41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಐಎನ್ಎಸ್ ರಜಪೂತ್ ಯುದ್ಧನೌಕೆಯನ್ನು ಶತ್ರು ರಾಷ್ಟ್ರಗಳನ್ನು ಸದೆ ಬಡಿಯಲು ದೇಶದ ನೌಕಾಪಡೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಈ ಯುದ್ದನೌಕೆ ದೇಶದ ಮೊದಲ ವಿನಾಶಕಾರಿ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಹಿಂದಿನ ಸೋವಿಯತ್ ಒಕ್ಕೂಟವು ನಿರ್ಮಿಸಿದ್ದ ಈ ಯುದ್ದನೌಕೆ 41 ವರ್ಷಗಳಿಂದ ಸೇವೆಯಲ್ಲಿತ್ತು. ಈಗ ಈ ಯುದ್ದನೌಕೆ ಸೇವೆಯಿಂದ ನಿವೃತ್ತಿಯಾಗಿದೆ. ಈ ಯುದ್ಧನೌಕೆಯಲ್ಲಿ ದೀರ್ಘ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳು, ಜಲಾಂತರ್ಗಾಮಿ ಉಡಾವಣಾ ವಿಮಾನ ವಿರೋಧಿ ಕ್ಷಿಪಣಿಗಳು, ವಿಮಾನವಾಹಕ ನೌಕೆಗಳು ಹಾಗೂ ಬಾಂಬ್‌ಗಳಿದ್ದವು.

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಇಂತಹ ವಿಶೇಷ ಸಾಮರ್ಥ್ಯಗಳನ್ನು ಹೊಂದಿರುವ ಯುದ್ಧನೌಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸುತ್ತಿರುವುದಾಗಿ ಭಾರತೀಯ ನೌಕಾಪಡೆ ನಿನ್ನೆ ಪ್ರಕಟಿಸಿದೆ. ಈ ಸಮಾರಂಭವನ್ನು ವಿಶಾಖಪಟ್ಟಣಂನ ನೌಕಾ ನೆಲೆಯಲ್ಲಿ ಆಯೋಜಿಸಲಾಗಿತ್ತು.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಕರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ಸಮಾರಂಭವನ್ನು ಸರಳವಾಗಿ ಆಯೋಜಿಸಲಾಗಿತ್ತು. ಐಎನ್‌ಎಸ್ ರಜಪೂತ್ ಯುದ್ಧನೌಕೆಯಲ್ಲಿದ್ದನೌಕಾ ಧ್ವಜವನ್ನು ಇಂದು ಸೂರ್ಯಾಸ್ತದ ಸಮಯದಲ್ಲಿ ಇಳಿಸಲು ನಿರ್ಧರಿಸಲಾಗಿದೆ.

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಸೇವೆಯಿಂದ ಬಿಡುಗಡೆಯಾಗುವ ಮೂಲಕ ಐಎನ್ಎಸ್ ರಜಪೂತ್ ಇತಿಹಾಸದ ಪುಟ ಸೇರಿದೆ. ರಷ್ಯಾದ ಕಾಶಿನ್ ಯುದ್ಧನೌಕೆಯನ್ನು 1980ರ ಮೇ 4ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಈ ಯುದ್ಧನೌಕೆಯನ್ನು ಆಗ ರಷ್ಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಐ.ಕೆ. ಗುಜ್ರಾಲ್'ರವರು ಬರ ಮಾಡಿಕೊಂಡಿದ್ದರು. ಈ ಯುದ್ಧನೌಕೆಯಲ್ಲಿ ಇದುವರೆಗೆ 31 ಕ್ಯಾಪ್ಟನ್'ಗಳು ಕಾರ್ಯ ನಿರ್ವಹಿಸಿದ್ದಾರೆ.

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಈ ಯುದ್ಧನೌಕೆಯು 7,87,194 ನಾಟಿಕಲ್ ಮೈಲುಗಳಷ್ಟು ದೂರ ಸಂಚರಿಸಿದೆ. ಈ ದೂರವು ಭೂಮಿಯಿಂದ ಚಂದ್ರನ ನಡುವಿನ ಅಂತರಕ್ಕಿಂತ 3.8 ಪಟ್ಟು ಹೆಚ್ಚಾಗಿದೆ. ಅದೇ ರೀತಿ ಜಗತ್ತಿನಾದ್ಯಂತದ ಕಕ್ಷೆಗಳ 36.5 ಪಟ್ಟು ಹೆಚ್ಚಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಐಎನ್ಎಸ್ ರಜಪೂತ್ ವಿವಿಧ ಕಾರ್ಯಾಚರಣೆಗಳಲ್ಲಿ ಸಹ ಭಾಗವಹಿಸಿತ್ತು. ಐಎನ್ಎಸ್ ರಜಪೂತ್, ಐಪಿಕೆಎಫ್ (ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸಸ್), ಆಪರೇಷನ್ ಕ್ಯಾಕ್ಟಸ್ (ಮಾಲ್ಡೀವ್ಸ್‌ನಲ್ಲಿ ಒತ್ತೆಯಾಳುಗಳನ್ನು ರಕ್ಷಿಸುವುದು) ಹಾಗೂ ಆಪರೇಷನ್ ಕ್ರೌಸ್ನೆಸ್ಟ್‌ನಂತಹ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು.

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಈ ಯುದ್ಧ ನೌಕೆಯು ವಿವಿಧ ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹ ಭಾಗಿಯಾಗಿತ್ತು. ಐಎನ್‌ಎಸ್ ರಜಪೂತ್ 1999ರ ಒಡಿಶಾದ ಚಂಡಮಾರುತದ ಸಮಯದಲ್ಲಿ, ಸುನಾಮಿ ಹಾನಿಯ ಸಮಯದಲ್ಲಿ ಹಾಗೂ ಹೆಚ್‌ಎಡಿಆರ್ ಕಾರ್ಯಾಚರಣೆಯಲ್ಲಿ, ವಿಪತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ವಿವಿಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಐಎನ್ಎಸ್ ರಜಪೂತ್ 41 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿದೆ. ಈ ಸುದ್ದಿ ಈ ಯುದ್ಧನೌಕೆಯಲ್ಲಿ ಕೆಲಸ ಮಾಡಿದವರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ದುಃಖ ತಂದಿದೆ.

41 ವರ್ಷಗಳ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಐಎನ್ಎಸ್ ರಜಪೂತ್

ಈ ಸಮಾರಂಭದ ಸವಿನೆನಪಿಗಾಗಿ ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್'ರವರು ವಿಶೇಷ ಪೋಸ್ಟ್‌ಕಾರ್ಡ್ ಬಿಡುಗಡೆಗೊಳಿಸಿದರು. ಈ ಯುದ್ಧನೌಕೆಯ ಮೊದಲ ಕಮಾಂಡರ್ ಕ್ಯಾಪ್ಟನ್ ಗುಲಾಬ್ ಮೋಹನ್ ಲಾಲ್ ಹಿರಾನಂದಾನಿ. ಅವರ ನಂತರ ಒಟ್ಟು 31 ಕಮಾಂಡರ್‌ಗಳು ಕಾರ್ಯ ನಿರ್ವಹಿಸಿದ್ದಾರೆ.

Most Read Articles

Kannada
English summary
INS Rajput decommissioned after 41 years of service. Read in Kannada.
Story first published: Saturday, May 22, 2021, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X