ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾರವರು ಯಾವಾಗಲೂ ಟ್ವಿಟರ್‌ನಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ವಿಚಾರಗಳನ್ನು ಟ್ವೀಟ್ ಮೂಲಕ ಶೇರ್ ಮಾಡುತ್ತಾರೆ. ಭಾರತೀಯರ ಕ್ರಿಯಾಶೀಲತೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಅವರಿಂದ ಸ್ಫೂರ್ತಿ ಪಡೆಯುವ ಬಗ್ಗೆ ಮಾತನಾಡುತ್ತಾರೆ.

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಇತ್ತೀಚೆಗೆ ಆನಂದ್ ಮಹೀಂದ್ರಾರವರು ಟ್ವಿಟರ್ ನಲ್ಲಿ ಸಿಸಿಟಿವಿ ಈಡಿಯಟ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ವೀಡಿಯೊವನ್ನು ಶೇರ್‌ಮಾಡಿದ್ದಾರೆ. ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಹೊಸ ತಂತ್ರಜ್ಞಾನದೊಂದಿಗೆ ಸಣ್ಣ ಸ್ಥಳದಲ್ಲಿ ಕಾರು ಪಾರ್ಕಿಂಗ್ ಮಾಡುವುದನ್ನು ಕಾಣಬಹುದು. ಆನಂದ್ ಮಹೀಂದ್ರಾರವರು ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ನಮ್ಮ ದೇಶದಲ್ಲಿ ವಾಹನ ನಿಲುಗಡೆಗೆ ಸ್ಥಳವನ್ನು ಹುಡುಕುವುದೇ ಕಷ್ಟದ ಕೆಲಸ. ಜನರು ಇರುವ ಸಣ್ಣ ಸ್ಥಳದಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಲು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಈ ವೀಡಿಯೊದಲ್ಲಿರುವ ವ್ಯಕ್ತಿ ತನ್ನ ಮನೆಯ ಮುಂದಿರುವ ಚಿಕ್ಕ ಜಾಗದಲ್ಲಿ ಕಾರ್ ಅನ್ನು ಕ್ರಿಯಾಶೀಲತೆಯಿಂದ ಪಾರ್ಕಿಂಗ್ ಮಾಡಿದ್ದಾನೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಈ ವೀಡಿಯೊ ಬಗ್ಗೆ ಮಾತನಾಡಿರುವ ಆನಂದ್ ಮಹೀಂದ್ರಾರವರು ನಾನು ಕೆಲ ದಿನಗಳ ಹಿಂದೆ ಪಂಜಾಬ್‌ನಲ್ಲಿ ನಡೆದಿದ್ದ ಇದೇ ರೀತಿಯ ಮತ್ತೊಂದು ವೀಡಿಯೊವನ್ನು ನೋಡಿದ್ದೆ. ಆದರೆ ಈ ವೀಡಿಯೊ ಮತ್ತೊಂದು ಹೆಜ್ಜೆ ಮುಂದಿದೆ. ಈ ವಿಧಾನದಲ್ಲಿರುವ ಜ್ಯಾಮಿಟ್ರಿ ನನಗೆ ಇಷ್ಟವಾಯಿತು ಎಂದು ಹೇಳಿದ್ದಾರೆ. ಈ ಮೂಲಕ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಇದರ ಜೊತೆಗೆ, ಇದನ್ನು ವಿನ್ಯಾಸಗೊಳಿಸಿದ ವ್ಯಕ್ತಿಯು ನಮ್ಮ ಉತ್ಪಾದನಾ ಘಟಕದ ವಿನ್ಯಾಸವನ್ನು ಸುಧಾರಿಸಲು ಹೊಸ ಆಲೋಚನೆಗಳನ್ನು ನೀಡಬಹುದೆಂದು ಅವರು ಹೇಳಿದ್ದಾರೆ. ಈ ವೀಡಿಯೊದಲ್ಲಿರುವ ವ್ಯಕ್ತಿ ತನ್ನ ಕೆಂಪು ಹ್ಯಾಚ್‌ಬ್ಯಾಕ್ ಅನ್ನು ಪಾರ್ಕಿಂಗ್ ಮಾಡುವುದನ್ನು ಕಾಣಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಈ ವ್ಯಕ್ತಿ ಮೊದಲು ತನ್ನ ಕಾರನ್ನು ಲೋಹದಿಂದ ಮಾಡಿದ ಪ್ಲಾಟ್‌ಫಾರಂ ಮೇಲೆ ನಿಲ್ಲಿಸಿದನು. ಈ ಪ್ಲಾಟ್‌ಫಾರಂ ಅನ್ನು ಸ್ಥಳಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಕಾರು ಪ್ಲಾಟ್‌ಫಾರಂ ಮೇಲೆ ನಿಂತ ನಂತರ ವ್ಯಕ್ತಿಯು ಕಾರಿನಿಂದ ಕೆಳಗಿಳಿದು ಪ್ಲಾಟ್‌ಫಾರಂ ಅನ್ನು ತಳ್ಳುತ್ತಾನೆ. ಇದರಿಂದಾಗಿ ಕಾರು ಸಣ್ಣ ಸ್ಥಳದಲ್ಲಿ ಪಾರ್ಕ್ ಆಗುತ್ತದೆ.

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಚಿಕ್ಕ ಜಾಗದಲ್ಲಿ ಕಾರ್ ಅನ್ನು ಪಾರ್ಕಿಂಗ್ ಮಾಡಿದ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿರುವ ಜನರು, ಆ ವ್ಯಕ್ತಿಯು ಮರವನ್ನು ಕತ್ತರಿಸದೆ ಕಾರ್ ಪಾರ್ಕಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಹುತೇಕ ಜನರು ಈ ವ್ಯಕ್ತಿಯ ಕ್ರಿಯಾಶೀಲತೆಗೆ ಸಲಾಂ ಎಂದಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರು ಪಾರ್ಕಿಂಗ್ ಕ್ರಿಯಾಶೀಲತೆಯನ್ನು ಮೆಚ್ಚಿದ ಆನಂದ್ ಮಹೀಂದ್ರಾ

ಕೆಲವು ದಿನಗಳ ಹಿಂದೆ ಆನಂದ್ ಮಹೀಂದ್ರಾರವರು ಬೈಕ್ ಪಾರ್ಕಿಂಗ್‌ನ ಚಿತ್ರಗಳನ್ನು ಶೇರ್ ಮಾಡಿದ್ದರು. ಈ ಚಿತ್ರದಲ್ಲಿ ಎರಡು ಬೈಕುಗಳನ್ನು ದೊಡ್ಡ ಪ್ಲಾಸ್ಟಿಕ್ ವಾಟರ್ ಟ್ಯಾಂಕ್ ಒಳಗೆ ನಿಲ್ಲಿಸಲಾಗಿತ್ತು. ಇದರ ಬಗ್ಗೆ ಆನಂದ್ ಮಹೀಂದ್ರಾರವರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು.

Most Read Articles

Kannada
English summary
Innovative Car Parking technique impresses Anand Mahindra. Read in Kannada.
Story first published: Tuesday, May 12, 2020, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X