ದುಬಾರಿ ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ಇನ್‌ಸ್ಟಾಗ್ರಾಮ್ ಸೆಲಬ್ರಿಟಿ

ಇಂದು ಸೋಷಿಯಲ್ ಮೀಡಿಯಾಗಳ ಯುಗ. ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿ ಹಲವರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಹೆಚ್ಚಿನ ಜನರು ವ್ಲಾಗ್ ಮಾಡುವುದನ್ನು ಫುಲ್ ಟೈಮ್ ಕೆಲಸವಾಗಿ ಮಾಡುತ್ತಿದ್ದಾರೆ. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಆದಾಯದ ಮೂಲವಾಗಿದೆ. ವ್ಲಾಗರ್‌ಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸೋಷಿಯಲ್ ಮೀಡಿಯಾಗಳೇ ಆದಾಯದ ಮೂಲವಾಗಿದೆ. ಅದರಲ್ಲೂ ಪುಡ್ ಸಂಬಂಧಿಸಿದ ವೀಡಿಯೊಗಳನ್ನು ಮಾಡುವವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುತ್ತಾರೆ. ಜನಪ್ರಿಯ ಪುಡ್ ವ್ಲಾಗ್ ಚಾನೆಲ್ ಇದೆ, ಅದು ಮ್ಯಾಕರಾನ್ ಗಾಲ್ ಆಗಿದೆ.

ಮ್ಯಾಕರಾನ್ ಗಾಲ್ ಚಾನೆಲ್ ವ್ಲಾಗರ್ ಹೆಸರು ಕೀರ್ತಿ ನಾಯರ್ (Keerthi Nair) ಆಗಿದೆ. ಇವರು ಇನ್‌ಸ್ಟಾಗ್ರಾಂ ಪೇಜ್ ಮೂಲಕ ಆಹಾರ ಪ್ರಿಯರ ಹೆಚ್ಚು ಸೆಳೆಯುತ್ತಿದ್ದಾರೆ. ಇಷ್ಟೊಂದು ಫಾಲವರ್ಸ್ ಹೊಂದಿದ್ದರೂ, Macaron Gal ಪೇಜ್ ನಿಂದ ಯಾವುದೇ ಆದಾಯವಿಲ್ಲ. ಆದರೆ ಪೇಯ್ಡ್ ಪ್ರಮೋಷನ್ ದಿಂದ ಹಣ ಮಾಡುತ್ತಾರೆ. ಬಾಲ್ಯದಿಂದಲೂ ಉತ್ಸಾಹದಿಂದ ಅಡುಗೆ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಏನೇ ಆಗಲಿ ಇವರ ಪೇಜ್ ನೋಡಿದರೆ ಎಲ್ಲರ ಬಾಯಲ್ಲಿ ನೀರೂರುವುದು ಖಚಿತ.

Celebrity Keerthi Nair Buys Audi Q8 e-tron

ಕೀರ್ತಿ ನಾಯರ್, ಮ್ಯಾಕರಾನ್ ಗಾಲ್ ತಮ್ಮ ಹೆಚ್ಚು ಫಾಲವರ್ಸ್ ನಿಂದ ಹೆಚ್ಚು ಖುಷಿಯಾಗಿದ್ದಾರೆ. ಇದೀಗ ಈ ವ್ಲಾಗರ್ ಅವರು ಹೊಸ ಆಡಿ ಕ್ಯೂ8 ಇ-ಟ್ರಾನ್ (Audi Q8 e-tron) ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ದುಬಾರಿ ಆಡಿ ಎಸ್‍ಯುವಿಯ ಬೆಲೆಯು ರೂ.1.14 ಕೋಟಿಯಾಗಿದೆ. ವಿವಿಧ ರೂಪಾಂತರಗಳಲ್ಲಿ ಬರುವ ಇವಿಯ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಇಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕ್ಯೂ8 ಇ-ಟ್ರಾನ್ ಎಸ್‍ಯುವಿಯು ಎಸ್‌ಯುವಿ ಮತ್ತು ಸ್ಪೋರ್ಟ್‌ಬ್ಯಾಕ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಚಿತ್ರಗಳನ್ನು ನೋಡಿದಾಗ ಕೀರ್ತಿ ಅವರ ಗ್ಯಾರೇಜ್‌ಗೆ ಬಂದಿರುವುದು ಎಸ್‌ಯುವಿ ಮಾದರಿ ಎಂದು ಹೇಳಲಾಗುತ್ತಿದೆ. ಈ ಆಡಿ ಕ್ಯೂ8 ಇ-ಟ್ರಾನ್ ಎಸ್‍ಯುವಿಯು 50 ಮತ್ತು 55 ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಮೊದಲನೆಯದು 491 ಕಿ.ಮೀ ರೇಂಜ್ ಅನ್ನು ಹೊಂದಿದೆ.

