ಲಾರಿ ಓಡಿಸಿ ಸಂಪಾದಿಸಿದ ದುಡ್ಡಿನಲ್ಲಿ ದುಬಾರಿ ಬೆಲೆಯ ಹೊಸ 'ಮಹೀಂದ್ರಾ ಥಾರ್ ರಾಕ್ಸ್' ಖರೀದಿಸಿದ ದಂಪತಿ!
ದಾಂಪತ್ಯದಲ್ಲಿ ಪತಿ - ಪತ್ನಿ ಅಂದರೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.. ಗಂಡ - ಹೆಂಡತಿ ಸಾಮರಸ್ಯದಿಂದ ಇದ್ದಾರೆ ಮಾತ್ರ ಸುಖ ಸಂಸಾರ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವಾಗಿ ತಮಿಳುನಾಡಿನ ಸೆಂಥಿಲ್ ಕುಮಾರ್ ಹಾಗೂ ರೇವತಿ ದಂಪತಿ ನಿಲ್ಲುತ್ತಾರೆ. ಒಂದು ಕಾಲದಲ್ಲಿ ಜೀವನ ನಡೆಸಲು ತೀರಾ ಕಷ್ಟಪಡುತ್ತಿದ್ದ ಈ ದಂಪತಿ, ಇಂದು ದುಬಾರಿ ಬೆಲೆಯ ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಎಸ್‌ಯುವಿ ಖರೀದಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಸೆಂಥಿಲ್ ಕುಮಾರ್ ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದಾರೆ. ಅವರ ಪತ್ನಿ ರೇವತಿ ಕೂಡ ಪತಿ ನೆರನಿಂದ ವಾಹನ ಚಾಲನೆ ಕಲಿತಿದ್ದು, ಬದುಕಿನ ಬಂಡಿ ಎಳೆಯಲು ಪಿಕ್ಅಪ್ ಟ್ರಕ್ ಓಡಿಸುತ್ತಿದ್ದಾರೆ. ಈ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡುವ ಹವ್ಯಾಸ ರೂಡಿಸಿಕೊಂಡಿದ್ದು, 'ಮಾರಿಯಮ್ಮನ್' ಹೆಸರಿನ ಖಾತೆ ಹೊಂದಿದ್ದಾರೆ. ಬರೋಬ್ಬರಿ 2.5 ಲಕ್ಷದಷ್ಟು ಫಾಲೋವರ್‌ಗಳು ಇದ್ದಾರೆ.

ಈ ದಂಪತಿ ತಾವು ಗಳಿಸಿದ ಅಲ್ಪ ಹಣದಲ್ಲಿಯೇ ದೇಶದ ನಾನಾ ಭಾಗದಲ್ಲಿರುವ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಖ್ಯಾತಿ ಗಳಿಸಿದ ಬಳಿಕ, ಟಿವಿ ಶೋನಲ್ಲಿಯೂ ಪಾಲ್ಗೊಂಡಿದ್ದರು. ಮಂಗಳವಾರ ಸೆಂಥಿಲ್ ಕುಮಾರ್ ಹಾಗೂ ರೇವತಿ ದಂಪತಿ ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ನೂತನ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ.
ಹೊಸ ಎಸ್‌ಯುವಿಯನ್ನು ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ವಿತರಣೆ ಪಡೆಯುತ್ತಿಯುವ ವಿಡಿಯೋವನ್ನು ಈ ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್ ಮಾಡಿದ್ದಾರೆ. ನೂತನ 'ಮಹೀಂದ್ರಾ ಥಾರ್ ರಾಕ್ಸ್' ಕೊಂಡುಕೊಂಡಿರುವುದಕ್ಕೆ ನೆಟ್ಟಿಗರಿಂದ ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೆಂಥಿಲ್ ಕುಮಾರ್ ಹಾಗೂ ರೇವತಿ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಸಿಗುವ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ ವಿಶೇಷತೆ ಬಗ್ಗೆ ಹೇಳುವುದಾದರೆ, ಈ ಕಾರು ರೂ.12.99 ರಿಂದ ರೂ.22.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಂಎಕ್ಸ್, ಎಎಕ್ಸ್, ಎಎಕ್ಸ್3ಎಲ್, ಎಂಎಕ್ಸ್1, ಎಂಎಕ್ಸ್3 ಮತ್ತು ಎಂಎಕ್ಸ್5 ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.
ಈ ಥಾರ್ ರಾಕ್ಸ್ 5-ಡೋರ್‌ಗಳನ್ನು ಪಡೆದಿದ್ದು, ಶಕ್ತಿಯುತವಾಗಿರುವ 2.0-ಲೀಟರ್ ಟರ್ಬೊ ಪೆಟ್ರೋಲ್, 2-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 447 ಲೀಟರ್‌ನ ಬೂಟ್ ಸ್ಪೇಸ್‌ನ್ನು ಪಡೆದಿದೆ.
ನೂತನ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್‌ರೂಫ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications