹುದು.

Most Read Articles

Kannada
English summary
Innova Crysta stolen from service center. Read in Kannada.
Story first published: Saturday, October 3, 2020, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X