Celebrity Keerthi Nair Buys Audi Q8 e-tron

ಆಡಿ ಕ್ಯೂ8 ಇ-ಟ್ರಾನ್ ಎಸ್‍ಯುವಿಯು 22kW AC ಚಾರ್ಜರ್ ಅನ್ನು ಹೊಂದಿದೆ. ಇದು 170kW DC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವುದರಿಂದ ಚಾರ್ಜಿಂಗ್ ಬಗ್ಗೆ ಚಿಂತಿಸಬೇಕಾಗಿಲ್ಲ. ಎಸಿ ಚಾರ್ಜರ್ ಅನ್ನು ಬಳಸಿಕೊಂಡು ಸುಮಾರು 4.45 ಗಂಟೆಗಳಲ್ಲಿ Q8 e-tron 50 ಆವೃತ್ತಿಯು 0-100 ಪ್ರತಿಶತದಿಂದ ಚಾರ್ಜ್ ಮಾಡಬಹುದೆಂದು ಆಡಿ ಹೇಳಿಕೊಂಡಿದೆ. ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ 55 ರೂಪಾಂತರವು ಸಂಪೂರ್ಣವಾಗಿ ಚಾರ್ಜ್ ಮಾಡಲು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಈ ಹೊಸ ಆಡಿ ಕ್ಯೂ8 ಇ-ಟ್ರಾನ್ ಎಸ್‍ಯುವಿಯು ಕ್ರೋನೋಸ್ ಗ್ರೇ, ಗ್ಲೇಸಿಯರ್ ವೈಟ್, ಮೈಥೋಸ್ ಬ್ಲ್ಯಾಕ್, ಪ್ಲಾಸ್ಮಾ ಬ್ಲೂ, ಸೋನಿರಾ ರೆಡ್, ಮ್ಯಾಗ್ನೆಟ್ ಗ್ರೇ, ಸಿಯಾಮ್ ಬೀಜ್, ಮಡೈರಾ ಬ್ರೌನ್ ಮತ್ತು ಮ್ಯಾನ್‌ಹ್ಯಾಟನ್ ಗ್ರೇ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಮ್ಯಾಕರಾನ್ ಗಾಲ್ ಅವರು ಮ್ಯಾನ್‌ಹ್ಯಾಟನ್ ಗ್ರೇ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆಡಿ ಕ್ಯೂ8 ಇ-ಟ್ರಾನ್ ಎಸ್‍ಯುವಿಯು ಮೆಮೊರಿ ಫಂಕ್ಷನ್ ಮತ್ತು ಮಸಾಜ್ ಫಂಕ್ಷನ್, 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬ್ಯಾಂಗ್ ಮತ್ತು ಒಲುಫ್‌ಸೆನ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ನಾಲ್ಕು-ಝೋನ್ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಕ್ರೂಸ್ ಕಂಟ್ರೋಲ್ ಮತ್ತು TPMS ನಂತಹ ಉತ್ತಮ ಫೀಚರ್ಸ್ ಗಳನ್ನು ಸಹ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 4, 2024, 19:54 [IST]
English summary
Instagram celebrity keerthi nair buys audi q8 e tron electric suv details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+