ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯು ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಬಲವನ್ನು ಹೆಚ್ಚಿಸಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ಭಾರತೀಯ ನೌಕಾಪಡೆಗೆ ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯನ್ನು ಹಸ್ತಾಂತರಿಸಲಿದ್ದಾರೆ.

Recommended Video

India’s First Commercial EV With A Manual Gearbox — ಎಕ್ಸ್‌ಕ್ಲೂಸಿವ್ ಡ್ರೈವ್ | Log9 & Northway

ಇಲ್ಲಿಯವರೆಗೆ ಯುಎಸ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ನಿರ್ಮಿಸಿವೆ. ಈ ಪಟ್ಟಿಗೆ ಈಗ ಭಾರತ ಸೇರ್ಪಡೆಯಾಗಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿಕೊಂಡಿರುವುದು ಹೆಮ್ಮೆಯ ಸಂಗತಿ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಇದು ಭಾರತದಲ್ಲಿ ನಿರ್ಮಾಣವಾಗಿರುವ ಎರಡನೇ ವಿಮಾನವಾಹಕ ನೌಕೆಯಾಗಿದೆ. ಈ ಹಡಗಿಗೆ ಐಎನ್‌ಎಸ್ ವಿಕ್ರಾಂತ್ ಎಂದೂ ಹೆಸರಿಡಲಾಗಿದೆ. 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಹಡಗನ್ನು ನಿರ್ಮಿಸಲಾಗಿದೆ. ಈ ಹಡಗಿನ ನಿರ್ಮಾಣಕ್ಕಾಗಿ ಪ್ರತಿಯೊಂದು ಘಟಕವನ್ನು ಭಾರತದ ಪ್ರತಿಯೊಂದು ರಾಜ್ಯದಿಂದ ಸಂಗ್ರಹಿಸಲಾಗಿದೆ. ಈ ಹಡಗಿನ ನಿರ್ಮಾಣದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪಾಲು ಇದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಪ್ರಸ್ತುತ ಭಾರತವು ತನ್ನ ಏಕೈಕ ವಿಮಾನವಾಹಕ ನೌಕೆಯಾಗಿ INS ವಿಕ್ರಮಾದಿತ್ಯವನ್ನು ಹೊಂದಿದೆ. ಈ ಹಡಗನ್ನು ರಷ್ಯಾದಲ್ಲಿ ನಿರ್ಮಿಸಲಾಗಿದೆ. ಹಡಗು ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಭದ್ರತಾ ಕರ್ತವ್ಯದಲ್ಲಿದೆ. ಪ್ರಸ್ತುತ ಕೊಚ್ಚಿಯಲ್ಲಿ ನಿರ್ಮಾಣ ಹಂತದಲ್ಲಿರುವ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಈ ಹಡಗು 2,300 ವಿಭಾಗಗಳನ್ನು ಹೊಂದಿದ್ದು, ಒಂದೇ ಸಮಯದಲ್ಲಿ ಒಟ್ಟು 1,700 ಜನರು ಪ್ರಯಾಣಿಸಬಹುದು. ಅಷ್ಟೇ ಅಲ್ಲ ಮಹಿಳಾ ಅಧಿಕಾರಿಗಳಿಗೆ ತಂಗಲು ಹಡಗಿನಲ್ಲಿ ಸುರಕ್ಷಿತ ಸ್ಥಳವೂ ಇದೆ. ಹಡಗಿನ ಒಟ್ಟು ಉದ್ದ 262 ಮೀಟರ್, ಅಗಲ 