ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಭಾರತೀಯ ನೌಕಾಪಡೆಯಲ್ಲಿ ಶೌರ್ಯ ಹಾಗೂ ಶಕ್ತಿಯನ್ನು ಪ್ರದರ್ಶಿಸಿದ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ 1997 ರಲ್ಲಿ ನೌಕಾಪಡೆಯಿಂದ ನಿವೃತ್ತಿಗೊಂಡಿತು. ಈಗ ಮತ್ತೊಮ್ಮೆ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ನೌಕಾಪಡೆಗಾಗಿ ನಿರ್ಮಿಸಲಾಗಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಈ ಮೂಲಕ ಐಎನ್ಎಸ್ ವಿಕ್ರಾಂತ್ ಶೀಘ್ರದಲ್ಲೇ ಭಾರತೀಯ ಸಮುದ್ರದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಲಿದೆ. ವಿಶೇಷವೆಂದರೆ ಈ ಹೊಸ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಅನ್ನು ಭಾರತದಲ್ಲಿ ನಿರ್ಮಿಸಲಾಗಿದ್ದು, 50 ವರ್ಷಗಳ ನಂತರ ಮೊದಲ ಬಾರಿಗೆ ಸಮುದ್ರದಲ್ಲಿ ಪರೀಕ್ಷಾರ್ಥವಾಗಿ ಕಳುಹಿಸಲಾಗಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಹಳೆಯ ಐಎನ್ಎಸ್ ವಿಕ್ರಾಂತ್ 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಬಗ್ಗೆ ನೌಕಾಪಡೆಯ ವಕ್ತಾರರು ಟ್ವೀಟ್‌ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. #1971 ರ ಯುದ್ಧದ ವಿಜಯದಲ್ಲಿ ಐಎನ್ಎಸ್ ವಿಕ್ರಾಂತ್ ಮುಂಚೂಣಿಯಲ್ಲಿದ್ದು ಪ್ರಮುಖ ಪಾತ್ರ ವಹಿಸಿತ್ತು.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಈ ಯುದ್ಧದ 50 ನೇ ವಾರ್ಷಿಕೋತ್ಸವದ ದಿನದಂದು ಭಾರತದ ಹೆಮ್ಮೆಯ #ವಿಕ್ರಾಂತ್ ಮರು ಹುಟ್ಟು ಪಡೆದಿದೆ. ಈ ದಿನ ನಿಜಕ್ಕೂ ಐತಿಹಾಸಿಕವಾಗಿದೆ. ಐಎನ್ಎಸ್ ವಿಕ್ರಾಂತ್ ಇಂದು ತನ್ನ ಮೊದಲ ಸಮುದ್ರ ಪರೀಕ್ಷಾರ್ಥದ ಭಾಗವಾಗಿ ನೌಕಾಯಾನ ಮಾಡಿದೆ ಎಂದು ಟ್ವೀಟ್'ನಲ್ಲಿ ಹೇಳಲಾಗಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಐಎನ್ಎಸ್ ವಿಕ್ರಾಂತ್ ಭಾರತದಲ್ಲಿ ವಿನ್ಯಾಸಗೊಳಿಸಿದ ಹಾಗೂ ನಿರ್ಮಿಸಿದ ಅತಿದೊಡ್ಡದಾದ ಹಾಗೂ ಅತ್ಯಂತ ಸಂಕೀರ್ಣವಾದ ಯುದ್ಧನೌಕೆಯಾಗಿದೆ. ಇನ್ನು ಮುಂದೆ ಹೆಚ್ಚು ಯುದ್ಧ ನೌಕೆಗಳು ಬರಲಿವೆ ಎಂದು ಟ್ವೀಟ್'ನಲ್ಲಿ ಪೋಸ್ಟ್ ಮಾಡಲಾಗಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ನೌಕಾಪಡೆ, ಭಾರತವು ಅತ್ಯಾಧುನಿಕ ವಿಮಾನ ವಾಹಕ ನೌಕೆಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸುವ, ನಿರ್ಮಿಸುವಹಾಗೂ ಸಂಯೋಜಿಸುವ ಸಾಮರ್ಥ್ಯವನ್ನು ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಸೇರಿಕೊಂಡಿದೆ ಎಂದು ಹೇಳಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಎಲ್ಲಾ ಮಧ್ಯಸ್ಥಗಾರರ ಸಮರ್ಪಿತ ಪ್ರಯತ್ನಗಳಿಂದಾಗಿ ಕೋವಿಡ್ 19 ನಿಂದ ಎದುರಾಗಿದ್ದ ಸವಾಲುಗಳ ನಡುವೆಯೂ ಈ ಮಹಾನ್ ಕಾರ್ಯವನ್ನು ಸಾಧಿಸಲು ಸಾಧ್ಯವಾಗಿದೆ ಎಂದು ನೌಕಾ ಪಡೆ ಹೇಳಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಚಿತ್ರ ಕೃಪೆ: ಆಡಮ್ ಕೋನ್ - ವೀಕಿ ಕಾಮನ್ಸ್

