ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

By Nagaraja

ಇದು ಬರಿ ಹಡಗಲ್ಲ, ಜಗತ್ತಿನ ಅತಿದೊಡ್ಡ ತೇಲುವ ಹಡಗು ಪ್ರೆಲ್ಯೂಡ್ ಅನ್ನು ಬರಿ ಹಡಗು ಎಂದು ಬಣ್ಣಿಸುವುದಕ್ಕಿಂತಲೂ ಮಿಗಿಲಾಗಿ ಇಂದೊಂದು ದ್ವೀಪ ಎಂದು ವ್ಯಾಖ್ಯಾನಿಸಿದರೆ ಹೆಚ್ಚು ಹೊಂದಿಕೆಯಾದಿತು. ಯಾಕೆಂದರೆ ಇದು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಕಡಲಕರೆಯಾಚೆಗಿನ ಸೌಲಭ್ಯಗಳನ್ನು ಹೊಂದಿದೆ.

ಇವನ್ನೂ ಓದಿ: ವಿಶ್ವದ ಅತಿ ದೊಡ್ಡ ಪ್ರಯಾಣಿಕ ಹಡಗು ಯಾವುದು ಗೊತ್ತೇ?

ರಾಯಲ್ ಡಚ್ ಸೆಲ್‌ಗಾಗಿ ದಕ್ಷಿಣ ಕೊರಿಯಾದ ಸ್ಯಾಮಸಂಗ್ ಹೆವಿ ಇಂಡಸ್ಟ್ರೀಸ್‌ನಿಂದ ನಿರ್ಮಿಸಲ್ಪಟ್ಟಿರುವ ಪ್ರೆಲ್ಯೂಡ್ ತೇಲುವ ಹಡಗು 488 ಮೀಟರ್ ಉದ್ದವಿದ್ದು (1601 ಅಡಿ), 74 ಮೀಟರ್ ಅಗಲ (243 ಅಡಿ) ಮತ್ತು ಆರು ಲಕ್ಷಕ್ಕೂ ಹೆಚ್ಚು ಟನ್ ಭಾರ ಹೊಂದಿದೆ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಜಗತ್ತಿನ ಅತಿದೊಡ್ಡ ವಿಮಾನ ಕ್ಯಾರಿಯರ್‌ಗಿಂತಲೂ ಐದು ಪಟ್ಟು ಹೆಚ್ಚು ಭಾರವನ್ನು ಹೊಂದಿರುವ ಪ್ರೆಲ್ಯೂಡ್ ಹಡಗು ನಿರ್ಮಾಣದಲ್ಲಿ 2,60,000 ಟನ್ ಸ್ಟೀಲ್ ಬಳಕೆ ಮಾಡಲಾಗಿದೆ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಜಗತ್ತಿನ ಮೊತ್ತ ಮೊದಲ ಫ್ಲೋಟಿಂಗ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (ಎಫ್‌ಎಲ್‌ಎನ್‌ಜಿ) ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಪ್ರೆಲ್ಯೂಡ್ ಹಡಗನ್ನು 2013 ಡಿಸೆಂಬರ್ ತಿಂಗಳಲ್ಲಿ ಲಾಂಚ್ ಮಾಡಲಾಗಿತ್ತು.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಆಸ್ಟ್ರೇಲಿಯಾ ಕಡಲ ತೀರದಿಂದ 200 ಕೀ.ಮೀ. ದೂರದಲ್ಲಿರುವ ಬ್ರೌಸ್ ಬ್ಯಾಸಿನ್ ಅನಿಲ ಜಾಗದಲ್ಲಿ ನೆಲೆಗೊಳ್ಳಲಿರುವ ಪ್ರೆಲ್ಯೂಡ್ 2017ರ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದೆ. ಅಲ್ಲದೆ 25 ವರ್ಷಗಳ ಕಾಲ ಅಲ್ಲೇ ನೆಲಗೊಳ್ಳುವ ಸಾಮರ್ಥ್ಯ ಹೊಂದಿರಲಿದೆ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ನೀರಿನ ಮೂಲದ ದ್ರವೀಕೃತ ನೈಸರ್ಗಿಕ ಅನಿಲವಾಗಿರುವ ಫ್ಲೋಟಿಂಗ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಅನ್ನು ಇದರಲ್ಲಿ ಉತ್ಪಾದಿಸಲಾಗುವುದು. ಇಂತಹದೊಂದು ನವೀನ ತಂತ್ರಜ್ಞಾನವನ್ನು ಅವಿಷ್ಕರಿಸುವ ಮೂಲಕ ಭಾರಿ ವೆಚ್ಚ ಕಡಿತ ಹಾಗೂ ಕೊಳವೆ ಮಾರ್ಗದ ಉಪಯೋಗವನ್ನು ಕಡಿತ ಮಾಡಲಾಗುವುದು.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಮೈನಸ್ 162 ಡಿಗ್ರಿ ತಾಪಮಾನದಲ್ಲಿ ಇದನ್ನು ತಯಾರಿಸಲಾಗುತ್ತದೆ ಎಂಬುದೇ ಪ್ರಮುಖ ಸವಾಲಿನ ವಿಷಯ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಅಲ್ಲದೆ ವಾರ್ಷಿಕವಾಗಿ 3.6 ಮಿಲಿಯನ್ ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದಿಸುವ ನಿರೀಕ್ಷೆ ಹೊಂದಲಾಗಿದೆ. ಅಂದರೆ ಇದರ ಸ್ಟೋರೆಜ್ ಟ್ಯಾಂಕ್ 175 ಒಲಿಂಪಿಕ್ ಈಜುಕೊಳದಷ್ಟು ಸರಿಸಮಾನವಾಗಿದೆ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಅಂದ ಹಾಗೆ ಪ್ರೆಲ್ಯೂಡ್ ಹಡಗು ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡಗಿಂತಲೂ (1,250 ಅಡಿ) ಹೆಚ್ಚು ಎತ್ತರವನ್ನು ಹೊಂದಿದೆ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಅಷ್ಟೇ ಯಾಕೆ ಪ್ರಸ್ತುತ ಹಡಗು 6,700 ಅಶ್ವಶಕ್ತಿ ಉತ್ಪಾದಿಸಬಲ್ಲ ಮೂರು ಇಂತಹ ಎಂಜಿನ್‌ಗಳು ಇದರಲ್ಲಿರಲಿದೆ.

ಜಗತ್ತಿನ ಅತಿದೊಡ್ಡ ತೇಲುವ ಹಡಗು 'ಪ್ರೆಲ್ಯೂಡ್'

ಈ ಎಲ್ಲದರ ಮುಖಾಂತರ ಜಗತ್ತಿಗೆ ನೈಸರ್ಗಿಕ ಅನಿಲ ರಫ್ತು ಮಾಡುವ ಮಹತ್ತರ ಗುರಿಯನ್ನು ಶೆಲ್ ಹೊಂದಿದೆ.

More from DriveSpark

Article Published On: Friday, September 5, 2014, 10:24 [IST]
English summary
The largest floating vessel in the world has taken to the water for the first time in South Korea. At a length of 1,601 feet, the Prelude, which is owned by Shell, is 150 feet longer than the Empire State Building is high.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+