62 ಮೀಟರ್ ಮತ್ತು ಎತ್ತರ 59 ಮೀಟರ್. ಹಡಗು 4 ಗ್ಯಾಸ್ ಟರ್ಬೈನ್‌ಗಳನ್ನು ಹೊಂದಿದ್ದು, ಒಟ್ಟು 88 ಮೆಗಾವ್ಯಾಟ್ ಶಕ್ತಿ ಹೊಂದಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಇದು ಒಂದೇ ಪ್ರಯಾಣದಲ್ಲಿ 7,500 ನಾಟಿಕಲ್ ಮೈಲುಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಹಡಗಿನ ಒಟ್ಟು ತೂಕ 45,000 ಟನ್. ಕಳೆದ ವರ್ಷ ಆಗಸ್ಟ್‌ನಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತ್ತು. ಅಂದಿನಿಂದ ಪರೀಕ್ಷೆಗಳು ನಡೆಯುತ್ತಿವೆ. ನೌಕಾ ಪ್ರಯೋಗಗಳು ಮತ್ತು ವಾಯುಪಡೆಯ ಪ್ರಯೋಗಗಳು ಪೂರ್ಣಗೊಂಡಿದ್ದು, ಇದೀಗ ದೇಶಕ್ಕೆ ಸೇವೆ ಸಲ್ಲಿಸಲು ಸಿದ್ಧವಾಗಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಹಡಗಿನಲ್ಲಿ ಒಟ್ಟು 30 ಫೈಟರ್ ಜೆಟ್‌ಗಳಿಗೆ ಸ್ಥಳಾವಕಾಶವಿದೆ. ಇದರಲ್ಲಿ MiG-29K ಫೈಟರ್ ಜೆಟ್ ಕೂಡ ಸೇರಿದೆ. ಇದರಲ್ಲಿ ಹೆಲಿಕಾಪ್ಟರ್‌ಗಳನ್ನೂ ಇಳಿಸಬಹುದು. ಬೋಯಿಂಗ್ ಮತ್ತು ಡಸ್ಸಾಲ್ಟ್ ವಿಮಾನಗಳನ್ನು ಅದರ ಮೇಲೆ ಇಳಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಇತ್ತೀಚೆಗೆ ಚೀನಾ ತನ್ನ ಕಡಲ ಗಡಿಯನ್ನು ವಿಸ್ತರಿಸುತ್ತಿದೆ. ಅದರಲ್ಲೂ ಆಫ್ರಿಕಾದಲ್ಲಿ ಆ ದೇಶದ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನೌಕಾನೆಲೆ ಸ್ಥಾಪಿಸಿದೆ. ಅಲ್ಲಿ ತನ್ನ ಯುದ್ಧನೌಕೆಗಳನ್ನೂ ನಿಲ್ಲಿಸಿದೆ. ಈ ಸಂದರ್ಭದಲ್ಲಿ, ಭಾರತದ ಜಲ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸಲು ಭಾರತ ಸರಿಯಾದ ಸಮಯದಲ್ಲಿ ವಿಕ್ರಾಂತ್ ಹಡಗನ್ನು ನಿರ್ಮಿಸಿದೆ. ಇದು ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ನೌಕಾಪಡೆಯನ್ನಾಗಿ ಮಾಡಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ವಿದ್ಯಾದರ್ ಹರ್ಕೆ ಅವರನ್ನು ಈ ಹಡಗಿನ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ. ಈ ಹಡಗನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಆ ದಿನದಿಂದ ಈ ಬೃಹತ್ ನೌಖಕೆಯು ತನ್ನ ಕೆಲಸವನ್ನು ಪ್ರಾರಂಭಿಸಿ ದೇಶ ಸೇವೆ ಮಾಡಲಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ವಿಕ್ರಾಂತ್ ಇತಿಹಾಸ