ಐಎನ್ಎಸ್ ವಿಕ್ರಾಂತ್ ನೌಕೆಯ ಮೊದಲ ಸಮುದ್ರ ಪರೀಕ್ಷಾರ್ಥವು ಸ್ವಾವಲಂಬಿ ಭಾರತಕ್ಕೆ ಅಚಲವಾದ ಬದ್ಧತೆಯ ನಿಜವಾದ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಚಿತ್ರ ಕೃಪೆ: ಅಡ್ಮಿರಲ್ ಅರುಣ್ ಪ್ರಕಾಶ್ - ವೀಕಿ ಕಾಮನ್ಸ್

ಈ ಐತಿಹಾಸಿಕ ಸಾಧನೆಯು ಎಲ್ಲಾ ಪಾಲುದಾರರ ನಿಜವಾದ ಸಮರ್ಪಣೆ ಹಾಗೂ ಬದ್ಧತೆಯಿಂದ ಸಾಧ್ಯವಾಗಿದೆ. ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣ ಎಂದು ಅವರು ಹೇಳಿದ್ದಾರೆ. ಮುಂದಿನ ವರ್ಷ ಐಎನ್ಎಸ್ ವಿಕ್ರಾಂತ್ ಸೇವೆಗೆ ಬರಬಹುದೆಂದು ರಾಜನಾಥ್ ಸಿಂಗ್ ಜೂನ್ ತಿಂಗಳಿನಲ್ಲಿ ಮಾಹಿತಿ ನೀಡಿದ್ದರು.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಚಿತ್ರ ಕೃಪೆ: ಅರ್ಜುನ್ ಸರೂಪ್ - ವೀಕಿ ಕಾಮನ್ಸ್

ಐಎನ್ಎಸ್ ವಿಕ್ರಾಂತ್ ದೇಶದ ನೌಕಾ ಶಕ್ತಿಗೆ ಸುಧಾರಿತ ಯುದ್ಧ ಸಾಮರ್ಥ್ಯ, ಶ್ರೇಣಿ ಹಾಗೂ ಬಹುಮುಖತೆಯನ್ನು ಸೇರಿಸುತ್ತದೆ. ಐಎನ್ಎಸ್ ವಿಕ್ರಾಂತ್ ರಷ್ಯಾ ನಿರ್ಮಿತ 24 ಮಿಗ್ -29 ಫೈಟರ್ ಜೆಟ್ ಗಳೊಂದಿಗೆ ಕಾರ್ಯ ನಿರ್ವಹಿಸಲಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಚಿತ್ರ ಕೃಪೆ: ಅರ್ಜುನ್ ಸರೂಪ್ - ವೀಕಿ ಕಾಮನ್ಸ್

ವಿಶೇಷವೆಂದರೆ ಇವು ಯುದ್ಧ ವಿಮಾನಗಳಾಗಿದ್ದು, ಇವುಗಳನ್ನು ಈಗಾಗಲೇ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗಿದೆ. ಐಎನ್ಎಸ್ ವಿಕ್ರಮಾದಿತ್ಯ ಸದ್ಯಕ್ಕೆ ಭಾರತೀಯ ನೌಕಾ ಪಡೆಯಲ್ಲಿರುವ ಏಕೈಕ ವಿಮಾನ ವಾಹಕ ನೌಕೆಯಾಗಿದೆ.

ಮೊದಲ ಸಮುದ್ರ ಪರೀಕ್ಷಾರ್ಥವನ್ನಾರಂಭಿಸಿದ ಐಎನ್ಎಸ್ ವಿಕ್ರಾಂತ್

ಚಿತ್ರ ಕೃಪೆ: ಇಂಡಿಯನ್ ನೇವಿ - ವೀಕಿ ಕಾಮನ್ಸ್

ಮುಂದಿನ ವರ್ಷ ದೇಶಿ ನಿರ್ಮಿತ ವಿಮಾನ ವಾಹಕ ನೌಕೆಯನ್ನು ಆರಂಭಿಸುವುದು ಭಾರತದ 75 ವರ್ಷಗಳ ಸ್ವಾತಂತ್ರ್ಯಕ್ಕೆ ನೀಡುವ ಸೂಕ್ತವಾದ ಗೌರವವಾಗಿದೆ ಎಂದು ರಾಜನಾಥ್ ಹೇಳಿದ್ದಾರೆ.

Most Read Articles

Kannada
English summary
Ins vikrant aircraft carrier goes for sea trial details
Story first published: Wednesday, August 4, 2021, 19:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X