ಭಾರತವನ್ನು ರಕ್ಷಿಸುವ ಪ್ರಮುಖ ಹಡಗು ಐಎನ್ಎಸ್ ವಿಕ್ರಾಂತ್ ಆಗಿದ್ದು, ಈ ಹಡಗನ್ನು ಭಾರತದ ಸಮುದ್ರ ಗಡಿಗಳನ್ನು ರಕ್ಷಿಸಲು 1961 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಈ ಹಡಗು ಭಾರತದಲ್ಲಿ 1945 ರಲ್ಲಿ ಬ್ರಿಟಿಷ್ ಸರ್ಕಾರದಿಂದ ತಯಾರಿಸಲ್ಪಟ್ಟಿದೆ. ಆದರೆ ಯಾವುದೇ ಕಾರ್ಯಕ್ಕೆ ಇದನ್ನು ಬಳಸಲಿಲ್ಲ. 1957 ರಲ್ಲಿ, ಬ್ರಿಟಿಷ್ ಸರ್ಕಾರವು ಈ ಹಡಗನ್ನು ಭಾರತಕ್ಕೆ ಮಾರಾಟ ಮಾಡಿತು.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

1961 ರಿಂದ 1997 ರವರೆಗೆ, ಹಡಗು ಹಿಂದೂ ಮಹಾಸಾಗರದ ರಕ್ಷಣೆಯಲ್ಲಿತ್ತು. ಈ ಹಡಗಿನ ಪರ್ಯಾಯ ಹೆಸರು ಸಂಸ್ಕೃತದಲ್ಲಿ ಜಯಮ ಸಂಯುಕ್ತ ಸ್ಪಧ. ಇದರರ್ಥ ವಿರೋಧಿಗಳ ನಾಶಕ. ಅದಕ್ಕೆ ತಕ್ಕ ಹಾಗೆ ಈ ಹಡಗು 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಶತ್ರುಗಳಿಗೆ ಭಾರಿ ಸವಾಲನ್ನು ನೀಡಿತ್ತು. ಅನೇಕ ಬಾರಿ ಶತ್ರುಗಳ ಯೋಜನೆಗಳು ವಿಫಲವಾದವು. ಈ ಹಡಗನ್ನು ನೋಡಿ ಶತ್ರುಗಳು ಭಯದಿಂದ ನಡುಗಿದ್ದರು.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

1997 ರಲ್ಲಿ, ಈ ಹಡಗು ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ನಿವೃತ್ತಿ ಪಡೆಯಿತು. ಈ ಸಂದರ್ಭದಲ್ಲಿ 2014 ರಲ್ಲಿ, ಈ ಹಡಗನ್ನು ತುಂಡುಗಳಾಗಿ ವಿಂಗಡಿಸಿ ಅದರ ಬಿಡಿ ಭಾಗಗಳನ್ನು ಸ್ಕ್ರ್ಯಾಪ್ ಆಗಿ ಇತರ ಉದ್ದೇಶಗಳಿಗಾಗಿ ಬಳಸಲಾಯಿತು. ಈ ಸ್ಕ್ರ್ಯಾಪ್‌ಗಳಿಂದಲೇ ವಿಕ್ರಾಂತ್ ಬೈಕ್ ತಯಾರಿಸಿದ್ದೇವೆ ಎಂದು ಬಜಾಜ್ ಹೇಳಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಇದಾದ ಬಳಿಕ ಭಾರತೀಯ ನೌಕಾಪಡೆಯು ಸಂಪೂರ್ಣವಾಗಿ ಭಾರತದಲ್ಲಿಯೇ ವಿಮಾನವಾಹಕ ನೌಕೆಯನ್ನು ಸಿದ್ಧಪಡಿಸಲು ನಿರ್ಧರಿಸಿತು. ಇದಕ್ಕಾಗಿ ಭಾರತೀಯ ನೌಕಾಪಡೆ ಮತ್ತು ಕೊಚ್ಚಿ ಶಿಪ್ ಬಿಲ್ಡಿಂಗ್ ಕಂಪನಿ ನಡುವೆ 2007ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಅದರಂತೆ 2009ರಲ್ಲಿ ಈ ಹಡಗಿನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಇದಾದ ಸುಮಾರು 13 ವರ್ಷಗಳ ನಂತರ ಈ ಹಡಗು ಸೇವೆಗೆ ಸಿದ್ಧವಾಗಿದೆ. ಇದಕ್ಕಾಗಿ ಪ್ರಾಯೋಗಿಕ ಚಾಲನೆಯೂ ಯಶಸ್ವಿಯಾಗಿ ಮುಗಿದಿದ್ದು, ಇದೀಗ ಹಡಗು ದೇಶಕ್ಕೆ ಸೇವೆ ಸಲ್ಲಿಸಲು ಸಿದ್ಧವಾಗಿದೆ.

ಚೀನಾ, ಪಾಕಿಸ್ಥಾನಕ್ಕೆ ನಡುಕ ಹುಟ್ಟಿಸಲು ಸಜ್ಜಾದ INS ವಿಕ್ರಾಂತ್: ಸೆ. 2 ರಂದು ನೌಕಾಪಡೆಗೆ ಸೇರ್ಪಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇಲ್ಲಿಯವರೆಗೆ ಯುಎಸ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ನಿರ್ಮಿಸಿವೆ. ಈ ಪಟ್ಟಿಗೆ ಈಗ ಭಾರತ ಸೇರ್ಪಡೆಯಾಗಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿಕೊಂಡಿರುವುದು ಹೆಮ್ಮೆಯ ಸಂಗತಿ.

Article Published On: Saturday, August 27, 2022, 10:57 [IST]
English summary
INS Vikrant to be inducted into Indian Navy on September 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+